Governor-DK Shivakumar: ರಾಜಕಾರಣದ ಶತ್ರುಗಳು ಇಲ್ಲಿ ಬಾಯೀ, ಬಾಯೀ: ಒಟ್ಟಿಗೆ ಊಟ ಮಾಡಿದ ರಾಜ್ಯಪಾಲರು-ಡಿಕೆಶಿ

Governor-DK Shivakumar: ದಿನಬೆಳಗಾದರೆ ರಾಜಕಾರಣಿಗಳು ಕಚ್ಚಾಡಿ, ಕಿತ್ತಾಡಿ ಆ ಜನ್ಮ ಶತ್ರುಗಳಾಗೆ ಜನರ ಮುಂದೆ ಫೋಸ್ ಕೊಡ್ತಾರೆ. ಆದರೆ ಒಳಗೊಳಗೆ ಅವರೆಲ್ಲಾ ಬಾಯ್, ಬಾಯ್.. ಹೌದು.. ಕಳೆದ ಹಲವು ದಿನಗಳಿಂದ ಮುಡಾ ಹಗರಣ(MUDA Scam) ಕುರಿತಂತೆ ರಾಜಕೀಯದಲ್ಲಿ ದೊಂಬರಾಟವೇ ನಡೆಯುತ್ತಿದೆ. ಅದರಲ್ಲೂ ರಾಜ್ಯಪಾಲ(Governor) ಥಾವರ್ ಚಂದ್ ಗೆಹಲೊಟ್ ಅವರು ಸಿಎಂ(CM) ವಿರುದ್ಧ ಪ್ರಾಸಿಕ್ಯೂಷನ್‌ಗೆ(Procicution) ಅನುಮತಿ ನೀಡಿರುವುದು, ಆಡಳಿತ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ.

ಸಿಎಂ ಸಿದ್ದರಾಮಯ್ಯ ಅವರಿಗಿಂತಲೂ ಒಂದು ಹೆಜ್ಜೆ ಮುಂದೆಯಾಗಿ ಡಿಸಿಎಂ, ಡಿ ಕೆ ಶಿವಕುಮಾರ್(D K Shivakumar) ರಾಜ್ಯಪಾಲರ ಕ್ರಮದ ಮೇಲೆ ಕೆಂಡಾಮಂಡಲರಾಗಿದ್ದಾರೆ. ರಾಜ್ಯಪಾಲರ ಮೇಲೆ ಅನೇಕ ಕೆಟ್ಟ ಪದಗಳನ್ನು ಬಳಸಿದ್ದಲ್ಲದೆ, ನಿಂದನೆಯನ್ನು ಮಾಡಿದ್ದಾರೆ. ಆದರೆ ಇಂದು ಇಬ್ಬರು ಜೊತೆಗೆ ಕೂತು ಕಾರ್ಯಕ್ರಮವೊಂದರಲ್ಲಿ ಆಪ್ತ ಸ್ನೇಹಿತರಂತೆ ಊಟ ಮಾಡಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬುಧವಾರ ನಡೆದ ಸಚಿವ ಬೈರತಿ ಸುರೇಶ್ ಅವರ ಪುತ್ರ ಸಂಜಯ್ ಹಾಗೂ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಪುತ್ರಿ ಅಪೂರ್ವ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಅವರು ಪಾಲ್ಗೊಂಡರು. ಸಚಿವ ಡಾ ಎಂ ಸಿ ಸುಧಾಕರ್, ಶಾಸಕ ಶರತ್ ಬಚ್ಚೇಗೌಡ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಿಸಿಎಂ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹಲೊಟ್ ಒಟ್ಟಿಗೆ ಊಟ ಮಾಡಿದರು.