Nandini Desi Ghee: ಇನ್ಮುಂದೆ ಮಾರುಕಟ್ಟೆಯಲ್ಲಿ KMF ನಂದಿನಿ ಶುದ್ಧ ದೇಸಿ ಹಸುವಿನ ತುಪ್ಪ ಲಭ್ಯ; ಇಲ್ಲಿದೆ ದರ ಪಟ್ಟಿ

Nandini Desi Ghee: ಕರ್ನಾಟಕದ ಹಾಲು ಸಹಕಾರಿ ಸಂಸ್ಥೆಯಾದ ಕೆಎಂಎಫ್ನ (KMF- Karnataka Milk Federation) ನಂದಿನಿ ಬ್ರ್ಯಾಂಡ್ ಜನರ ವಿಶ್ವಾಸ ಗಳಿಸಿದೆ. ಪ್ಯಾಕೆಟ್ ಹಾಲು ಎಂದಾಗ ನೆನಪಾಗೋದು ನಂದಿನಿ ಬ್ರಾಂಡ್ ಹಾಲು. ಇದೀಗ ನಂದಿನಿ (Nandini) ಕಡೆಯಿಂದ ಶುದ್ಧ ದೇಸಿ ಹಸುವಿನ ತುಪ್ಪವನ್ನು (Desi Ghee) ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಹೌದು, ಇದೇ ಮೊದಲ ಬಾರಿಗೆ ದೇಸಿ ಹಸುವಿನ ತುಪ್ಪ ಮಾರ್ಕೆಟ್ (Market) ಗೆ ಬಂದಿದ್ದು, ಬಮೂಲ್ (BAMUL) ಬೆಂಗಳೂರು ಮಾರುಕಟ್ಟೆಗೆ ದೇಸಿ ಹಸುವಿನ ತುಪ್ಪ ಪರಿಚಯಿಸಿದೆ.
ಈ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಸಿಗುವ ನಾಟಿ ಹಸುವಿನ ಹಾಲನ್ನು ಬೆಂಗಳೂರು ಹಾಲು ಒಕ್ಕೂಟದಲ್ಲಿ ಸಂಗ್ರಹಿಸಲು ಮಾಗಡಿ ಮತ್ತು ಕನಕಪುರ ತಾಲೂಕಿನ ಮರಳವಾಡಿ, ಕೋಡಿಹಳ್ಳಿ, ಮಾಡಬಾಲು ಮತ್ತು ಕಸಬಾ ಹೋಬಳಿಯ 87 ಹಾಲು ಉತ್ಪಾದಕರ ಸಂಘಟಗಳನ್ನು ಗುರುತಿಸಲಾಗಿದೆ.
ಮುಖ್ಯವಾಗಿ ಈ ಸಂಘಗಳಲ್ಲಿ ಗಿರ್, ದೇಸಿ ಹಸುಗಳಾದ ಶಾಹೀವಾಲ್, ಅಮೃತ್ ಮಹಲ್ ಮತ್ತು ಹಳ್ಳಿಕಾರ್ ತಳಿಗಳಿಂದ ಹಾಲನ್ನು ಪ್ರಯತ್ಯೇಕವಾಗಿ ನಿಗದಿಪಡಿಸಿದರುವ ಬಲ್ಕ್ ಮಿಲ್ಕ್ ಕೂಲರ್ ಗಳಲ್ಲಿ ಸಂಗ್ರಹಿಸಿ ಪ್ರತ್ಯೇಕವಾದ ಹಾಲಿನ ಟ್ಯಾಂಕರ್ ಗಳಲ್ಲಿ ರವಾನಿಸಲಾಗುತ್ತದೆ.
ಈ ಹಾಲಿನಲ್ಲಿ 4.8ರಷ್ಟು ಜಿಡ್ಡಿನ ಅಂಶವಿರುತ್ತದೆ. ದೇಸಿ ತಳಿಯ ಪ್ರತಿ ಲೀಟರ್ ಹಾಲಿಗೆ 57.85 ರೂಪಾಯಿ ದರ ನಿಗದಿ ಮಾಡಲಾಗಿದೆ. ಇನ್ನು ನಂದಿನಿ ದೇಸಿ ಹಸುವಿನ ತುಪ್ಪದ ಬಾಟಲ್ ಗ್ರಾಹಕರಿಗೆ ಬಿಡುಗಡೆ ಮಾಡಲಾಗುತ್ತಿದ್ದು 500 ಮಿಲಿ ಬಾಟಲ್ ದರವು 900 ರೂಪಾಯಿ 200 ಮಿಲಿ ಬಾಟಲ್ ದರ 400 ರೂಪಾಯಿ ಆಗಿದೆ. ಆದ್ರೆ ಸದ್ಯಕ್ಕೆ ಪ್ರಾರಂಭಿಕ ಹಂತದಲ್ಲಿ ಇ-ಕಾಮರ್ಸ್ ಮತ್ತು ಆನ್ ಲೈನ್ ಮೂಲಕ ತುಪ್ಪದ ಮಾರಾಟ ಮಾಡಲಾಗುವುದು ಎಂದು ಕೆಎಂಎಫ್ ತಿಳಿಸಿದೆ.