Illegal Bpl Ration Cards: ಕರ್ನಾಟಕದಲ್ಲಿ 10 ಲಕ್ಷ ಅಕ್ರಮ ಬಿಪಿಎಲ್ ರೇಷನ್‌ ಕಾರ್ಡ್‌! ಯಾರೆಲ್ಲಾ ಅನರ್ಹ? ಇಲ್ಲಿದೆ ಪಟ್ಟಿ

Illegal Bpl Ration Cards: ಸರ್ಕಾರದ ವಿವಿಧ ಸವಲತ್ತು ಪಡೆಯುವ ಹಿನ್ನೆಲೆ, ರಾಜ್ಯದಲ್ಲಿ ಅಕ್ರಮ ರೇಷನ್‌ ಕಾರ್ಡ್‌ದಾರರ (Illegal Bpl Ration Cards) ಸಂಖ್ಯೆ ಹೆಚ್ಚಳವಾಗಿದೆ. ಇದೀಗ ಆಹಾರ ಇಲಾಖೆಯು 10 ಲಕ್ಷ ಕಾರ್ಡ್‌ಗಳನ್ನು ಪತ್ತೆ ಮಾಡಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೌದು, ಈಗಾಗಲೇ ಅಕ್ರಮ ದಾಖಲೆ ನೀಡಿ ರಾಜ್ಯದಲ್ಲಿ 10,97,621 ಅಕ್ರಮ ಬಿಪಿಎಲ್ ಕಾರ್ಡ್ ಪಡೆದಿರುವವರು ಇದ್ದಾರೆ. ಈ ಪೈಕಿ 98,431 ಮಂದಿ ಆದಾಯ ತೆರಿಗೆ ಪಾವತಿದಾರರು, 10,04,716 ಮಂದಿ 1.20 ಲಕ್ಷ ರೂ.ಗೂ ಅಧಿಕ ಆದಾಯ ಹೊಂದಿರುವವರು, ಇನ್ನು 4,036 ಮಂದಿ ಸರ್ಕಾರಿ ನೌಕರರಿರುವುದು ಇಲಾಖೆಯ ದಾಖಲೆಯಲ್ಲಿದೆ.

BPL ಕಾರ್ಡ್ ಮೋಸವನ್ನು ಪತ್ತೆ ಹಚ್ಚಲು ರಾಜ್ಯ ಸರಕಾರ ಅಕ್ರಮ ಬಿಪಿಎಲ್‌ ಕಾರ್ಡ್‌ಗಳ ಪತ್ತೆಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.ಯಾವುದೇ ಕುಟುಂಬದಲ್ಲಿ ಸರ್ಕಾರಿ , ಅರೆ ಸರ್ಕಾರಿ ನೌಕರರಿದ್ದಲ್ಲಿ, ತೆರಿಗೆ ಪಾವತಿದಾರರಿದ್ದಲ್ಲಿ, 4 ಚಕ್ರದ ಬಿಳಿ ಬೋರ್ಡ್‌ ವಾಹನ ಹೊಂದಿದವರು, ಆದಾಯ ತೆರಿಗೆ ಪಾವತಿಸುವ ಕುಟುಂಬ, ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿದ್ದರೆ, 7.5 ಎಕರೆಗಿಂತ ಹೆಚ್ಚಿನ ಡಿ ವರ್ಗದ ಅಥವಾ ತತ್ಸಮಾನ ಭೂಮಿ ಹೊಂದಿದ್ದರೆ, ವಾರ್ಷಿಕ 1,20,000 ರೂ.ಗಿಂತ ಹೆಚ್ಚು ಆದಾಯ ಹೊಂದಿದ್ದರೆ, ನಗರ ಪ್ರದೇಶದಲ್ಲಿ 1,000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆ ಹೊಂದಿರುವ ಕುಟುಂಬ ಬಿಪಿಎಲ್ ಪಡೆಯಲು ಅವಕಾಶವಿಲ್ಲ. ಆದರೆ ಈ ಮೇಲಿನ ಮಾನದಂಡ ಉಲ್ಲಂಘಿಸಿ ರಾಜ್ಯಾದ್ಯಂತ ಬಿಪಿಎಲ್‌ ಕಾರ್ಡ್ ಪಡೆದುಕೊಂಡಿದ್ದಾರೆ.

ಇದರಲ್ಲಿ ರಾಜ್ಯ, ಕೇಂದ್ರ ಸರ್ಕಾರಿ ನೌಕರರು, ಅರೆ ಸರ್ಕಾರಿ ನೌಕರರು ಅಕ್ರಮವಾಗಿ ಬಿಪಿಎಲ್ ಪಡೆಯುತ್ತಿರುವುದು ಪತ್ತೆಯಾಗಿದೆ. 4 ಸಾವಿರ ಸರ್ಕಾರಿ ಉದ್ಯೋಗಿಗಳು ಅಕ್ರಮ ಕಾರ್ಡ್ ಪಡೆದವರಲ್ಲಿ 4,036 ಮಂದಿ ಸರ್ಕಾರಿ ಉದ್ಯೋಗಿಗಳಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 369 ಸರ್ಕಾರಿ ಉದ್ಯೋಗಿಗಳು ಅಕ್ರಮವಾಗಿ ಬಿಪಿಎಲ್ ಪಡೆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಮಂದಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಬಾಗಲಕೋಟೆ, ಬೆಳಗಾವಿ, ಬೆಂಗಳೂರು, ಕಲಬುರಗಿ, ರಾಯಚೂರು, ತುಮಕೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ತಲಾ 150ಕ್ಕೂ ಅಧಿಕ ಸರ್ಕಾರಿ ಉದ್ಯೋಗಿಗಳು ಅಕ್ರಮವಾಗಿ ಬಿಪಿಎಲ್ ಪಡೆದಿದ್ದಾರೆ.

ಒಟ್ಟಿನಲ್ಲಿ ಈ ಮೇಲಿನ ಮಾನದಂಡಗಳನ್ನು ಮೀರಿ ಬಿಪಿಎಲ್‌ ಕಾರ್ಡ್ ಪಡೆದುಕೊಂಡು ಸರಕಾರಕ್ಕೆ ಮೋಸ ಮಾಡಿದವರನ್ನು ಪತ್ತೆ ಹಚ್ಚಿ ದಂಡ ವಿಧಿಸಲು ಸರಕಾರ ತೀರ್ಮಾನಿಸಿದೆ. ಆ ಪ್ರಕಾರ ಬಿಪಿಎಲ್ ಅಕ್ರಮ ಪಡೆದವರು ಯಾವ ವರ್ಷ, ಯಾವ ದಿನಾಂಕದಿಂದ ಅಕ್ರಮ ಪತ್ತೆಯಾಗುವವರೆಗೆ ನಿರಂತರ ಪಡಿತರ ಪಡೆದುಕೊಂಡಿದ್ದಾರೆ ಎಂಬ ಲೆಕ್ಕಾಚಾರ ಮಾಡಿ (ಕೆಜಿಗೆ 34 ರೂ.) ಅವರ ಮೇಲೆ ದಂಡ ಪ್ರಯೋಗ ಮಾಡಲು ನಿರ್ದೇಶನ ನೀಡಲಾಗಿದೆ. ಇದರಿಂದ 5ಕ್ಕೂ ಅಧಿಕ ವರ್ಷಗಳಿಂದ ಅಕ್ರಮ ಬಿಪಿಎಲ್ ಪಡೆದವರು ಭಾರಿ ದೊಡ್ಡ ಮೊತ್ತವನ್ನೇ ದಂಡವಾಗಿ ಕಟ್ಟಬೇಕಾಗುತ್ತೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.