Andhra Pradesh: ನೈಋತ್ಯ ಮಾನ್ಸೂನ್‌ಗೆ ಆಂಧ್ರ ತತ್ತರ: ಮೃತ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ ನಾಯ್ಡು

Andhrapradesh: ಅಮರಾವತಿ (ಆಂಧ್ರ ಪ್ರದೇಶ). ನೈಋತ್ಯ ಮಾನ್ಸೂನ್ ಸಕ್ರಿಯಗೊಂಡಚನಂತರ, ದೇಶದ ಹೆಚ್ಚಿನ ಭಾಗಗಳಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿವೆ. ಕೇರಳದ ವಯನಾಡ್ ಮತ್ತು ಗುಜರಾತ್ ನಂತರ ಈಗ ಭಾರೀ ಮಳೆ ಆಂಧ್ರಪ್ರದೇಶದಲ್ಲಿ ಭೀತಿ ಎದ್ದಿದೆ.

ಆಂಧ್ರಪ್ರದೇಶದಲ್ಲಿ ಶನಿವಾರ ಮಳೆ ಸಂಬಂಧಿತ ಘಟನೆಗಳಲ್ಲಿ ಏಳು ಜನರು ಸಾವನ್ನಪ್ಪಿದ್ದು, ವಿಜಯವಾಡದಲ್ಲಿ ಭೂಕುಸಿತದಿಂದ 4 ಜನರು ಸಾವನ್ನಪ್ಪಿದ್ದಾರೆ. ವಿಜಯವಾಡದ ಮೊಗಲರಾಜಪುರಂ ಪ್ರದೇಶದಲ್ಲಿ ಭೂಕುಸಿತದಿಂದ ಸಾವು ಸಂಭವಿಸಿದೆ. ಧಾರಾಕಾರ ಮಳೆಯಿಂದಾಗಿ ಸಂತ್ರಸ್ತರ ಮನೆಗಳ ಮೇಲೆ ದೊಡ್ಡ ಕಲ್ಲುಗಳು ಬಿದ್ದಿವೆ.
ಇನ್ನು ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಭೂಕುಸಿತ ಸಂತ್ರಸ್ತರ ಸಂಬಂಧಿಕರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಮಾಹಿತಿ ಪ್ರಕಾರ, ವಿಜಯವಾಡದ ಮೊಗಲರಾಜಪುರದಲ್ಲಿ ಭೂಕುಸಿತ ಘಟನೆ ನಡೆದಿದ್ದು, 4 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಬಗ್ಗೆ ಸಿಎಂ ನಾಯ್ಡು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಪ್ರತಿ ಬಂಧುಗಳಿಗೆ ತಲಾ 5 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಭೂಕುಸಿತಕ್ಕೆ ತುತ್ತಾಗುವ ಸ್ಥಳಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮುಂಬರುವ ಎರಡು-ಮೂರು ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಇನ್ನೊಂದೆಡೆ ಗುಂಟೂರು ಜಿಲ್ಲೆಯ ಪೆಡಕಕಣಿ ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ನದಿಯನ್ನು ದಾಟುತ್ತಿದ್ದಾಗ ಕಾರೊಂದು ಕೊಚ್ಚಿ ಹೋಗಿದ್ದು, ಓರ್ವ ಶಿಕ್ಷಕ ಮತ್ತು ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಅವರೆಲ್ಲರೂ ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರು. ಮಧ್ಯಾಹ್ನ 12:30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಶಿಕ್ಷಕ-ವಿದ್ಯಾರ್ಥಿ, ಗುಂಟೂರು ಜಿಲ್ಲೆಯ ಎಸ್ಪಿ ಸತೀಶ್ ಮೃತಪಟ್ಟಿದ್ದಾರೆ. ಮಳೆಯಿಂದಾಗಿ ತರಗತಿಗಳನ್ನು ಸ್ಥಗಿತಗೊಳಿಸಿದ ನಂತರ, ಶಿಕ್ಷಕರು ಇಬ್ಬರು ವಿದ್ಯಾರ್ಥಿಗಳೊಂದಿಗೆ ಶಾಲೆಯಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಹಳ್ಳಿಗೆ ತೆರಳುತ್ತಿರುವಾಗ ಕಾರು ಹೊಳೆ ದಾಟುವಾಗ ಕೊಚ್ಚಿಕೊಂಡುಹೋಗಿದೆ.

ಕಳೆದ 24 ಗಂಟೆಗಳಲ್ಲಿ ಆಂಧ್ರಪ್ರದೇಶದ ವಿಜಯವಾಡ ಸೇರಿದಂತೆ ಹಲವೆಡೆ ನಿರಂತರವಾಗಿ ಮಳೆ ಸುರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ 8:30 ರಿಂದ ಕಳೆದ 24 ಗಂಟೆಗಳಲ್ಲಿ ವಿಜಯವಾಡ ನಗರದಲ್ಲಿ 18 ಸೆಂ.ಮೀ ಮಳೆಯಾಗಿದೆ.ಅಲ್ಲದೇ ಕಳೆದ ಶನಿವಾರವೂನಗರದಲ್ಲಿ ಮಳೆಯಾಗಿದೆ.

Leave A Reply

Your email address will not be published.