America agri meet: ಕೃಷಿ ಯಂತ್ರೋಪಕರಣ ಉತ್ಪಾದನೆ: ರಾಜ್ಯದಲ್ಲಿ ಹೂಡಿಕೆಗೆ ಅಮೇರಿಕಾದಲ್ಲಿ ಕೃಷಿ ಸಚಿವರ ಆಹ್ವಾನ!
America agri meet: ಕೃಷಿ ಸಚಿವರಾದ (Agriculture Minister) ಎನ್ ಚಲುವರಾಯಸ್ವಾಮಿ(N Cheluvanarayana swami) ಅವರು ಅಮೇರಿಕಾದ(America) ಅಯೋವಾ ರಾಜ್ಯದ ಬೂನೆ ನಗರದಲ್ಲಿ ನಡೆಯುತ್ತಿರುವ ಅತ್ಯಾಧುನಿಕ ಕೃಷಿ ಯಂತ್ರಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ (Mega exhibition and sale fair of state-of-the-art farm machinery) ಭಾಗವಹಿಸಿದ್ದು, ರಾಜ್ಯದಲ್ಲಿ ಉತ್ಪಾದನೆ ಹೂಡಿಕೆಗೆ(investment in manufacturing) ಆಹ್ವಾನಿಸಿದ್ದಾರೆ. ಕೃಷಿ ಇಲಾಖೆ(Agricultural Department) ಹಿರಿಯ ಅಧಿಕಾರಿಗಳ ತಂಡದೊಂದಿಗೆ ಪ್ರದರ್ಶನ ಮೇಳಕ್ಕೆ ಭೇಟಿ ನೀಡಿರುವ ಸಚಿವರು ಹೊಸದಾಗಿ ಆವಿಷ್ಕಾರಗೊಂಡಿರುವ ಯಂತ್ರೋಪಕರಣಗಳನ್ನು ಪರಿಶೀಲಿಸಿ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿ ಕೃಷಿಯನ್ನು ಸುಸ್ಥಿರ ಹಾಗೂ ಲಾಭದಾಯಕ
ವನ್ನಾಗಿಸಬೇಕಿದೆ. ಶ್ರಮ ಮತ್ತು ವೆಚ್ಚ ಕಡಿತಗೊಳಿಸಿ ಉತ್ಪಾದನೆ ಹೆಚ್ಚಿಸಲು ಇಂತಹ ಆಧುನಿಕ ಯಂತ್ರೋಪಕರಣಗಳ ಬಳಗೆ ಸಹಕಾರಿಯಾಗಲಿದೆ ಎಂದು ಸಚಿವ ಎನ್ ಚಲುವರಾಯಸ್ವಾಮಿ ಅಭಿಪ್ರಾಯ ಪಟ್ಟರು.
ಈ ಕೃಷಿ ಯಂತ್ರೋಪಕರಣಗಳ ಪ್ರದರ್ಶನದಲ್ಲಿ ಕೃಷಿ ಸಚಿವರು ಪ್ರಮುಖವಾಗಿ ರೋಬೋಟಿಕ್ ಟೆಕ್ನಾಲಜಿ, ಕೃತಕ ಬುದ್ಧಿಮತ್ತೆಯಿಂದ ಚಲಿಸಲ್ಪಡುವ ಯಂತ್ರಗಳನ್ನು ಗಮನಿಸಿ ಮಾಹಿತಿ ಪಡೆದರು. ರಾಜ್ಯದ ವಿಭಿನ್ನ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗು ಹಲುವು ಬೆಳೆಗಳ ಬಿತ್ತನೆ, ನಿರ್ವಹಣೆ ಕಟಾವಿಗೂ ನೆರವಾಗುವ ಹೊಸ ಯಂತ್ರಗಳು ಆವಿಷ್ಕಾರ ಗೊಂಡಿರುವುದನ್ನು ಗಮನಿಸಿದ ಸಚಿವರು ಮೆಸ್ಸೆ ಫರ್ಗೂಸನ್, ಜಾನ್ ಡೀರ್, ಕುಬೋಟಾ, ಅಗ್ರಿ ಏರೋ ಸ್ಪೇಸ್ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದರು. ಈ ದೊಡ್ಡ ಯಂತ್ರಗಳನ್ನು ಕರ್ನಾಟಕದಲ್ಲಿಯೇ ಉತ್ಪಾದನೆ ಮಾಡಲು ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು .
ಹಾಗಾಗಿ ರಾಜ್ಯದಲ್ಲೇ ಹೂಡಿಕೆ ಮಾಡುವಂತೆ ಸಚಿವ ಎನ್ ಚಲುವರಾಯಸ್ವಾಮಿ ಉದ್ಯಕಿಗಳನ್ನು ಆಹ್ವಾನಿಸಿದರು. ಇದರ ಜೊತೆಗೆ ಕೃಷಿ ಸಚಿವರು ಬಿಡುವು ಮಾಡಿಕೊಂಡು ಅಮೇರಿಕಾದ ಕೃಷಿ ಕ್ಷೇತ್ರಗಳಿಗೂ ಭೇಟಿ ನೀಡಿ ಅಲ್ಲಿ ಬಳಸಲಾಗುತ್ತಿರುವ ತಂತ್ರಜ್ಞಾನಗಳನ್ನು ಪರಿಶೀಲಿಸಿದರು
ಕೃಷಿ ಇಲಾಖೆ ಕಾರ್ಯದರ್ಶಿ ವಿ ಅನ್ಬುಕುಮಾರ್, ಅಪರ ಕೃಷಿ ನಿರ್ದೇಶಕರಾದ ವೆಂಕಟ ರಮಣ ರೆಡ್ಡಿ,ಕೆಪೆಕ್ ಅಧ್ಯಕ್ಷರಾದ ಹರೀಶ್ ಕೆಪೆಕ್ ವ್ಯವಸ್ಥಾಪಕ ನಿರ್ದೇಶಕರಾದ ಬಂಥನಾಳ್ ,ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಸಚಿವರೊಂದಿಗೆ ಕೃಷಿ ಯಂತ್ರೋಪಕರಣ ಪ್ರದರ್ಶನ ಮೇಳದಲ್ಲಿ ಭಾಗವಹಿಸಿದ್ದರು.
ಬೃಹತ್ ವಸ್ತು ಪ್ರದರ್ಶನ
ಅಮೇರಿಕಾ ದೇಶದ ಅಯೋವಾ ಪ್ರಾತ್ಯದ ಬೊನೆ ನಗರದಲ್ಲಿ ಏರ್ಪಡಿಸಿರುವ ಕೃಷಿ ಅಭಿವೃದ್ಧಿ ಪ್ರದರ್ಶನ ಅಮೇರಿಕಾದಲ್ಲಿ ನಡೆಯುವ ವಿಶ್ವದ ಅತೀ ದೊಡ್ಡ ಕೃಷಿ ಪ್ರದರ್ಶನಗಳಲ್ಲಿ ಒಂದಾಗಿದೆ. ವಿಶ್ವದ ಅನೇಕ ಕೃಷಿ ಯಂತ್ರೋಪಕರಣಗಳ ಉತ್ಪಾದನಾ ಸಂಸ್ಥೆಗಳು ಇದರಲ್ಲಿ ಭಾಗವಹಿಸುತ್ತವೆ .ಪ್ರತಿ ವರ್ಷ ಹೊಸ ಆವಿಷ್ಕಾರಗಳು ಇಲ್ಲಿ ಪರಿಚಯಿಸಲ್ಪಡುತ್ತವೆ.