Jay Shah: ICC ಹೊಸ ಅಧ್ಯಕ್ಷ, ಅಮಿತ್ ಶಾ ಪುತ್ರ ಜಯ್ ಶಾ ಒಟ್ಟು ಆಸ್ತಿ ಎಷ್ಟು ಗೊತ್ತಾ? ಗೊತ್ತಾದ್ರೆ ಆಶ್ಚರ್ಯ ಆಗುತ್ತೆ

Share the Article

Jay Shah: ಬಿಸಿಸಿಐ (BCCI) ಕಾರ್ಯದರ್ಶಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸುಪುತ್ರ ಜಯ್ ಶಾ (Jay Shah) ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಮುಂದಿನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಭಾರತೀಯರಿಗೆ ಮತ್ತೊಂದು ಹಿರಿಮೆ ಗಳಿಸಿಕೊಟ್ಟಿದ್ದಾರೆ.

ಹೌದು, 2019 ರಿಂದ 2024 ರವರೆಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಜಯ್ ಶಾ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮುಖ್ಯಸ್ಥರಾಗಿ ಜೈ ಶಾ ಆಯ್ಕೆಯಾಗಿದ್ದಾರೆ. ಈ ಮೂಲಕ ಅತೀ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಹುದ್ದೆ ಏರಿದರು ಎಂಬ ಹೆಗ್ಗಳಿಕೆಯೊಂದಿಗೆ ಐಸಿಸಿ ಚುಕ್ಕಾಣಿ ಹಿಡಿಯುವ ಮೂಲಕ ವಿಶ್ವ ಕ್ರಿಕೆಟ್​ನಲ್ಲೂ ತನ್ನ ಪ್ರಭಾವ ಬೀರಲು ಮುಂದಾಗಿದ್ದಾರೆ. ಅಂದಹಾಗೆ ಇಷ್ಟೆಲ್ಲಾ ಸಾಧನೆ ಮಾಡುತ್ತಿರುವ ಜಯ್ ಶಾ ಅವರ ಒಟ್ಟು ಆಸ್ತಿ ಎಷ್ಟು? ಓದಿದ್ದೇನು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ಕೆಲವು ವರದಿಗಳ ಪ್ರಕಾರ, ಜಯ್ ಶಾ ಅವರ ಒಟ್ಟು ಆದಾಯ ಬರೋಬ್ಬರಿ 124 ಕೋಟಿ ರುಪಾಯಿಗಳು ಎನ್ನಲಾಗುತ್ತಿದೆ. ಜಯ್ ಶಾ ಟೆಂಪಲ್ ಎಂಟರ್‌ಪ್ರೈಸೆಸ್ ಎನ್ನುವ ಉದ್ದಿಮೆಯ ಡೈರೆಕ್ಟರ್ ಆಗಿದ್ದಾರೆ. ಇದರ ಜತೆಗೆ ಕುಸುಮ್ ಫಿನ್ ಸರ್ವ್‌ ಕಂಪನಿಯ ಶೇ.60% ಷೇರು ಹೊಂದಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನಿರ್ಮಾ ಎನ್ನುವ ಖಾಸಗಿ ಯೂನಿವರ್ಸಿಟಿಯಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ.

ವಿಶೇಷ ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬಿಸಿಸಿಐ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಜಯ್ ಶಾ, ಭತ್ಯೆಗಳನ್ನು ಹೊರತುಪಡಿಸಿ ಯಾವುದೇ ರೀತಿಯ ಸಂಬಳವನ್ನು ಬಿಸಿಸಿಐನಿಂದ ಪಡೆದುಕೊಂಡಿರಲಿಲ್ಲ.

ಇನ್ನು ಜಯ್ ಶಾ ಈಗಾಗಲೇ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವುದು ಡಿಸೆಂಬರ್ 01, 2024ರಿಂದ. ಅಲ್ಲಿಂದ ಮೂರು ವರ್ಷಗಳ ಕಾಲ ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Leave A Reply