Soujanya Murder Case: ಸೌಜನ್ಯ ಹತ್ಯಾ ಪ್ರಕರಣ: ತೀರ್ಪಿನ ಬೆನ್ನಲ್ಲೇ ‘ಮುಂದಿನ ಹಂತ ಗಂಭೀರ’ ಎಂದು ಎಚ್ಚರಿಸಿದ ಗಿರೀಶ್ ಮಟ್ಟಣ್ಣನವರ್ !
Soujanya Murder Case: ಹೈಕೋರ್ಟ್ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಮರು ತನಿಖೆ ಮತ್ತು ಸಂತೋಷ್ ರಾವ್ ಅಪರಾಧಿಯ ಮರು ವಿಚಾರಣೆಯ ತೀರ್ಪನ್ನು ನೀಡಿದ್ದು, ಎರಡೂ ಅರ್ಜಿಗಳನ್ನು ರಾಜ್ಯ ಉಚ್ಛ ನ್ಯಾಯಾಲಯ ವಜಾಗೊಳಿಸಿದ್ದನ್ನು ಸೌಜನ್ಯ ಹೋರಾಟ ಸಮಿತಿ ಸ್ವಾಗತಿಸುವುದಾಗಿ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣನವರ್ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಮಟ್ಟಣನವರ್, ಸಂತೋಷ್‌ರಾವ್ ಆರೋಪಿ ಅಲ್ಲ. ಅವನನ್ನು ಹೊರತುಪಡಿಸಿ ಬೇರೆಯವರಿದ್ದಾರೆ ಎಂಬ ಧ್ವನಿಯನ್ನು ಹನ್ನೆರಡು ವರ್ಷಗಳ ಹಿಂದೆಯೇ ಮಹೇಶ್‌ಶೆಟ್ಟಿ ತಿಮರೋಡಿ ಎತ್ತಿದ್ದರು. ಇಂದು ಮತ್ತೊಮ್ಮೆ ಹಿಂದೆ ವಿಶೇಷ ನ್ಯಾಯಾಲಯ ಹೇಳಿದಂತೆ ರಾಜ್ಯದ ಹೈಕೋರ್ಟ್ ಸಂತೋಷ್ ರಾವ್ ನಿರಪರಾಧಿ ಎನ್ನುವ ತೀರ್ಪನ್ನು ಸ್ಪಷ್ಟವಾಗಿ ಹೇಳಿದೆ. ಸಿಬಿಐ ಸಂತೋಷ್‌ರಾವ್‌ನನ್ನು ಕಟಕಟೆಯಲ್ಲಿ ನಿಲ್ಲಿಸಿ ಅಪರಾಧಿಯನ್ನಾಗಿ ಮಾಡುವಂತಹಾ ಪ್ರಯತ್ನ ಮಾಡಿದ್ದರು. ಅಲ್ಲದೇ ಇದನ್ನೇ ರಾಜ್ಯ ಸರ್ಕಾರದ ಪ್ರಾಸಿಕ್ಯೂಷನ್ ಕೂಡ ಪ್ರಯತ್ನವನ್ನು ಮಾಡಿತ್ತು. ಆದರೆ ಕೋರ್ಟು ಅದಕ್ಕೆ ಸೊಪ್ಪು ಹಾಕಿಲ್ಲ. ಸಂತೋಷ್ ರಾವನ್ನು ನಿರಪರಾಧಿ ಎಂದು ಮತ್ತೊಮ್ಮೆ ಕೋರ್ಟ್ ಘೋಷಿಸಿದೆ.
ಹಾಗಿದ್ದಲ್ಲಿ ಇಲ್ಲಿ ಅಪರಾಧಿ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಸೌಜನ್ಯ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದ್ದು ಸಂತೋಷ್ ರಾವ್ ಅಪರಾಧಿ ಅಲ್ಲ ಎಂದಿರುವುದು ಮುಂದಿನ ಹಂತದ ಕಾನೂನಿನ ಹೋರಾಟಕ್ಕೆ ಬಾಗಿಲನ್ನು ತೆರೆದುಕೊಟ್ಟಿದೆ. ಇದರಿಂದ ಸೌಜನ್ಯ ಕುಟುಂಬಕ್ಕೆ ಸೌಜನ್ಯ ನ್ಯಾಯಪರ ಹೋರಾಟಕ್ಕೆ ಮುಕ್ತ ಅವಕಾಶ ಕೊಟ್ಟಿದೆ ಎಂದು ಗಿರೀಶ್ ಮಟ್ಟನ್ನನವರ್ ಹೇಳಿದ್ದಾರೆ.
ಸಾಕ್ಷ್ಯ ನಾಶ ಆಗಿದೆ
ಸಂತೋಷ್‌ರಾವ್ ನಿರಪರಾಧಿ ಎನ್ನುವುದು ಹೈಕೋರ್ಟಿಗೂ ಕೂಡ ಬಹಳ ಸ್ಪಷ್ಟವಾಗಿಯೇ ಗೊತ್ತಾಗಿದ್ದು ಆದ್ದರಿಂದ ಅದು ಮೇಲ್ಮನವಿ ತಿರಸ್ಕರಿಸಿದೆ. ಹೀಗಾಗಿ ಕಳೆದ ಹನ್ನೆರಡು ವರ್ಷಗಳಿಂದ ಮತ್ತು ಒಂದುವ ರ್ಷದ ಹಿಂದೆ ಆರಂಭವಾದ ದೊಡ್ಡಮಟ್ಟದ ಹೋರಾಟ ಮಾಡುವವರು ಧರ್ಮಸ್ಥಳ ದೇವಸ್ಥಾನವನ್ನು ಗಬ್ಬೆಬ್ಬಿಸಿ ಹೊಲಸು ಮಾಡುತ್ತಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿದ್ದವರಿಗೆ ಹೈಕೋರ್ಟ್ ಚಾಟಿ ಏಟು ಬೀಸಿದೆ ಎಂದರು.
ಸಂತೋಷ್‌ರಾವ್ ಅಪರಾಧಿ ಅಲ್ಲ ಎಂದ ಮೇಲೆ ಅತ್ಯಾಚಾರವನ್ನು ಗಿಡಮರ ಮಾಡಿರುವುದಿಲ್ಲ. ಹಾಗಾದರೆ ಸೌಜನ್ಯ ಅತ್ಯಾಚಾರ ಮನುಷ್ಯರೇ ಮಾಡಿರಬೇಕಲ್ಲವೇ? ಎಂದು ಮಟ್ಟನ್ನನವರ್ ಪ್ರಶ್ನಿಸಿದರು. ಹೀಗಾಗಿ ಮುಂದಿನ ಹಂತದ ಕಾನೂನಿನ ಹೋರಾಟಕ್ಕೆ ಅಪೀಲ್ ಹೋಗುವುದಕ್ಕೆ ಇದೊಂದು ಮುಕ್ತ ಅವಕಾಶ ಕೊಟ್ಟಿದೆ. ಹಿಂದೆ ಸೌಜನ್ಯ ತಂದೆ ಹೇಳಿದಂತೆ ಸಂತೋಷ್‌ರಾವ್ ಆರೋಪಿ ಅಲ್ಲ ಎನ್ನುವ ಮಾತನ್ನೇ ಹೈಕೋರ್ಟ್ ಪುನರುಚ್ಚರಿಸಿದೆ. ಸಂತೋಷ್ ರಾವ್ ಆರೋಪಿ ಎಂದಿದ್ದ ಶಿವಗಣಗಳು ಹೇಳಿದ್ದವು. ಹಾಗೆ ಹೇಳಿದ್ದವರಿಗೂ ಕೆಲ ಮಾಧ್ಯಮದವರಿಗೂ ಇಂದು ಕಪಾಳ ಮೋಕ್ಷವಾಗಿದೆ. ಮುಂದಿನ ಹಂತ ಬಹಳ ಗಂಭೀರವಾಗಿದೆ ಎಂದು ಗಿರೀಶ್ ಮಟ್ಡಣನವರ್ ಎಚ್ಚರಿಸಿದ್ದಾರೆ.