HSRP Number Plate: HSRP ನಂಬರ್ ಪ್ಲೇಟ್ ಅಳವಡಿಸದವರಿಗೆ ಮಹತ್ವದ ಮಾಹಿತಿ! ಕೂಡಲೇ ಅಲರ್ಟ್ ಆಗಿರಿ

HSRP Number Plate: ಈಗಾಗಲೇ ಕರ್ನಾಟಕ ಸಾರಿಗೆ ಇಲಾಖೆಯ ಎಲ್ಲ ವಾಹನಗಳಿಗೂ HSRP ನಂಬರ್ ಪ್ಲೇಟ್ (High Security Registration Number Plate) ಕಡ್ಡಾಯ ಮಾಡಲಾಗಿದ್ದು, ಇದೀಗ ನಂಬರ್ ಪ್ಲೇಟ್ ಅಳವಡಿಕೆಗೆ ಹಲವು ಬಾರಿ ಗಡುವು ನೀಡಿದ್ದು, ಇದೀಗ ಕೊನೆಯ ಗಡುವನ್ನು ನೀಡಲಾಗಿದೆ. ಹೌದು, ಕೊನೆಯದಾಗಿ ವಾಹನ ಸವಾರರು ಸೆಪ್ಟೆಂಬರ್ 15 ರೊಳಗೆ HSRP’ ನಂಬರ್ ಪ್ಲೇಟ್ ಅಳವಡಿಸದಿದ್ರೆ ದಂಡ ಬೀಳುವುದಂತು ಖಚಿತ.

ಮುಖ್ಯವಾಗಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ವಾಹನಗಳ ಸುರಕ್ಷತೆಗಾಗಿ ಈ ಪ್ಲೇಟ್ ಅಳವಡಿಕೆಯನ್ನ ಕಡ್ಡಾಯ ಮಾಡಲಾಗಿದೆ. ಅಂತೆಯೇ ಕರ್ನಾಟಕ ರಾಜ್ಯದಲ್ಲಿ 1ನೇ ಏಪ್ರಿಲ್ 2019ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) (ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ) ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ (HSRP ) ಫಲಕಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ.

ಆನ್ನೈನ್ ಮೂಲಕ ನಂಬರ್ ಪ್ಲೇಟ್ ಅಳವಡಿಕೆ ಹೇಗೆ?

ಸ್ಕ್ಯಾನ್ ಮಾಡಿ HSRP ಮೇಲೆ ಕ್ಲಿಕ್ ಮಾಡಿ ನಂತರ ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ. ಒಂದು ವೇಳೆ ನಂಬರ್ ಪ್ಲೇಟ್ ಅಳವಡಿಕೆಗೆ ಸ್ಥಳ ಆಯ್ದುಕೊಂಡರೆ ಅವರೇ ನೇರವಾಗಿ ಬಂದು ಫಿಟ್ ಮಾಡಿಕೊಡುತ್ತಾರೆ.

Leave A Reply

Your email address will not be published.