Ballary Jail Food Menu: ದರ್ಶನ್ ಬಂದ ಬಳ್ಳಾರಿ ಜೈಲಿನ ಊಟದ ಮೆನುವಲ್ಲಿ ಏನಿದೆ? – ಮೆನು ನೋಡಿ ‘ದಾಸ’ ಫುಲ್ ಶಾಕ್ !!
Ballary Jail Food Menu: ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್(Darsham) ಜೈಲಲ್ಲಿದ್ದರೂ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಈಗ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಜೈಲಿಗೆ ಬರುತ್ತಿದ್ದಂತೆ ಊಟದ ಮೆನು ಕಂಡು ದರ್ಶನ್ ಫುಲ್ ಶಾಕ್ ಆಗಿದ್ದಾರಂತೆ. ಹಾಗಿದ್ರೆ ಏನೇನಿದೆ ಮೆನುವಲ್ಲಿ ?!
ಹೌದು, ಬಳ್ಳಾರಿಗೆ ಜೈಲಿಗೆ ಬರುತ್ತಿದ್ದಂತೆ ದರ್ಶನ್ ಒಮ್ಮೆ ಅಘಾತಕ್ಕೆ ಒಳಗಾಗಿದ್ದಂತೂ ಸತ್ಯ. ಯಾಕೆಂದ್ರೆ ಪರಪ್ಪನ ಅಗ್ರಹಾರ ಜೈಲಿಗೆ ಹೋಲಿಸಿದರೆ ಬಳ್ಳಾರಿ ಜೈಲಿನ ವಿಸ್ತೀರ್ಣ ಕಡಿಮೆ ಎನ್ನಲಾಗುತ್ತಿದೆ. ಬ್ಯಾರಕ್ಗಳು ಸಹ ಪರಪ್ಪನ ಅಗ್ರಹಾರ ಜೈಲಿನಲ್ಲಿ ವ್ಯವಸ್ಥಿತವಾಗಿಲ್ಲ ಎಂಬ ಮಾತುಗಳು ಇವೆ. ಇನ್ನು ಊಟದ ವಿಷಯಕ್ಕೆ ಬರುವುದಾದರೆ, ಸರಳವಾದ ಊಟದ ಮೆನು ಬಳ್ಳಾರಿ ಜೈಲಿ(Ballary Jail Food Menu)ನಲ್ಲಿದೆ.
ಬಳ್ಳಾರಿ ಜೈಲಿನ ಊಟ:
* ಬೆಳಿಗ್ಗೆ ಉಪಹಾರ: ಉಪ್ಪಿಟ್ಟು, ಒಗ್ಗರಣೆ ಅವಲಕ್ಕಿ, ಬಿಸಿಬೇಳೆ ಬಾತ್, ಚಿತ್ರಾನ್ನ ಇಂಥಹವುಗಳು ಸಿಗಲಿವೆ.
* ಮಧ್ಯಾಹ್ನದ ಊಟ: ರಾಗಿಮುದ್ದೆ, ಚಪಾತಿ, ಜೋಳದ ರೊಟ್ಟಿ, ಸಜ್ಜಿ ರೊಟ್ಟಿ ಕೊಡಲಾಗುತ್ತದೆ. ಬಳ್ಳಾರಿಯ ಜನರ ಸ್ಥಳೀಯ ಊಟ ಜೋಳ, ಸಜ್ಜಿ ರೊಟ್ಟಿಯೇ ಆಗಿದೆ. ದರ್ಶನ್, ರೊಟ್ಟಿ, ಚಪಾತಿ ಅಥವಾ ಮುದ್ದೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿರುತ್ತದೆ.
* ರಾತ್ರಿ ಊಟ: ಅನ್ನ ಸಾಂಬಾರ್ ಲಭ್ಯವಾಗಲಿದೆ.
ಇಷ್ಟೇ ಅಲ್ಲದೆ ಪ್ರತಿ ಮಂಗಳವಾರ ಮೊಟ್ಟೆ ಕೊಡಲಾಗುತ್ತದೆ. ಇನ್ನು ಪ್ರತಿ ಭಾನುವಾರ ಮಾಂಸಾಹಾರವನ್ನು ನೀಡಲಾಗುತ್ತದೆ. ಒಂದು ಭಾನುವಾರ ಚಿಕನ್ ಕೊಟ್ಟರೆ ಮತ್ತೊಂದು ಭಾನುವಾರ ಮಟನ್ ನೀಡಲಾಗುತ್ತದೆ. ಇದು ಬಳ್ಳಾರಿ ಜೈಲಿನ ಸಾಮಾನ್ಯ ಊಟದ ಮೆನು ಆಗಿದ್ದು, ಇದೇ ಮೆನು ದರ್ಶನ್ಗೂ ಸಹ ಇರಲಿದೆ.