General Knowledge: ಸಾವೇ ಇಲ್ಲದ ಪ್ರಪಂಚದ ಏಕೈಕ ಪ್ರಾಣಿ ಯಾವುದು ಗೊತ್ತಾ?

General Knowledge: ಜಗತ್ತಿನಲ್ಲಿ ಪ್ರತೀ ಜೀವಿಗೆ ಹುಟ್ಟಿನ ಬೆನ್ನಲ್ಲಿ ಸಾವು ಕೂಡಾ ಖಚಿತ. ಆದ್ರೆ ಎಂದಿಗೂ ಸಾವು ಇರದ ಏಕೈಕ ಪ್ರಾಣಿ ಇದೆ ಅಂದ್ರೆ ನೀವು ನಂಬಲೇ ಬೇಕು. ಹೌದು, ಒಂದು ಸಣ್ಣ ಪ್ರಾಣಿ ಬಹುತೇಕ ಅಮರತ್ವವನ್ನು ಸಾಧಿಸಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕೆಲವು ಪ್ರಶ್ನೆಗಳು ನಿಮಗೆ ಗಾಬರಿ ಗೊಳಿಸಿದರು ಕೂಡಾ ನಂಬಲೇ ಬೇಕು. ಅಲ್ಲದೆ ಇದೊಂದು ಸಾಮಾನ್ಯ ಜ್ಞಾನಕ್ಕೆ (General Knowledge) ಸವಾಲು ನೀಡುವ ಪ್ರಶ್ನೆ ಉತ್ತರವು ಹೌದು. ಬನ್ನಿ ಸಾವು ಕಾಣದ ಪ್ರಾಣಿ ಯಾವುದು, ಇದರ ಹಿನ್ನೆಲೆ ಏನು ಎಂದು ತಿಳಿಯೋಣ.

ವಿಜ್ಞಾನಿಗಳ ಪ್ರಕಾರ ಸಾವು ಇರದ ಜೀವಿಯೇ ವಯಸ್ಸಾದ ಜೆಲ್ಲಿ ಮೀನು. ಪ್ರಾಣಿಶಾಸ್ತ್ರಜ್ಞರು ಇದನ್ನು Turritopsis dohrnii ಎಂದು ಕರೆಯುತ್ತಾರೆ. ಈ ಜೀವಿ ಎಂದಿಗೂ ಸಾಯುವುದಿಲ್ಲ. ಹಾಗಾಗಿ ಅದರ ವಯಸ್ಸನ್ನು ನಿಖರವಾಗಿ ಅಂದಾಜು ಮಾಡಲು ಸಾಧ್ಯವಿಲ್ಲ. ಈ ಪ್ರಾಣಿಯ ವಿಶೇಷತೆ ನೋಡುವುದಾದರೆ ಪ್ರೌಢಾವಸ್ಥೆಯ ಬೆಳೆಯುತ್ತಲೇ ಪ್ರೌಢಾವಸ್ಥೆಗೆ ಬರುತ್ತದೆ. ಇದು ರಿ ಸೈಕಲ್ ತರ ಹೀಗೆಯೇ ಮುಂದುವರಿಯುತ್ತದೆ. ಆದ್ದರಿಂದ ಜೈವಿಕವಾಗಿ ಈ ಜೆಲ್ಲಿ ಮೀನು ಎಂದಿಗೂ ಸಾಯುವುದಿಲ್ಲ. ಇದನ್ನು ಇಮ್ಮಾರ್ಟಲ್ ಜೆಲ್ಲಿಫಿಶ್ ಎಂದೂ ಕೂಡಾ ಕರೆಯುತ್ತಾರೆ.

ನ್ಯಾಷನಲ್ ಜಿಯಾಗ್ರಫಿಕ್ ಸಂಶೋಧಕರ ಪ್ರಕಾರ, ಜೆಲ್ಲಿ ಮೀನುಗಳ ದೇಹದ ಯಾವುದೇ ಭಾಗವು ಗಾಯಗೊಂಡರೆ ಅಥವಾ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಅವು ತಕ್ಷಣವೇ ‘ಪಾಲಿಪ್ ಸ್ಥಿತಿ’ಗೆ ಹೋಗುತ್ತವೆ. ಅಂದರೆ ಅದು ವೃದ್ಧಾಪ್ಯದ ಹಿಮ್ಮುಖ ಕೋರ್ಸ್ ಆಗಿದೆ.

ಜೆಲ್ಲಿ ಮೀನಿನ ಸುತ್ತಲೂ ಲೋಳೆಯ ಪೊರೆಯು ಪಾಲಿಪ್ಸ್ ರೂಪದಲ್ಲಿ ಇರುತ್ತದೆ. ಈ ಪಾಲಿಪ್ ಸ್ಥಿತಿಯಲ್ಲಿ ಮೂರು ದಿನಗಳವರೆಗೆ ಇರುತ್ತವೆ. ಇದು ಅವುಗಳ ವಯಸ್ಸನ್ನು ಕಡಿಮೆ ಮಾಡುತ್ತದೆ. ಈ ಹಂತದಲ್ಲಿ ಜೆಲ್ಲಿ ಮೀನು ದೇಹದ ಎಲ್ಲಾ ಜೀವಕೋಶಗಳನ್ನು ಹೊಸ ಜೀವಕೋಶಗಳಾಗಿ ಪರಿವರ್ತಿಸುತ್ತದೆ ಮತ್ತು ವಯಸ್ಸನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ.

ಮುಖ್ಯವಾಗಿ ಜೆಲ್ಲಿ ಮೀನನ್ನು ದೊಡ್ಡ ಮೀನು ತಿಂದರೆ ಅಥವಾ ಇದ್ದಕ್ಕಿದ್ದಂತೆ ದೊಡ್ಡ ಕಾಯಿಲೆ ಬಂದರೆ ಸಾಯುತ್ತವೆ. ಆದರೆ ವಯಸ್ಸಾದ ಕಾರಣಕ್ಕೆ ಸಾಯುವುದಿಲ್ಲ.

Leave A Reply

Your email address will not be published.