Passport Seva portal: ಪಾಸ್ಪೋರ್ಟ್ ಸೇವಾ ಪೋರ್ಟಲ್ ನಾಳೆಯಿಂದ 4 ದಿನ ಬಂದ್: ಪಾಸ್ ಪೋರ್ಟ್ ಇಲಾಖೆ ಆದೇಶ
Passport Seva portal: ಪಾಸ್ಪೋರ್ಟ್ ಸಂಬಂಧ ಪಟ್ಟ ಕೆಲಸಗಳಿಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ. ಆಗಸ್ಟ್ 29, ಗುರುವಾರ ಸಂಜೆ 8 ಗಂಟೆಯಿಂದ ಸೆಪ್ಟಂಬರ್ 2, ಬೆಳಗ್ಗೆ 6 ಗಂಟೆಯವರೆಗೂ ಪಾಸ್ಪೋರ್ಟ್ ಸೇವಾ ಪೋರ್ಟಲ್ (Passport Seva portal) ಬಂದ್ ಆಗಿರುತ್ತದೆ. ಮುಖ್ಯವಾಗಿ ಟೆಕ್ನಿಕಲ್ ಮೈಂಟೆನೆನ್ಸ್ ಕಾರಣಕ್ಕೆ ಪೋರ್ಟಲ್ ಸುಮಾರು ನಾಲ್ಕು ದಿನ ಸಾರ್ವಜನಿಕರಿಗೆ ಅಲಭ್ಯ ಇರುತ್ತದೆ ಎಂದು ಪಾಸ್ಪೋರ್ಟ್ ಇಲಾಖೆ ತಿಳಿಸಿದೆ.
ಹೌದು, ಪಾಸ್ಪೋರ್ಟ್ ಸೇವಾ ಕೇಂದ್ರದ ಜಾಲತಾಣ ನಾಲ್ಕು ದಿನ ಬಂದ್ ಆಗಿರಲಿದೆ. ಪೋರ್ಟಲ್ನ ಟೆಕ್ನಿಕಲ್ ಮೈಂಟೆನೆನ್ಸ್ ಕಾರ್ಯ ನಡೆಯುತ್ತಿರುವುದರಿಂದ ಅದು ಸಾರ್ವಜನಿಕ ಬಳಕೆಗೆ ಲಭ್ಯ ಇರುವುದಿಲ್ಲ. ನಾಳೆ ಗುರುವಾರ(ಆಗಸ್ಟ್ 29) ಸಂಜೆ 8ರಿಂದ ಸೆಪ್ಟಂಬರ್ 2ರ ಬೆಳಗ್ಗೆ 6ಗಂಟೆಯವರೆಗೂ ಈ ಪೋರ್ಟಲ್ನಲ್ಲಿ ಯಾವ ಸರ್ವಿಸ್ ಇರುವುದಿಲ್ಲ. ಸದ್ಯ ಆಗಸ್ಟ್ 30ರಂದು ನೀಡಲಾಗಿರುವ ಎಲ್ಲಾ ಅಪಾಯಿಂಟ್ಮೆಂಟ್ಗಳನ್ನು ರದ್ದು ಮಾಡಲಾಗಿದ್ದು, ಅಪಾಯಿಂಟ್ಮೆಂಟ್ ಪಡೆದಿರುವ ಅಭ್ಯರ್ಥಿಗಳಿಗೆ ಎಸ್ಸೆಮ್ಮೆಸ್ ಮೂಲಕ ಮುಂದಿನ ಮಾಹಿತಿ ನೀಡಲಾಗುತ್ತದೆ ಎಂದು ಪಾಸ್ಪೋರ್ಟ್ ಇಲಾಖೆ ಹೇಳಿದೆ.
ಅಲ್ಲದೆ ಪಾಸ್ಪೋರ್ಟ್ ಸೇವಾ ಪೋರ್ಟಲ್ ಮಾತ್ರವಲ್ಲ, ವಿವಿಧೆಡೆ ಇರುವ ಪಾಸ್ಪೋರ್ಟ್ ಸೇವಾ ಕೇಂದ್ರಗಳೂ ಆಗಸ್ಟ್ 30ರಂದು ಬಂದ್ ಆಗಿರುತ್ತವೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಪಾಸ್ಪೋರ್ಟ್ ಸೇವಾ ವಿಭಾಗ ಈ ಬಗ್ಗೆ ಇತ್ತೀಚೆಗೆ ಮಾಹಿತಿ ನೀಡಿತ್ತು.
ಟೆಕ್ನಿಕಲ್ ಮೈಂಟೆನೆನ್ಸ್ನಿಂದಾಗಿ ಪಾಸ್ಪೋರ್ಟ್ ಸೇವಾ ಪೋರ್ಟಲ್ ಬಂದ್ ಆಗಿರುವ ಅವಧಿಯಲ್ಲಿ ನಾಗರಿಕರಿಗೆ ಹಾಗೂ ಎಲ್ಲಾ ಎಂಇಎ, ಆರ್ಪಿಒ, ಬಿಒಐ, ಡಿಒಪಿ, ಪೊಲೀಸ್ ಪ್ರಾಧಿಕಾರಗಳಿಗೆ ಸಿಸ್ಟಂ ಲಭ್ಯ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.
ventolin tablets uk: Buy Ventolin inhaler online – ventolin 108 mcg
buy ventolin no prescription