Deer hunters arrest: ನಾಗರಹೊಳೆ ಉದ್ಯಾನ ಅರಣ್ಯದಂಚಿನಲ್ಲಿ ಜಿಂಕೆ ಬೇಟೆ: ಅಧಿಕಾರಿಗಳ ಕೈಗೆ ಸಿಕ್ಕವರೆಷ್ಟು? ಪರಾರಿಯಾದವರೆಷ್ಟು?
Deer hunters arrest: ನಾಗರ ಹೊಳೆ ಉದ್ಯಾನದಂಚಿನ(Nagarahole Natinal park) ವೀರನಹೊಸಹಳ್ಳಿ ಪ್ರಾದೇಶಿಕ ಅರಣ್ಯ ಪ್ರದೇಶದಲ್ಲಿ(Forest area) ಮೂವರು ಖದೀಮರು ಜಿಂಕೆ ಬೇಟೆಯಾಡಿದ್ದಾರೆ(Deer hunt). ನಂತರ ಅದನ್ನು ಅಲ್ಲೇ ಕಾಡಲ್ಲಿ ಮಾಂಸ(Meat) ಮಾಡಿ ಸಾಗಿಸುವ ವೇಳೆ ಆರೋಪಿಗಳು ಅರಣ್ಯ ಇಲಾಖೆ ಅಧಿಕಾರಿಗಳು(Forest department officers) ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಆದರೆ ಕಿರಂಗೂರು ಗೇಟ್ ಬಳಿಯಲ್ಲಿ ಓರ್ವನನ್ನು ಬಂಧಿಸಿದರೆ(Arrest), ಇನ್ನಿಬ್ಬರು ಆರೋಪಿಗಳು ತಪ್ಪಿಸಿಕೊಂಡು(Escape) ಓಡಿ ಹೋಗಿದ್ದಾರೆ.
ಉದ್ಯಾನದಂಚಿನ ಹನಗೋಡು ಹೋಬಳಿಯ ಭರತವಾಡಿ ಹಾಡಿಯ ರುದ್ರನನ್ನು ಬಂಧಿತ ಆರೋಪಿ, ಈತನಿಂದ ಎರಡು ಕೆ.ಜಿಯಷ್ಟು ಜಿಂಕೆ ಮಾಂಸ, ಜಿಂಕೆ ರ್ಮಪಪ, ಕೃತ್ಯಕ್ಕೆ ಬಳಸಿದ್ದ ಬೈಕ್, ಒಂದು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಮತ್ತಿಬ್ಬರು ಆರೋಪಿಗಳಾದ ಕಪ್ಪನಕಟ್ಟೆ ಹಾಡಿಯ ರಾಮು ಹಾಗೂ ಅವ್ವು ತಲೆ ಮರೆಸಿಕೊಂಡಿದ್ದಾರೆ.
ಆರೋಪಿಗಳು ಜಿಂಕೆಯನ್ನು ಭೇಟೆಯಾಡಿ ಮಾಂಸವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಹುಣಸೂರು ವನ್ಯಜೀವಿ ವಿಭಾಗದ ಆರ್.ಎಫ್.ಓ.ಸುಬ್ರಮಣ್ಯ ಕೆ.ಇ, ಆನೆಚೌಕೂರು ವಲಯದ ಡಿಆರ್ಎಫ್ಓ ಶಿವಕುಮಾರ್ ಹಾಗೂ ಗಸ್ತು ಅರಣ್ಯ ಪಾಲಕರು ಹಾಗೂ ಸಿಬ್ಬಂದಿ ಹನಗೋಡಿಗೆ ಸಮೀಪದ ಕಿರಂಗೂರು ಗೇಟ್ ಬಳಿ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದ್ದು, ಉಳಿದಿಬ್ಬರು ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ನಾಗರಹೊಳೆ ಹುಲಿಯೋಜನೆ ನಿರ್ದೇಶಕಿ ಪಿ.ಎ.ಸೀಮಾ ತಿಳಿಸಿದ್ದಾರೆ.