Channapattana By Election: ಬಿಜೆಪಿ ಮುಂದೆ 3 ಆಯ್ಕೆ ಇಟ್ಟ ಸಿ ಪಿ ಯೋಗೇಶ್ವರ್- ಒಂದೊಂದನ್ನು ಕೇಳಿ ತಲೆ ಚಚ್ಚಿಕೊಂಡ ಹೈಕಮಾಂಡ್ !!

Share the Article

Channapattana By Election: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್​ ಮತ್ತು ಬಿಜೆಪಿ ನಾಯಕರಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಬಿಜೆಪಿ-ಜೆಡಿಎಸ್​ ಮೈತ್ರಿ ನಂತರ ಚನ್ನಪಟ್ಟಣ ಕ್ಷೇತ್ರದ ಟಿಕೆಟ್​ ಯಾರಿಗೆ ಎಂಬ ಪ್ರಶ್ನೆ ಉದ್ಭವಿಸಿದ್ದು, ಸಿ ಪಿ ಯೋಗೇಶ್ವರ್(C P Yogishwar) ನಡೆ ದೋಸ್ತಿಗಳ ನಡುವಿನ ಕಾದಾಟಕ್ಕೆ ಎಡೆಮಾಡಿಕೊಡುವಂತಿದೆ.

ಹೌದು, ಚನ್ನಪಟ್ಟಣ ಉಪ ಚುನಾವಣೆ ಟಿಕೆಟ್ ನನಗೇ ಕೊಡಬೇಕೆಂದು ಹಟ ಹಿಡಿದಿರುವ ನಟ, ರಾಜಕಾರಣಿ ಸಿ ಪಿ ಯೋಗೇಶ್ವರ್ ಅವರು ಎರಡು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿ(Delhi) ಯಲ್ಲಿ ಬೀಡು ಬಿಟ್ಟಿದ್ದಾರೆ. ಇಷ್ಟೇ ಅಲ್ಲದೆ ಅವರು ಬಿಜೆಪಿ ಹೈಕಮಾಂಡ್ ಎದುರು ತನ್ನ ಮುಂದಿರುವ 3 ಆಯ್ಕೆಗಳನ್ನು ತೆರೆದಿಟ್ಟಿದ್ದು ತೊಡ್ಡ ತಲೆನೋವು ಉಂಟುಮಾಡಿದ್ದಾರೆ. ಹಾಗಿದ್ರೆ ಏನು ಆ ಆಯ್ಕೆಗಳು? ಇಲ್ಲಿವೆ ನೋಡಿ.

ಸಿ ಪಿ ಯೋಗೇಶ್ವರ್ ನ ಮುಂದಿನ ಆಯ್ಕೆಗಳು:
* ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂದಾದರೆ ನಾನು ಆ ಪಕ್ಷದ ಅಭ್ಯರ್ಥಿಯಾಗುತ್ತೇನೆ.
• ಒಂದು ವೇಳೆ ಜೆಡಿಎಸ್ ಪಟ್ಟು ಸಡಿಲಿಸದಿದ್ದರೆ ಬಿಜೆಪಿ ಮೈತ್ರಿ ಮುರಿದುಕೊಳ್ಳಬೇಕು. ತ್ರಿಕೋನ ಸ್ಪರ್ಧೆ ನಡೆಯಲಿದೆ. ಆಗ ಯಾರ ಶಕ್ತಿ ಎಷ್ಟು ಎಂಬುದು ಗೊತ್ತಾಗಲಿದೆ. ನಾನು ಗೆದ್ದು ತೋರಿಸುತ್ತೇನೆ.
• ಒಂದು ವೇಳೆ ಟಿಕೆಟ್ ನೀಡದಿದ್ದರೆ ನಾನು ಬಿಎಸ್‌ಪಿಯಿಂದ ಸ್ಪರ್ಧಿಸುತ್ತೇನೆ. ಈ ಬಗ್ಗೆ ಬಿಎಸ್‌ಪಿ ನಾಯಕರ ಜತೆಗೆ ಚರ್ಚೆ ನಡೆಸಿದ್ದೇನೆ. ಅವರು ಬಿ-ಫಾರಂ ನೀಡಲು ಒಪ್ಪಿದ್ದಾರೆ.

ಟಿಕೆಟ್ ನೀಡಲು ಒಪ್ಪದ ಕುಮಾರಸ್ವಾಮಿ:
ಯೋಗೇಶ್ವರ್ ಆಯ್ಕೆಗಳನ್ನು ಮುಂದಿಟ್ಟ ಬಳಿಕ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಕುಮಾರಸ್ವಾಮಿ, ಬೊಮ್ಮಾಯಿ, ಆ‌ರ್. ಅಶೋಕ, ಸಿ.ಎನ್. ಅಶ್ವತ್ಥನಾರಾಯಣ, ಸಿ.ಟಿ. ರವಿ ಹಾಗೂ ಅರವಿಂದ ಬೆಲ್ಲದ ಭಾಗಿಯಾಗಿದ್ದರು. ಈ ಸಲ ಯೋಗೇಶ್ವರ್‌ಗೆ ಅವಕಾಶ ನೀಡಬೇಕು ಎಂದು ಬಿಜೆಪಿಯ ಕೆಲವು ನಾಯಕರು ಮನವಿ ಮಾಡಿದರು. ಈ ಪ್ರಸ್ತಾಪಕ್ಕೆ ಕುಮಾರಸ್ವಾಮಿ(H D kumarswamy)ಒಪ್ಪಲಿಲ್ಲ ಎನ್ನಲಾಗಿದೆ.

Leave A Reply