Bus Fare Hike: ಗಣೇಶ ಚತುರ್ಥಿಗೆ ಖಾಸಗಿ ಬಸ್ ಪ್ರಯಾಣ ದರ ಮೂರು ಪಟ್ಟು ಹೆಚ್ಚಳ!
Bus Fare Hike: ಈ ಬಾರಿ ಗಣೇಶನ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಶಾಕಿಂಗ್ ವಿಷಯ ಒಂದು ಕಾದಿದೆ. ಹೌದು, ಖಾಸಗಿ ಬಸ್‌ಗಳು ಗಣೇಶನ ಹಬ್ಬದ ವೇಳೆ ಪ್ರಯಾಣ ದರ ಏರಿಕೆ (Bus Fare Hike) ಮಾಡಿವೆ.
ಈಗಾಗಲೇ ಸರ್ಕಾರ ಹಾಗೂ ಸಾರಿಗೆ ಸಚಿವರ ಸೂಚನೆ ನಡುವೆಯೂ ಬಹಳಷ್ಟು ಖಾಸಗಿ ಬಸ್‌ಗಳ ದರ ಹಬ್ಬದ ಮುನ್ನಾ ದಿನವಾದ ಸೆಪ್ಟಂಬರ್ 5 ಹಾಗೂ 6 ರ ಗುರುವಾರ ಹಾಗೂ ಶುಕ್ರವಾರದಂದು ಮೂರು ಪಟ್ಟು ಹೆಚ್ಚಳವಾಗಿದೆ. ಯಾವುದೇ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಪರಿಶೀಲಿಸಿದರೆ ಅಂದಿಗೆ ಹಾಗೂ ವಾಪಾಸ್ ಬರುವ ಭಾನುವಾರಕ್ಕೆ ಭಾರೀ ಹೆಚ್ಚಳ ಮಾಡಲಾಗಿದೆ.
ಸೆಪ್ಟಂಬರ್ 1ರಿಂದ ನಾಲ್ಕು ದಿನಗಳ ದರವನ್ನು ಪರಿಶೀಲಿಸಿದರೆ ಹಾಗೂ ನಂತರದ ಎರಡು ದಿನ ದರಗಳನ್ನು ಪರಿಶೀಲಿಸಿದರೆ ವ್ಯತ್ಯಾಸ ತಿಳಿಯಲಿದೆ. ಈ ಬಾರಿ ವಾರಾಂತ್ಯದಲ್ಲಿ ಮೂರು ದಿನ ರಜೆ ಬಂದಿರುವ ಕಾರಣದಿಂದ ಬೇಡಿಕೆ ಹೆಚ್ಚಾಗಿದೆ.
ಉದಾಹರಣೆಗೆ ಬೆಂಗಳೂರಿನಿಂದ ಮಂಗಳೂರು, ಹುಬ್ಬಳ್ಳಿ., ಬೆಳಗಾವಿ, ಕಲಬುರಗಿ ಟ್ರಾವೆಲ್ಸ್‌ಗಳಲ್ಲಿ ಸಾಮಾನ್ಯ ದಿನಗಳಲ್ಲಿ 500 ರೂ.ಗಳಿಂದ 1000 ರೂ. ರಷ್ಟಿರುವ ದರ ಏಕಾಏಕಿ 1500 ದಿಂದ 3000ಕ್ಕೆ ಏರಿಕೆಯಾಗುತ್ತದೆ.
ಆದ್ರೆ ಖಾಸಗಿ ಬಸ್ ಏಜೆಂಟರ ಪ್ರಕಾರ ವರ್ಷವಿಡೀ ನಾವೂ ಬಸ್ ಓಡಿಸುತ್ತೇವೆ. ವರ್ಷದಲ್ಲ ಪ್ರಮುಖ ಎನ್ನುವ ಹತ್ತು ಹಬ್ಬಗಳಿಗೆ ಜನ ಊರಿಗೆ ಹೋಗುವುದುಂಟು. ಈ ಅವಧಿಯಲ್ಲಿ ಕೊಂಚ ದರ ಏರಿಕೆ ಮಾಡುವುದು ಮೊದಲಿನಿಂದಲೂ ನಡೆದಿದೆ. ಆಗ ಬೇಡಿಕೆಯೂ ಹೆಚ್ಚಿರುತ್ತದೆ. ಹಾಗೆಂದು ಉಳಿದ ದಿನಗಳಲ್ಲಿ ಕಡಿಮೆ ಸೀಟುಗಳಲ್ಲಿಯೇ ಹೋಗಿರುತ್ತೇವೆ ಎಂದು ಖಾಸಗಿ ಬಸ್ ಏಜೆಂಟರು ದರ ಏರಿಕೆ ಸಮರ್ಥಿಸಿಕೊಳ್ಳುತ್ತಾರೆ.
ಇನ್ನು ಖಾಸಗಿ ಬಸ್ ಗಳು ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರಯಾಣದರವನ್ನು ಹೆಚ್ಚಳ ಮಾಡಿದರೆ ಬಸ್‌ಗಳ ಲೈಸೆನ್ಸ್ ರದ್ದುಗೊಳಿಸಲು ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ಬಾರಿಯೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಹಬ್ಬದ ಮುನ್ನಾ ಹಾಗೂ ನಂತರದ ದಿನದ ಖಾಸಗಿ ಬಸ್‌ಗಳ ಪ್ರಯಾಣದರದಲ್ಲಿ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.
ಸಾಮಾನ್ಯ ದರಕ್ಕಿಂತಲೂ ಅಸಾಮಾನ್ಯವಾಗಿ ಪ್ರಯಾಣದರ ಹೆಚ್ಚಾಗಿದ್ದಲ್ಲಿ ಅಂತಹ ಖಾಸಗಿ ಬಸ್‌ಗಳ ಮಾಲೀಕರಿಗೆ ನೋಟೀಸ್ ಕೊಟ್ಟು ವಿಚಾರಣೆ ನಡೆಸಬೇಕು. ನಿಯಮ ಮೀರಿ ಲಾಭದ ಆಸೆಯಿಂದ ಪ್ರಯಾಣ ದರ ಹೆಚ್ಚಳ ಮಾಡಿದರೆ ಅಂತಹ ಬಸ್ ಗಳ ಪರ್ಮಿಟ್ ಅನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳುವಂತೆ ರಾಮಲಿಂಗಾ ರೆಡ್ಡಿ ಸೂಚಿಸಿದ್ದಾರೆ.