Haveri: 10 ತಿಂಗಳ ಗೃಹಲಕ್ಷ್ಮೀ ದುಡ್ಡು ಕೂಡಿಟ್ಟು ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಕೊಟ್ಟ ಅತ್ತೆ- ಭೇಷ್ ಎಂದ ನಾಡಿನ ಜನತೆ !!

Haveri: ಕಾಂಗ್ರೆಸ್ ಸರ್ಕಾರ ಕೊಡಮಾಡುವ ಗೃಹಲಕ್ಷ್ಮೀ ಹಣದಿಂದ ರಾಜ್ಯದ ಮಹಿಳೆಯರು ಫುಲ್ ಖುಷ್ ಆಗಿದ್ದಾರೆ. ಈ ಹಣ ಎಷ್ಟೋ ಮನೆಯನ್ನು ಬೆಳಗುತ್ತಿದೆ ಎಂದರೆ ಅದು ತಪ್ಪಾಗಲಾರದು. ಒಟ್ಟಿನಲ್ಲಿ ಗೃಹಲಕ್ಷ್ಮೀ ದುಡ್ಡು ಒಳ್ಳೆಯ ರೀತಿ ಸದುಪಯೋಗವಾಗುತ್ತಿರುವುದು ಖುಷಿಯ ಸಂಗತಿ.

ಈಗಾಗಲೇ ಯಜಮಾನಿಯರು ಪ್ರತೀ ತಿಂಗಳು ಬರುವ ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ಫ್ರಿಡ್ಜ್, ವಾಷಿಂಗ್ ಮೆಷಿನ್, ಟಿವಿ ಕೊಂಡದ್ದನ್ನು ನೋಡಿದ್ದೇವು. ಕೆಲವು ದಿನಗಳ ಹಿಂದೆ ಮುದುಕಿಯೊಬ್ಬಳು ಅದೇ ದುಡ್ಡಲ್ಲಿ ಮುತ್ತೈದೆಯರಿಗೆ ಹೋಳಿಗೆ ಊಟ ಹಾಕಿಸಿ, ಸಿದ್ದರಾಮಯ್ಯ ಅವರಿಂದ ಸೀರೆ ಪಡೆದದ್ದನ್ನೂ ನೋಡಿದ್ದೆವು. ಈ ಬೆನ್ನಲ್ಲೇ ಗೃಹಲಕ್ಷ್ಮೀ ಹಣ ಉತ್ತಮ ರೀತಿ ಸದುಪಯೋಗವಾಗುತ್ತಿದೆ, ಬದುಕನ್ನು ಕಟ್ಟಿ ಕೊಡುತ್ತಿದೆ ಎಂಬುವುದಕ್ಕೆ ಮತ್ತೊಂದು ಉದಾಹರಣೆಯೊಂದು ಬೆಳಕಿಗೆ ಬಂದಿದ್ದು, ಇಡೀ ನಾಡಿನ ಜನ ಭೇಷ್ ಅನ್ನುತ್ತಿದ್ದಾರೆ.
ಅದೇನೆಂದರೆ ಹಾವೇರಿ (Haveri) ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ನೀರಲಗಿ ಗ್ರಾಮದಲ್ಲಿ ಗೃಹಲಕ್ಷ್ಮೀ ಹಣದಿಂದ ಪ್ಯಾನ್ಸಿ ಸ್ಟೋರ್ ಪ್ರಾರಂಭವಾಗಿದೆ. ಹೌದು, ಅತ್ತೆಯೊಬ್ಬಳು 10 ತಿಂಗಳ 20, 000 ಗೃಹಲಕ್ಷ್ಮೀ ದುಡ್ಡನ್ನು ಕೂಡಿಟ್ಟು ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಕೊಟ್ಟಿದ್ದಾರೆ. ಅಂದಹಾಗೆ ಸೊಸೆ ಹೊರಗೆ ಕೆಲಸಕ್ಕೆ ಹೋಗಬಾರದು ಎಂದು ಮನೆಯಲ್ಲೇ ಫ್ಯಾನ್ಸಿ ಸ್ಟೋರ್ ಇಟ್ಟುಕೊಟ್ಟ ಅತ್ತೆ ಕಾರ್ಯಕ್ಕೆ ಈಗ ಜನ ಶಹಬ್ಬಾಸ್ ಅಂತಿದ್ದಾರೆ.
ಶ್ರಾವಣ ಮಂಗಳವಾರದ ಶುಭದಿನದಂದೇ ಫ್ಯಾನ್ಸಿ ಸ್ಟೋರ್‌ಗೆ ಪೂಜೆ ಮಾಡಿ ಚಾಲನೆ ನೀಡಿದರು. ಸಂಭ್ರಮದಿಂದ ಫ್ಯಾನ್ಸಿ ಸ್ಟೋರ್ ಶುರು ಮಾಡಿದ ಅತ್ತೆ-ಸೊಸೆ ಪರಸ್ಪರ ಭಾವುಕರಾದರು. ಸೊಸೆ ಮಗಳಿದ್ದಂಗೆ, ಅವಳು ಹೊರಗೆ ದುಡಿಯೋಕೆ ಹೋಗೋದು ಬೇಡ ಅಂತಾ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟಿದ್ದಾರೆ. ಸೊಸೆಯೂ ಅತ್ತೆಯ ಈ ಉಪಕಾರಕ್ಕೆ ಕಣ್ಣೀರ ಕರೆದಿದ್ದಾರೆ.