Basavaraj Bommai: ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಕೋರ್ಟ್ ಮೊರೆ ಹೋದ ಸಂಸದ ಬೊಮ್ಮಾಯಿ: ಯಾಕಿರಬಹುದು?

Bommai court stay: ರಾಜಕಾರಣದಲ್ಲಿ(Politcs) ಎಲ್ಲರೂ ಮಿತ್ರರು, ಹಾಗೆ ಶತ್ರುಗಳು ಕೂಡ. ತಮ್ಮ ಅಧಿಕಾರದ(Power) ಲಾಲಸೆಗೆ ಏನು ಬೇಕಾದರೂ ಮಾಡುತ್ತಾರೆ. ಅದು ನ್ಯಾಯ, ಅನ್ಯಾಯ, ತಪ್ಪು ಸರಿ ಯಾವುದು ತಿಳಿಯದಂತೆ. ಇತೀಚೆಗೆ ಒಬ್ಬರ ಮೇಲಿನ ದ್ವೇಷಕ್ಕೂ ಅಥವಾ ಅವರ ಚಪಲಕ್ಕೂ ಒಂದಲ್ಲ ಒಂದು ಅಸಹಜ ಪ್ರಕರಣಗಳ ಸುಳಿಯಲ್ಲಿ ರಾಜಕಾರಣಿಗಳು ಸಿಲುಕುತ್ತಿದ್ದಾರೆ. ಅವರೇ ಮಾಡಿದ ತಪ್ಪೂ ಅಥವಾ ಬೇರೆಯವರ ದ್ವೇಷ ರಾಜಕಾರಣಕ್ಕೆ ಬಲಿಯಾಗುತ್ತಾರೋ ಗೊತ್ತಿಲ್ಲ. ಒಬ್ಬರು ಇನ್ನೊಬ್ಬರನ್ನು ಹಣಿಯಲು ಖಾಸಗಿ ಮಾಹಿತಿಗಳನ್ನು ಸಿಡಿ ರೂಪದಲ್ಲಿ ಬಿಡುಗಡೆ ಮಾಡುವುದು ನಿಜಕ್ಕೂ ಹೇಸಿಗೆ ಕೆಲಸ. ಇದೀಗ ಮಾಜಿ ಮುಖ್ಯಮಂತ್ರಿ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅವರು ತಮ್ಮ ವಿರುದ್ಧ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದಾರೆ.

ಪ್ರಬುದ್ಧರು, ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿಗಳು, ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ, ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಅವರ ವಿರುದ್ಧ ಯಾವುದೇ ಮಾನಹಾನಿಯಾಗುವಂತ ಹೇಳಿಕೆಗಳ ಸುದ್ದಿ ಪ್ರಸಾರ ಮಾಡದಂತೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವರ ಪರ ವಕೀಲ ಜಗದೀಶ್ ಮಹದೇವ್ ವಿರುದ್ದವೂ ನಿರ್ಬಂಧಕಾಜ್ಞೆ ಕೋರಿದ್ದು, ಈ ಸಂಬಂಧ‌ ಕೋರ್ಟ್, ಇಂದು(ಆ. 28) ಆದೇಶ ಪ್ರಕಟಿಸಲಿದೆ ಎಂದು ಮಾಹಿತಿ ಇದೆ. ಆದರೆ ಬೊಮ್ಮಾಯಿ ಅವರು ಯಾವ ವಿಚಾರವಾಗಿ ಈ ನಿರ್ಬಂಧಕಾಜ್ಞೆ ತರಲು ಕೋರ್ಟ್‌ ಹೋಗಿದ್ದಾರೆ ಎನ್ನುವ ಬಗ್ಗೆ ಕುತೂಹಲ ಮೂಡಿಸಿದೆ.
ಒಬ್ಬರ ಚಾರಿತ್ರ್ಯ ವಧೆ, ಮಾನಹಾನಿಯಾಗುವ ಹೇಳಿಕೆಗಳು, ಅವರ ಖಾಸಗಿ ದಾಖಲೆಗಳನ್ನು ಬಿಡುಗಡೆ ಮಾಡೋದು, ಇಂತವುಗಳನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ಕೋರ್ಟ್ನಿಂದ ನಿರ್ಬಂಧಕಾಜ್ಞೆ ತರೋದು ಸಾಮಾನ್ಯ. ಆದರೆ ಬೊಮ್ಮಾಯಿ ಅವರು ಇದ್ದಕ್ಕಿದ್ದ ಹಾಗೆ ಮೀಡಿಯಾಗಳ ವಿರುದ್ಧ ನಿರ್ಬಂಧಕಾಜ್ಞೆ ತರಲು ಕಾರಣ ಏನು ಅನ್ನೋದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ನಡೆಯುತ್ತಿರುವ ರಾಜಕಾರಣದ ಮುಡಾ ಹಗರಣ ಸಂಬಂಧ ಆರೋಪ-ಪ್ರತ್ಯಾರೋಪಗಳ ಬೆನ್ನಲ್ಲೆ ರಾಜ್ಯ ಸರ್ಕಾರ ಹಳೇ ಬಿಜೆಪಿ ಸರ್ಕಾರದ ಒಂದಷ್ಟು ಹಗರಣಗಳನ್ನು ಬಯಲಿಗೆ ತರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಹಳೇ ಕೇಸ್ಗಳನ್ನು ರೀ ಓಪನ್ ಮಾಡುತ್ತಿದ್ದಾರಾ? ಇದರಲ್ಲಿ ಬೊಮ್ಮಾಯಿ ಅವರಿಗೆ ಸಂಬಂಧಪಟ್ಟ ಕೇಸ್‌ಗಳು ಏನಾದರು ಇವೆಯಾ? ಇದನ್ನು ತಡೆಯುವ ನಿಟ್ಟಿನಲ್ಲಿ ಸಂಸದರು ಕೋರ್ಟ್‌ ಮೊರೆ ಹೋದರಾ? ಎನ್ನುವ ಅನುಮಾನಗಳು ಕಾಡುತ್ತಿವೆ.

ಕೇವಲ ಬೊಮ್ಮಾಯಿ ಮಾತ್ರವಲ್ಲದೆ ಈ ಹಿಂದೆ ಸಾಲು ಸಾಲು ರಾಜಕಾರಣಿಗಳು ನಿರ್ಬಂಧಕಾಜ್ಞೆ ತಂದಿದ್ದರು. ಅದರಲ್ಲಿ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಬಹಿರಂಗ ಪ್ರಕರಣ ವೇಳೆ ಆಗಿನ ಬಿಜೆಪಿ ಸರ್ಕಾರದ 6 ಸಚಿವರು ಮಾನಹಾನಿಕರ ವರದಿ ಪ್ರಸಾರ ಮಾಡದಂತೆ ಅರ್ಜಿ ಸಲ್ಲಿಸಿ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಮೊರೆ ಹೋಗಿದ್ದರು. ಇನ್ನು ಕೆಲವರು ಸರಣಿಯಾಗಿ ತಮ್ಮ ವಿರುದ್ಧ ಯಾವುದೇ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ನಿಂದ ಸ್ಟೇ ತಂದಿದ್ದರು.

ಇದಕ್ಕೆ ಪೂರಕವೆಂಬಂತೆ ಅಂದಿನ ಸಚಿವರಾಗಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಕ್ರೀಡಾ ಸಚಿವ ನಾರಾಯಣಗೌಡ, ಸಹ ತಮ್ಮ ವಿರುದ್ಧ ಮಾನಹಾನಿಕರ ವರದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿ ಅರ್ಜಿ ಸಲ್ಲಿಸಿ ನಿರ್ಬಂಧ ಹಾಕಿಸಿದ್ದರು. ಇಷ್ಟೆ ಅಲ್ಲದೇ ಮಾಜಿ ಸಿಎಂ ಸದಾನಂದಗೌಡ ಸಹ ಅಶ್ಲೀಲ ವಿಡಿಯೋ ವೈರಲ್ ಬೆನ್ನಲ್ಲೇ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ತಂದಿದ್ದರು.

5 Comments
  1. Internet Chicks says

    Internet Chicks very informative articles or reviews at this time.

  2. MichaelLiemo says

    generic ventolin price: Buy Ventolin inhaler online – buy ventolin online cheap no prescription
    canada pharmacy ventolin

  3. Josephquees says

    buy semaglutide online: rybelsus – buy rybelsus

  4. Timothydub says

    mexico pharmacies prescription drugs: mexican pharmacy – mexico drug stores pharmacies

  5. Timothydub says

    india pharmacy mail order: indian pharmacy – buy prescription drugs from india

Leave A Reply

Your email address will not be published.