Darshan Case: ಇವಾಗ್ಲೂ ಹೀರೋಗಿರಿ ಮಾಡಿದ್ರೆ ಬಿಟ್ಟಾರಾ ಪೊಲೀಸ್: ದರ್ಶನ್ ಕೂಲಿಂಗ್ ಗ್ಲಾಸ್ ಹಾಕಿದ್ದಕ್ಕೆ ನೋಟಿಸ್
Darshan Case: ನಟ ದರ್ಶನ್(Actor Darshan) ಈಗ ಕೊಲೆ ಆರೋಪಿ. ಅವರ ಖದರ್, ಹೀರೋಯಿಸಂ ಏನಿದ್ರು ಕೇವಲ ಸಿನಿಮಾದಲ್ಲಿ(Cinema) ಮಾತ್ರ. ಇದೆಲ್ಲ ಜೈಲಿನಲ್ಲಿ(Jail) ಅಥವಾ ಕಾನೂನಿನ(Law) ಅಡಿಯಲ್ಲಿ ನಡೆಯಲ್ಲ. ಸಿನಿಮಾ ಸ್ಟೈಲ್‌ನಲ್ಲಿ ಕೂಲಿಂಗ್ ಗ್ಲಾಸ್(Coolingg Glass) ಹಾಕಿಕೊಂಡು ಫೋಸ್ ಕೊಟ್ಟ ದರ್ಶನ್‌ಗೆ ಮತ್ತೆ ಕಂಟಕ ಎದುರಾಗಿದೆ. ಇವತ್ತು ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ(Renuka swami case) ಆರೋಪಿ ದರ್ಶನನ್ನು ಬೆಂಗಳೂರಿನ ಪರಪ್ಪ ಅಗ್ರಹಾರದಿಂದ(Parappana Agrahara) ಬಳ್ಳಾರಿಗೆ(Ballary) ವರ್ಗಾವಣೆ ಮಾಡುವ ವೇಳೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ.
ಈ ಕಾರಣಕ್ಕಾಗಿ ಬೆಳಗಾವಿ ಉತ್ತರ ವಲಯ ಬಂಧಿ ಖಾನೆ ಡಿಐಜಿ ಟಿ.ಪಿ.ಶೇಷ, ಬೆಂಗಾವಲು ಪಡೆಗೆ ಗುರುವಾರ ನೋಟಿಸ್ ಜಾರಿ ಮಾಡಿದ್ದಾರೆ. ಸಾಮಾನ್ಯ ಕೈದಿಯಂತೆ ಆರೋಪಿ ದರ್ಶನಗೆ ಕರೆದುಕೊಂಡು ಹೋಗುವ ಬದಲು ಪ್ರವಾಸಕ್ಕೆ ಕರೆದುಕೊಂಡು ಹೋದ ಹಾಗೆ ಬಳ್ಳಾರಿ ಜೈಲಿಗೆ ಕರೆದುಕೊಂಡು ಹೋಗಿದಕ್ಕೆ ಕಾರಣ ಕೇಳಿ ಡಿಐಜಿ ನೋಟಿಸ್ ನೀಡಿದ್ದಾರೆ.