Tennis Kishna: ನನ್ನ ಮತ್ತು ದೊಡ್ಡಣ್ಣನ ಕಾಂಬಿನೇಷನ್ ನನ್ನು ಕುತಂತ್ರದಿಂದ ದೂರಮಾಡಿದ್ದೇ ಈ ಸಾಧುಕೋಕಿಲ – ನಟ ಟೆನ್ನಿಸ್ ಕೃಷ್ಣ ಶಾಕಿಂಗ್ ಹೇಳಿಕೆ

Tennis Krishna: ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋ, ಹೀರೋಯಿನ್ ಗಳಿಗೆ ಇರವಷ್ಟೇ ಪ್ರಾಮುಖ್ಯತೆ ಒಬ್ಬ ಹಾಸ್ಯ ಕಲಾವಿದನಿಗೂ ಇರುತ್ತದೆ. ಗಂಟೆಗಟ್ಟಲೆಯ ಸಿನಿಮಾದ ನಡುವೆ ಅಲ್ಲಲ್ಲಿ ಕಾಮಿಡಿ ಮಾಡುತ್ತಾ ಸಿನಿಪ್ರೇಕ್ಷಕರನ್ನು ರಂಜಿಸುತ್ತಾ, ವೀಕ್ಷಕರನ್ನು ಹಿಡಿದಿಡುವಲ್ಲಿ ಇವರ ಪ್ರಯತ್ನ ಅಗಾಧವಾದುದು. ಅಂತೆಯೇ ಕನ್ನಡದಲ್ಲೂ ಕೆಲವು ಹಾಸ್ಯ ಕಲಾವಿದರಿದ್ದಾರೆ. ಅವರೆಂದರೆ ಪ್ರೇಕ್ಷಕರಿಗೆ ಬಲೂ ಅಚ್ಚು ಮೆಚ್ಚು. ಅಂತವರಲ್ಲಿ ಹಿರಿಯ ಹಾಸ್ಯ ನಟ ಟೆನ್ನಿಸ್ ಕೃಷ್ಣ(Tennis Krishna) ಕೂಡ ಒಬ್ಬರು.

ಒಂದು ಕಾಲದಲ್ಲಿ ಸಾಕಷ್ಟು ಖ್ಯಾತಿ ಗಳಿಸಿ ಇಂದಿಗೂ ಅದನ್ನು ಉಳಿಸಿಕೊಂಡು ಬಂದಿರುವ ಹಾಸ್ಯನಟ ಟೆನ್ನಿಸ್ ಕೃಷ್ಣಗೆ ಆಗ ಬಹು ಬೇಡಿಕೆ ಇತ್ತು. ಡಾ. ರಾಜ್‌ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್‌ರಂತಹ ದಿಗ್ಗಜರ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಇವರದು. ಅವರೊಂದಿಗೆ ನೂರಾರು ಪಾತ್ರಗಳಿಗೆ ಬಣ್ಣ ಹಚ್ಚಿದವರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವಕಾಶಗಳು ಸಿಗುತ್ತಿಲ್ಲ. ಈ ಕುರಿತು ಅವರೇ ‘ನಮಗೆ ಚಿತ್ರರಂಗದಲ್ಲಿ ಸಿಗಬೇಕಾದ ಸ್ಥಾನಮಾನ, ಗೌರವ ಕೂಡ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಅವಕಾಶ ತಪ್ಪಲು ಕೆಲವರ ಕುತಂತ್ರ ಕಾರಣ ಎಂದು ಓಪನ್ ಆಗಿಯೂ ಮಾತನಾಡಿದ್ದಾರೆ.

ಹೌದು, ಒಂದ್ಕಾಲದಲ್ಲಿ ದೊಡ್ಡಣ್ಣ ಹಾಗೂ ಟೆನ್ನಿಸ್ ಕೃಷ್ಟ ಕಾಂಬಿನೇಷನ್ ಹಿಟ್ ಆಗಿತ್ತು. ಕೆಲ ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ನಟಿಸಿ ಪ್ರೇಕ್ಷಕರನ್ನು ನಗಿಸಿದ್ದರು. ಆದರೆ ನಂತರದಲ್ಲಿ ಅವರು ಎಲ್ಲೂ ಒಟ್ಟಾಗಿ ಕಾಣಿಸಲಿಲ್ಲ. ಇಬ್ಬರೂ ದೂರಾಗಿಬಿಟ್ಟರು. ಯಾಕೆ ಹೀಗಾಯಿತು? ಇಬ್ಬರ ನಡುವೆ ಆದದ್ದೇನು? ಎಂಬುದು ಸಿನಿ ಪ್ರೇಕ್ಷಕರು ಹಾಗೂ ಅಭಿಮಾನಿಗಳ ಪ್ರಶ್ನೆ. ಇದಕ್ಕೆ ಸ್ವತಃ ಟೆನ್ನಿಸ್ ಕೃಷ್ಣ ಅವರೇ ಯೂಟೂಬ್ ಸಂದರ್ಶನವೊಂದರಲ್ಲಿ ಉತ್ತರ ನೀಡಿದ್ದಾರೆ.

ಟೆನ್ನಿಸ್ ಕೃಷ್ಣ ಹೇಳಿದ್ದೇನು?
‘ನಾನು ಹಾಗೂ ದೊಡ್ಡಣ್ಣ ಒಟ್ಟಿಗೆ ನಟಿಸುತ್ತಿಲ್ಲ. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವಿಬ್ಬರು ಚೆನ್ನಾಗಿದ್ದೇವೆ. ಆದರೆ ಕೆಲವರ ಕುತಂತ್ರದಿಂದ ನಾವಿಬ್ಬರು ಆ ಬಳಿಕ ಒಟ್ಟಿಗೆ ನಟಿಸಲು ಸಾಧ್ಯವಾಗಲಿಲ್ಲ. ಯಾರು ಕುತಂತ್ರ ಮಾಡಿದರೋ ಅವರೇ ದೊಡ್ಡಣ್ಣ ಜೊತೆ ನಟಿಸಿದರು. ಈ ರೀತಿ ಕುತಂತ್ರ ಮಾಡಿ ದೊಡ್ಡಣ್ಣ ಜೊತೆ ಅವಕಾಶ ಗಿಟ್ಟಿಸಿಕೊಂಡಿದ್ದೇ ಸಾಧುಕೋಕಿಲ” ಎಂದು ಟೆನ್ನಿಸ್ ಕೃಷ್ಣ ಆರೋಪಿಸಿದ್ದಾರೆ.

ಬಳಿಕ ಮಾತನಾಡಿದ ಅವರು ‘ತಿಮ್ಮರಾಯ ಚಿತ್ರದಲ್ಲಿ ಸಾಧುಕೋಕಿಲ ಹೀರೊ ಆಗಿ ನಟಿಸಿದ್ದರು. ನಿಜ ಹೇಳಬೇಕು ಅಂದರೆ ಆ ಚಿತ್ರದಲ್ಲಿ ನಾನೇ ಹೀರೊ ಆಗಿ ನಟಿಸಬೇಕಿತ್ತು. ಸಣ್ಣ ಪಾತ್ರ ಮಾಡುವಂತೆ ಕೇಳಿದರು. ಡೇಟ್ಸ್ ಇಲ್ಲದಿದ್ದರೂ ಹೊಂದಿಸಿಕೊಂಡು ನಟಿಸಿದೆ. ಆದರೆ ಆ ಸಿನಿಮಾ ಬಳಿಕ ನಾನು ಬೇಡವಾದೆ. ನನ್ನನ್ನೇ ದೂರ ಮಾಡಿಬಿಟ್ಟರು. ಸಾಧುಕೋಕಿಲ ಎರಡು ಕಾರ್ಯಕ್ರಮಕ್ಕೆ ನನ್ನನ್ನು ಅತಿಥಿಯಾಗಿ ಬರುವಂತೆ ಕೇಳಿದ್ದರು. ನಾನು ಹೋಗಿದ್ದೆ. ಆದರೆ ಬಳಿಕ ನಾನು ಒಂದು ಕಾರ್ಯಕ್ರಮಕ್ಕೆ ಸಾಧು ಕೋಕಿಲನ ಅತಿಥಿಯಾಗು ಕರೆಯಲು ಹುಡುಕಿಕೊಂಡು ಹೋಗಿದ್ದೆ. ಬರ್ತೀನಿ ಎಂದು ಹೇಳಿದವರು ಬಳಿಕ ಫೋನ್ ಮಾಡಿದರೆ ಕರೆ ಸ್ವೀಕರಿಸಲಿಲ್ಲ. ಇದೇ ರೀತಿ ಕಾರ್ಯಕ್ರಮವೊಂದಕ್ಕೆ ಬುಲೆಟ್ ಪ್ರಕಾಶ್ ಅವರನ್ನ ಕರೆದಿದ್ದೆ. ಬರ್ತೀನಿ ಎಂದವರು ಬರಲಿಲ್ಲ” ಎಂದು ಟೆನ್ನಿಸ್ ಕೃಷ್ಣ ನೆನಪಿಸಿಕೊಂಡಿದ್ದಾರೆ.

ಅಲ್ಲದೆ ಪುನೀತ್ ರಾಜ್‌ಕುಮಾರ್ ನಟನೆಯ ‘ಪವರ್’ ಚಿತ್ರದಲ್ಲಿ ನಾನು ಮಾಡಬೇಕಿದ್ದ ಪಾತ್ರವನ್ನು ಸಾಧುಕೋಕಿಲ ಬದಲಿಸಿದ್ದರು. ಆ ಪಾತ್ರ ತೆಲುಗಿನಲ್ಲಿ ಬ್ರಹ್ಮಾನಂದಂ ಮಾಡಿದ್ದರು. ಅದನ್ನು ಬಳಿಕ ರಂಗಾಯಣ ರಘುಗೆ ಕೊಡಿಸಿದ್ದರು. ನನಗೆ ಮೂರ್ನಾಲ್ಕು ಸನ್ನಿವೇಶಗಳ ಸಣ್ಣ ಪಾತ್ರ ಕೊಟ್ಟರು, ಬೇಡ ಅಂದೆ. ಬಳಿಕ ನಿರ್ದೇಶಕರು ನಟಿಸುವಂತೆ ಮನವಿ ಮಾಡಿದರು. ಅದಕ್ಕೆ ನಟಿಸಿದೆ. ಅವರು ನಟಿಸಲಿ ಬೇಡ ಅನ್ನಲಿಲ್ಲ, ನನ್ನ ಪಾತ್ರ ಯಾಕೆ ಬದಲಾಯಿಸಬೇಕು?’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಹೀಗೆಲ್ಲಾ ನನಗೆ ನನ್ನನ್ನು ಸಾಕಿ ಸಲಹಿದ ಚಿಂತ್ರರಂಗದವರೇ ಮೋಸ ಮಾಡಿ, ಮೂಲೆಗುಂಪು ಮಾಡಿದ್ದಾರೆ. ಇತ್ತೀಚೆಗೆ ಅತರುಣ್ ಕೂಡ ಮದುವೆಗೆ ಕರೆಯಲಿಲ್ಲ. ಫೋನ್ ಮಾಡಿದ್ದರೆ ಸಾಕಿತ್ತು. ಹೀಗೆ ಯಾರಿಂದಲೂ ನನಗೆ ಬೆಲೆ, ಗೌರವ ಸಿಗುತ್ತಿಲ್ಲ ಎಂದು ಟೆನ್ನಿಸ್ ಕೃಷ್ಣ ಮನದಾಳದ ನೋವನ್ನು ತೋಡಿಕೊಂಡಿದ್ದಾರೆ.

1 Comment
  1. Simplywall says

    Simplywall I very delighted to find this internet site on bing, just what I was searching for as well saved to fav

Leave A Reply

Your email address will not be published.