Hamsalekha: ಕನ್ನಡವ ಹೊಗಳುತ್ತಾ RSS ಹಾಗೂ ಬ್ರಾಹ್ಮಣರ ವಿರುದ್ಧ ನಾಲಗೆ ಹರಿಬಿಟ್ಟ ‘ನಾದಬ್ರಹ್ಮ’ ಹಂಸಲೇಖ !!

Hamsalekha: ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ (Hamsalekha) ಅವರು ಇತ್ತೀಚೆಗೆ ಸಂಗೀತ ಬಿಟ್ಟು ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಆರಂಭದಲ್ಲಿ ಮೋದಿಯನ್ನು ತೆಗಳಿ ನಂತರ ಕೆಲ ದಿನಗಳ ಹಿಂದೆ ಜೈನರ ಕುರಿತು ಕುಹಕವಾಡಿ, ‘ನನ್ನ ಪಂಪನಾಣೆ ಹಾಗಂದಿಲ್ಲ ಕ್ಷಮಿಸಿ’ ಎಂದು ಬೆಣ್ಣೆ ಸವರಿ ಇದೀಗ ಬ್ರಾಹ್ಮಣರನ್ನೂ ಕೆಣಕಿದ್ದಾರೆ.

ಹೌದು, ಕನ್ನಡದ ಹೆಸರು ಹೇಳಿಕೊಂಡು ಹಂಸಲೇಖ ಅವರು ಬ್ರಾಹ್ಮಣರ ವಿರುದ್ಧ ಹರಿಹಾಯ್ದಿದ್ದಾರೆ. ಹಂಸಲೇಖ (Hamsalekha) ಅವರು ಕಾರ್ಯಕ್ರಮವೊಂದರಲ್ಲಿ ಆಡಿರುವ ಒಂದು ಮಾತು ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದ್ದು, ಅವರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಹಂಸಲೇಖ ಹೇಳಿದ್ದೇನು?
ಬೆಂಗಳೂರಿನ ಬಸವ ಭವನದಲ್ಲಿ ಆಯೋಜಿಸಿದ್ದ ನಮ್ಮ ನಾಡು ನಮ್ಮ ಆಳ್ವಿಕೆ ಎಂಬ ಚಿಂತನಾ ಕಾರ್ಯಕ್ರಮದಲ್ಲಿ ಹಂಸಲೇಖ ಅವರು ಭಾಗಿಯಾಗಿದ್ದರು. ಈ ಸಭೆಯಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಕನ್ನಡದ ಸಂಗೀತ ನಿರ್ದೇಶಕ ಹಂಸಲೇಖ (Hamsalekha)’ನಾನು ಕಳೆದ 40 ವರ್ಷಗಳ ಹಿಂದೆ ಚಿಂತನ ಗಂಗಾ ಎಂಬ ಪುಸ್ತಕವನ್ನು ಓದಿದೆ. ಈ ಪುಸ್ತಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸಂವಿಧಾನವಾಗಿದೆ. ಇದನ್ನು ಚಿಂತನ ಗಂಗಾ ಎಂಬ ಪುಸ್ತಕವಾಗಿ ಮುದ್ರಣ ಮಾಡಿ ಜನರಿಗೆ ಹಂಚಿಕೆ ಮಾಡುತ್ತಾರೆ. ಅವರು ಕೊಟ್ಟ ಪುಸ್ತಕ ಎಷ್ಟು ಕೆಲಸ ಮಾಡುತ್ತದೆಂದರೆ ಪ್ರತಿಯೊಬ್ಬ ಬ್ರಾಹ್ಮಣರ ಮನೆಯಲ್ಲಿಯೂ ಭಗವದ್ಗೀತೆ ಪುಸ್ತಕದ ಪಕ್ಕದಲ್ಲಿಯೇ ಅದನ್ನು ಇಟ್ಟುಕೊಂಡಿರುತ್ತಾರೆ. ರಾಷ್ಟ್ರದಲ್ಲಿ ನಡೆಯುತ್ತಿರುವ ಸಂಗತಿಗಳಿಗೆ ವಿರುದ್ಧದವಾದ ಪ್ರತಿದಾಳಿ ಹೇಗೆ ಮಾಡಬೇಕು ಅಂತ ಆ ಚಿಂತನಾ ಗಂಗಾ ಮೂಲಕ ಮೆಸೇಜ್ ಕಳುಹಿಸುತ್ತಾರೆ ಅಂತಾ ಹೇಳಿದ್ದಾರೆ.

ಇನ್ನು ಹಂಸಲೇಖ ಅವರ ಹೇಳಿಕೆ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಕನ್ನಡಕ್ಕೆ ಬ್ರಾಹ್ಮಣ ಕೊಡುಗೆ ಏನು ಇಲ್ವಾ ಅಂತ ಸಾಕಷ್ಟು ಮಂದಿ ಪ್ರಶ್ನಿಸಿದ್ದಾರೆ. ದ.ರಾ.ಬೇಂದ್ರೆ, ಗಿರೀಶ್ ಕಾರ್ನಾಡ್, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸೇರಿ ಹಲವರು ಕನ್ನಡಕ್ಕೆ ಕೊಡುಗೆ ನೀಡಿದ್ದಾರೆ. ಆದರೆ ಇವರ ಕೊಡುಗೆ ಕನ್ನಡಕ್ಕೆ ಏನು ಇಲ್ಲವೇ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.

ಇನ್ನೊಬ್ಬರು ‘ಇವರು ಎಷ್ಟು ಜನರ ಮನೆಗೆ ಹೋಗಿ ನೋಡಿದಾರಂತೆ? ನಾನು ಫಸ್ಟ್ ಟೈಮ್ ಆ ಬುಕ್ ಬಗ್ಗೆ ಕೇಳಿದ್ದು.. ಈ ಸಾಮಾಜಿಕ ತಾಣದ ಯುಗದಲ್ಲಿ ಈ ಪರಿ ಸುಳ್ಳು ಹೇಳ್ತಾರಲ್ಲ, ನಿಜವಾಗ್ಲೂ ಇವರು ತಿಳುವಳಿಕೆ ಇರೋವ್ರಾ? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಇವರು ಹುಚ್ಚಾಸ್ಪತ್ರೆಯಲ್ಲಿ ಇರಲಿಕ್ಕೂ ಲಾಯಕ್ಕಲ್ಲ, ನಮ್ಮ ಡಿ ಬಾಸ್ ಬಳಿ ಕಳುಹಿಸಿ ಸರಿ ಹೋಗ್ತಾರೆ’ ಎಂದು ಕಾಮೆಂಟ್ ಮಾಡಿದ್ದಾರೆ.

 

Leave A Reply

Your email address will not be published.