Removal of forest encroachments: 2015ರ ಬಳಿಕದ ದೊಡ್ಡ ಅರಣ್ಯ ಒತ್ತುವರಿ ಮಾತ್ರ ತೆರವು: ಪಟ್ಟಾ ಭೂಮಿ ಸೇರಿ 3 ಎಕರೆಗಿಂತ ಕಡಿಮೆ ಒತ್ತುವರಿ ತೆರವಿಲ್ಲ – ಈಶ್ವರ ಖಂಡ್ರೆ ಸ್ಪಷ್ಟನೆ

Removal of forest encroachments: ಅರಣ್ಯ ಒತ್ತುವರಿ ತೆರವು ಒಂದು ಕಾನೂನು(Law) ಪ್ರಕ್ರಿಯೆ. ದೊಡ್ಡ ಅರಣ್ಯ(Big Forest) ಮತ್ತು 2015ರ ನಂತರ ಅರಣ್ಯ ಒತ್ತುವರಿಯಾದ ಜಾಗವನ್ನು(Forest encroachment land) ಮಾತ್ರ ತೆರವು(remove) ಮಾಡಿಸಲಾಗುತ್ತದೆ. ಕಾಡಂಚಿನ ಮುಗ್ದ ಕೃಷಿಕರು(Farmers), ನಾಗರೀಕರು(Publics) ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ(Forest Minister) ಈಶ್ವರ ಖಂಡ್ರೆ(Eshwar Khandre) ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಹಿತಿ ನೀಡಿರುವ ಖಂಡ್ರೆ ಅವರು, ಮಲೆನಾಡು ಮತ್ತು ಕರಾವಳಿಯಲ್ಲಿ ಕೆಲವರು ಅರಣ್ಯ ಒತ್ತುವರಿ ತೆರವಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಸರ್ಕಾರ ಬಡವರ ಭೂಮಿಯ ಒತ್ತುವರಿ ತೆರವು ಮಾಡೋದಿಲ್ಲ. ಕೇವಲ ದೊಡ್ಡ ಅರಣ್ಯ ಒತ್ತುವರಿ ಮಾಡಿರುವ ಮತ್ತು 2015ರ ನಂತರ ಒತ್ತುವರಿಯನ್ನು ಮಾಡಿರೋದನ್ನು ತೆರವು ಮಾಡಲು ಸೂಚಿಸಿರುವ ಬಗ್ಗೆ ಸಚಿವರು ಸ್ಪಷ್ಟಪಡಿಸಿದ್ದಾರೆ. ಆದರೆ 2015ಕ್ಕೆ ಮೊದಲು ಜೀವನೋಪಾಯಕ್ಕಾಗಿ ಪಟ್ಟಾ ಜಮೀನೂ ಸೇರಿ 3 ಎಕರೆಗಿಂತ ಕಡಿಮೆ ಅರಣ್ಯವನ್ನು ಕೃಷಿಗಾಗಿ ಒತ್ತುವರಿ ಮಾಡಿಕೊಂಡಿರುವವರಿಗೆ ಯಾವುದೇ ತೊಂದರೆ ನೀಡದಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಈಶ್ವರ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ.

ಶಿರೂರಿನಲ್ಲಿ ಗುಡ್ಡ ಕುಸಿತ, ಕೇರಳದ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಂತ ಘಟನೆಗಳು ಪರಿಸರ ಸಂರಕ್ಷಣೆಗೆ ಎಚ್ಚರಿಕೆಯ ಗಂಟೆಗಳು. ನದಿಗಳ ಮೂಲ ಮತ್ತು ಜೀವ ವೈವಿಧ್ಯ ತಾಣ ಪಶ್ಚಿಮ ಘಟ್ಟ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದು ಅವರು ಒತ್ತಿ ಹೇಳಿದ್ದಾರೆ. ಸಮಾಜ ಪರಿವರ್ತನಾ ಸಮುದಾಯ ಮತ್ತು ನಮ್ಮ ಬೆಂಗಳೂರು ಫೌಂಡೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಖ್ಯೆ ಡಬ್ಲ್ಯುಪಿ.ನಂ. 15511-14/ 2013 ಮತ್ತು ಡಬ್ಲ್ಯು.ಪಿ. ನಂ. 15500/2013ರಲ್ಲಿ ಕರ್ನಾಟಕ ಹೈಕೋರ್ಟ್ ಅರಣ್ಯ ಒತ್ತುವರಿ ತೆರವಿಗೆ ಆದೇಶ ನೀಡಿದೆ ಎಂದು ಸಚಿವರು ಮಾಹಿತಿ ನೀಡಿದರು.

ಅರಣ್ಯ ಹಕ್ಕು ನೀಡಲು ಕ್ರಮ:
ರಾಜ್ಯ ಸರ್ಕಾರ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಕಾಡಂಚಿನ ಜನರ ಅರಣ್ಯ ಹಕ್ಕು ಕಾಯಿದೆ ಅಡಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಪುನರ್ ಪರಿಶೀಲನೆ ಪ್ರಕ್ರಿಯೆ ಅಂತ್ಯ ಆಗುವವರೆಗೆ ಒತ್ತುವರಿ ತೆರವು ಮಾಡದಂತೆ ಸೂಚಿಸಲಾಗಿದೆ. ಇವರಿಗೆ ಅರಣ್ಯ ಹಕ್ಕುಗಳ ಮಾನ್ಯತೆ ಅಧಿನಿಯಮ 2006 ಮತ್ತು ಅದರಡಿ ಮಾಡಲಾದ ನಿಯಮಗಳನ್ನು ಸೂಕ್ತವಾಗಿ ಮತ್ತು ಸಮರ್ಪಕವಾಗಿ ಮಾರ್ಪಡು ಮಾಡಲು ಕೇಂದ್ರ ಸರ್ಕಾರವನ್ನು ಕೋರಲು ರಾಜ್ಯ ವಿಧಾನಸಭೆಯಲ್ಲಿ ಇತ್ತೀಚೆಗೆ ನಿರ್ಣಯ ತೆಗೆದುಕೊಳ್ಳಲಾಗಿದೆ.

2015ರವರೆಗೆ ಅರಣ್ಯ ಒತ್ತುವರಿ:
2015ರ ಸರ್ಕಾರದ ನಡಾವಳಿಯಲ್ಲಿ 30 ಎಕರೆಗೂ ಹೆಚ್ಚು ಒತ್ತುವರಿಯ 133 ಪ್ರಕರಣಗಳಿವೆ. ಒತ್ತುವರಿಯಾದ ಒಟ್ಟು ವಿಸ್ತೀರ್ಣ 5344.33 ಎಕರೆಯಾದ್ರೆ, 10ರಿಂದ 30 ಎಕರೆವರೆಗೆ ಒತ್ತುವರಿಯಾದ 718 ಪ್ರಕರಣಗಳಿವೆ. ಇದರಲ್ಲಿ 12898 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಲಾಗಿದೆ. 3-10 ಎಕರೆವರೆಗಿನ ಒತ್ತುವರಿ ಪ್ರಕರಣ 23,423ವಿದ್ದು ಇದರಲ್ಲಿ ಒಟ್ಟು ಒತ್ತುವರಿಯಾದ ಪ್ರದೇಶ ಬರೋಬ್ಬರಿ 71108 ಎಕರೆ.

3 ಎಕರೆಗಿಂತ ಕಡಿಮೆ ಒತ್ತುವರಿಯಾದ ವಿಸ್ತೀರ್ಣದಲ್ಲಿ ಒಟ್ಟು 86,352 ಪ್ರಕರಣಗಳಿವೆ. ಇದರಲ್ಲಿ 11,50,089.25ಎಕರೆ ಭೂಮಿ ಒಟ್ಟು ಒತ್ತುವರಿ ಮಾಡಲಾಗಿದೆ. ಈ ಬಗ್ಗೆ 14ನೇ ವಿಭಾನಸಭೆಯ 6ನೇ ಅಧಿವೇಶದಲ್ಲಿ ಚರ್ಚೆ ಮಾಡಲಾಗಿದೆ.

1996ರಲ್ಲಿ ಕೇಂದ್ರ ಸರ್ಕಾರದ ಅನುಮತಿ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗಳಲ್ಲಿ ಅರಣ್ಯಹಕ್ಕು ಕಾಯಿದೆ ಅಡಿ ಕೆಲವು ಅರ್ಹ ಒತ್ತುವರಿದಾರರ ಪ್ರಕರಣ ಬಿಟ್ಟು ಹೋಗಿರುವುದು ಗಮನಕ್ಕೆ ಬಂದಿದ್ದು, ಮೂರು ಎಕರೆಗಿಂತ ಕಡಿಮೆ (ಒತ್ತುವರಿ ಮತ್ತು ಆ ವ್ಯಕ್ತಿಯ ಪಟ್ಟಾಭೂಮಿ ಸೇರಿ) ಒತ್ತುವರಿ ಆಗಿದ್ದಲ್ಲಿ ಜೀವನೋಪಾಯಕ್ಕೆ ತೊಂದರೆ ಆಗದಂತೆ ಕ್ರಮ ವಹಿಸಲು ಅರಣ್ಯ ಸಂರಕ್ಷಣಾ ಕಾಯಿದೆ 1980ರ ಅಡಿಯಲ್ಲಿ ಭಾರತ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದೂ ತಿಳಿಸಿದ್ದಾರೆ.

ಹೈಕೋರ್ಟ್‌ಗೆ 2015ರಲ್ಲಿ 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿ ಆಗಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲಾಗಿದ್ದು, 2015ರ ನಂತರ ಯಾರ್ಯಾರು ಅರಣ್ಯ ಒತ್ತುವರಿ ಮಾಡಿದ್ದಾರೋ ಅಂತವುಗಳನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸಲಾಗುತ್ತದೆ. ಈಗಾಗಲೇ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಕಳಿಸಿರುವ ಮಾಹಿತಿಯಲ್ಲಿ 2015ರ ನಂತರ ಪಶ್ಚಿಮ ಘಟ್ಟ ಮತ್ತು ಇತರ ಘಟ್ಟದ ಅರಣ್ಯ ಪ್ರದೇಶಗಳಲ್ಲಿ ಒತ್ತುವರಿ ಮಾಡಿ ನಿರ್ಮಿಸಿರುವ ಅಕ್ರಮ ರೆಸಾರ್ಟ್, ಹೋಂಸ್ಟೇ, ತೋಟ, ಬಡಾವಣೆ ತೆರವು ಮಾಡಲು ಆದೇಶ ನೀಡಲಾಗಿದೆ ಎಂದು ಈಶ್ವರಖಂಡ್ರೆ ಹೇಳಿದರು.

Leave A Reply

Your email address will not be published.