OTP: ಸೆಪ್ಟೆಂಬರ್ 1ರಿಂದ ಒಟಿಪಿ ಬಂದ್? ಲಾಗಿನ್, ಬುಕಿಂಗ್, ಡೆಲಿವರಿ ಗತಿ ಏನು!?

OTP: ಸ್ಪ್ಯಾಮ್ ಮೆಸೇಜ್​ಗಳಿಗೆ ತಡೆ ಹಾಕಲು ಟ್ರಾಯ್ OTP ಸಂಬಂಧ ಪಟ್ಟಂತೆ ಹೊಸ ನಿಯಮ ಜಾರಿಗೆ ತಂದಿದೆ. ಹೌದು, ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಸಂಸ್ಥೆಯಾದ ಟ್ರಾಯ್ ಜಾರಿಗೆ ತಂದಿರುವ ಪರಿಷ್ಕೃತ ಸ್ಪ್ಯಾಮ್ ನೀತಿ ಈಗ ಕೋಟ್ಯಂತರ ಮೊಬೈಲ್ ಬಳಕೆದಾರರನ್ನು ಸಮಸ್ಯೆಗೆ ಸಿಲುಕಿಸಿದೆ.

ಮುಖ್ಯವಾಗಿ ಜನರಿಗೆ ಸ್ಪ್ಯಾಮ್ ಕಿರಿಕಿರಿ ತಪ್ಪಿಸಲು ಟ್ರಾಯ್ ರೂಪಿಸಿರುವ ಹೊಸ ನೀತಿಯನ್ನು ಟೆಲಿಕಾಂ ಕಂಪನಿಗಳು ಇನ್ನೂ ಅಳವಡಿಸಿಲ್ಲ. ಆಗಸ್ಟ್ 31ಕ್ಕೆ ಟ್ರಾಯ್ ಡೆಡ್​ಲೈನ್ ನೀಡಿದೆ. ಹೀಗಾಗಿ, ಸೆ. 1ರಿಂದ ಮೊಬೈಲ್​ಗಳಿಗೆ ಒಟಿಪಿಗಳು ಬರುವುದು ಅನುಮಾನವಾಗಿದೆ. ಒಟಿಪಿಗಳಿಲ್ಲದೆ ಅನೇಕ ಸೇವೆಗಳಿಗೆ ಲಾಗಿನ್ ಆಗಲು ಸಾಧ್ಯವಾಗದೇ ಹೋಗಬಹುದು.

ಜನರ ಮೊಬೈಲ್ ನಂಬರ್​ಗಳಿಗೆ ಸ್ಪ್ಯಾಮ್ ಮೆಸೇಜ್​ಗಳು ಬರುತ್ತಿರುತ್ತವೆ. ಇಂಥ ಲಿಂಕ್​ಗಳನ್ನು ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್​ನ ಅಕ್ಸೆಸ್ ಮೂಲಕ ಹಣ ಕಳ್ಳತನ ಇತ್ಯಾದಿ ಅಪಾಯ ತಪ್ಪಿಸಲು ಟ್ರಾಯ್ ಹೊಸ ಸ್ಪ್ಯಾಮ್ ನೀತಿ ಜಾರಿಗೆ ತರುತ್ತಿದೆ. ಅದರ ಪ್ರಕಾರ ಟೆಲಿಕಾಂ ಕಂಪನಿಗಳು ಒಟಿಪಿ, ಎಸ್ಸೆಮ್ಮೆಸ್ ಕಳುಹಿಸುವ ಥರ್ಡ್ ಪಾರ್ಟಿ ಕಂಪನಿಗಳನ್ನು ನೊಂದಾಯಿಸಬೇಕು. ಸುಲಭವಾಗಿ ಓದಲು ಆಗುವಂತಹ ಮೆಸೇಜ್ ಫಾರ್ಮ್ಯಾಟ್ ಅನ್ನು ಒದಗಿಸಬೇಕು. ಆ ಮೆಸೇಜ್​ಗಳಲ್ಲಿ ಅಡಕವಾಗಲಿರುವ ಯುಆರ್​ಎಲ್​ಗಳ ಪಟ್ಟಿ ಪಡೆಯಬೇಕು. ಅವು ಅಪಾಯಕಾರಿ ಅಲ್ಲದ ಯುಆರ್​ಎಲ್​ಗಳೆಂದು ಖಾತ್ರಿಪಡಿಸಿಕೊಂಡು ವೈಟ್​ಲಿಸ್ಟ್​ಗೆ ಸೇರಿಸಲಾಗುತ್ತದೆ.

ಟೆಲಿಕಾಂ ಕಂಪನಿಗಳಲ್ಲಿ ನೊಂದಾಯಿತವಾದ ಥರ್ಡ್ ಪಾರ್ಟಿ ಸಂಸ್ಥೆಗಳು ಮಾತ್ರವೇ ಎಸ್ಸೆಮ್ಮೆಸ್ ಮತ್ತು ಒಟಿಪಿ ಕಳುಹಿಸಬಹುದು. ಈ ಪ್ರತಿಯೊಂದು ಮೆಸೇಜ್​ಗಳನ್ನು ತಂತ್ರಜ್ಞಾನ ಸಹಾಯದಿಂದ ಸ್ಕ್ಯಾನ್ ಮಾಡಲಾಗುತ್ತದೆ. ಒಂದು ವೇಳೆ ವೈಟ್​ಲಿಸ್ಟ್​ನಲ್ಲಿ ಇಲ್ಲದ ಯುಆರ್​ಎಲ್​ಗಳನ್ನು ಅದು ಒಳಗೊಂಡಿದ್ದರೆ ಅಂಥದ್ದನ್ನು ಬ್ಲಾಕ್ ಮಾಡಲಾಗುತ್ತದೆ. ಇದು ಟ್ರಾಯ್ ರೂಪಿಸಿರುವ ಪರಿಷ್ಕೃತ ನೀತಿ.

ಆದ್ರೆ ಟ್ರಾಯ್ ಸೂಚಿಸಿರುವ ಕ್ರಮವನ್ನು ಟೆಲಿಕಾಂ ಕಂಪನಿಗಳು ಇನ್ನೂ ಅಳವಡಿಸಿಲ್ಲ. ಇನ್ನಷ್ಟು ಸಮಯಾವಕಾಶಕ್ಕೆ ಈ ಕಂಪನಿಗಳು ಕೋರಿರುವುದು ತಿಳಿದುಬಂದಿದೆ. ಟ್ರಾಯ್ ಈ ಡೆಡ್​ಲೈನ್ ವಿಸ್ತರಿಸುವುದು ಅನುಮಾನ ಎನ್ನಲಾಗುತ್ತಿದೆ.

Leave A Reply

Your email address will not be published.