Ladhak: ಭಾರತದ ಈ ಊರಿನ ಗಂಡಸರಿಂದ ಗರ್ಭದರಿಸಲು ದುಡ್ಡು ಕೊಟ್ಟು ವಿದೇಶದಿಂದ ಬರ್ತಾರೆ ಮಹಿಳೆಯರು – ಏನದು ಈ ಊರ ಪುರುಷರ ಸ್ಪೆಷಾಲಿಟಿ?
Ladhak: ಭಾರತ ಅತೀ ಸುಂದರ ಪ್ರವಾಸಿ ತಾಣ. ವಿದೇಶಿಗರನ್ನು ಕೈ ಬೀಸಿ ಕರೆಯುವ ನಾಡು. ವಿದೇಶಿಯರು ಪ್ರವಾಸ ಹೊರಟಾಗ ಭಾರತ ಅವರ ಮೊದಲ ಆದ್ಯತೆ ಆಗಿರುತ್ತದೆ. ಅದರಲ್ಲೂ ಕೆಲವು ಭಾರತದ ಸ್ಥಳಗಳೆಂದರೆ ಅವರಿಗೆ ಬಲು ಇಷ್ಟ. ಅದರಲ್ಲೂ ಭಾರತದ ಈ ಒಂದು ಗ್ರಾಮಕ್ಕೆ ವಿದೇಶದ ಮಹಿಳೆಯರು ಎಣಿಕೆಯೇ ಸಿಗದಂತೆ ಬಂದು ಹೋಗುತ್ತಾರೆ. ಬರುವಾಗ ಒಬ್ಬರಿದ್ದವರು ಹೋಗುವಾಗ ಇಬ್ಬರಾಗುತ್ತಾರೆ. ಹಾಗಿದ್ರೆ ಏನು ಈ ಊರಿನ ವಿಶೇಷತೆ?
ವಿದೇಶಿ ಮಹಿಳೆಯರನ್ನು ಕೈ ಬೀಸಿ ಕರೆಯುವ ಆ ಊರೆಂದರೆ ಅದು ಭಾರತದ ಲಡಾಖ್. ಲಡಾಖ್ ತನ್ನ ನೈಸರ್ಗಿಕ ಸೌಂದರ್ಯದಿಂದಾಗಿ ಪ್ರತಿ ವರ್ಷ ಅರ್ಧ ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಶಾಂತ ಸುಂದರ ಸರೋವರಗಳು, ವಿಶಾಲವಾದ ಶೀತ ಮರುಭೂಮಿ ಮತ್ತು ಪ್ರಾಚೀನ ಬೌದ್ಧ ಮಠಗಳು ಲಡಾಖ್‌ನ ಕೆಲವು ಆಕರ್ಷಕ ವೈಶಿಷ್ಟ್ಯಗಳಾಗಿವೆ. ಇದಿಷ್ಟೇ ಅಲ್ಲದೆ, ಲಡಾಖ್ ಮತ್ತೊಂದು ವಿಚಾರದಲ್ಲಿ ಎಲ್ಲರ ಗಮನ ಸೆಳೆಯುತ್ತದೆ. ಅದುವೇ ಪ್ರೆಗ್ನೆನ್ಸಿ ಪ್ರವಾಸೋದ್ಯಮ.
ಹೌದು, ಜಮ್ಮು ಕಾಶ್ಮೀರದ ಲಡಾಕ್‌ನಲ್ಲಿ ಈ ಪುಟ್ಟ ಗ್ರಾಮವಿದೆ. ಕಾರ್ಗಿಲ ಪ್ರದೇಶದಿಂದ 70 ಕಿಲೋ ಮೀಟರ್ ದೂರದಲ್ಲಿ ಆರ್ಯನ್ ವ್ಯಾಲಿ ಎಂದ ಹೆಸರಿನ ಗ್ರಾಮಕ್ಕೆ ವಿದೇಶಿ ಮಹಿಳೆಯರು ಗರ್ಭಿಣಿಯಾಗಲು ಬರುತ್ತಾರೆ. ಇಲ್ಲಿಯ ಪುರುಷರ ಜೊತೆ ಕೆಲ ಸಮಯ ಇರೋ ಮಹಿಳೆಯರು ಗರ್ಭಿಣಿಯಾಗುತ್ತಲೇ ತಮ್ಮ ದೇಶಕ್ಕೆ ಹೊರಡುತ್ತಾರೆ. ಇದೀಗ ಇದು ಒಂದು ರೀತಿಯ ವ್ಯವಹಾರವಾಗಿದೆ. ಯುರೋಪ್ ಭಾಗದ ಮಹಿಳೆಯರೇ ಹೆಚ್ಚು ಆರ್ಯನ್ ವ್ಯಾಲಿಗೆ ಬರುತ್ತಾರೆ.
ಇದರ ಹಿಂದಿನ ಕಾರಣ ಏನು?
ಲಡಾಖ್‌ನ ಎತ್ತರದ ಪರ್ವತ ಶ್ರೇಣಿಗಳಲ್ಲಿ ಸಿಂಧೂ ನದಿಯ ದಡದಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಕೆಲವು ಹಿಮಾಲಯನ್ ಹಳ್ಳಿಗಳಿವೆ. ಈ ಗ್ರಾಮಗಳನ್ನು ಪ್ರೋಕ್ಷಾ (Brokpa) ಬುಡಕಟ್ಟು ಜನಾಂಗದವರ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ಈ ಬೋಕ್ಷಾ ಬುಡಕಟ್ಟಿಗೆ ಸೇರಿದ ಜನರು ನಿಜವಾಗಿಯೂ ಆರ್ಯನ್ ವಂಶಕ್ಕೆ ಸೇರಿದವರೆಂದು ನಂಬಲಾಗಿದೆ.
ಬೋಕ್ಷಾ ಸಮುದಾಯವು ವಿಸ್ತಾರವಾದ ಹೂವಿನ ಶಿರಸ್ತ್ರಾಣಗಳಿಗೆ ಹೆಸರುವಾಸಿಯಾಗಿದೆ. ಪ್ರೋಕ್ಷಾ ಸಮುದಾಯದ ಪುರುಷರು ಎತ್ತರದ ಮತ್ತು ಗಟ್ಟಿಮುಟ್ಟಾಗಿದ್ದು, ಬಾದಾಮಿ ಆಕಾರದ ನೀಲಿ-ಹಸಿರು ಕಣ್ಣುಗಳನ್ನು ಹೊಂದಿರುತ್ತಾರೆ ಮತ್ತು ತಿಳಿ ಕಂದು ಬಣ್ಣದ ಕೂದಲು ಹಾಗೂ ಅತಿರಂಜಿತ ಬಟ್ಟೆಗಳನ್ನು ಧರಿಸುತ್ತಾರೆ. ಈ ಪ್ರೋಕ್ಷಾ ಬುಡಕಟ್ಟು ಲಡಾಖ್‌ನಲ್ಲಿ ಮಾತ್ರ ಕಂಡುಬರುತ್ತದೆ. ಚಕ್ರವರ್ತಿ ಅಲೆಕ್ಸಾಂಡರ್ ಸೈನ್ಯದೊಂದಿಗೆ ಸಂಬಂಧ ಹೊಂದಿರುವ ಅವರನ್ನು ಸಾಮಾನ್ಯವಾಗಿ ಶುದ್ಧ-ರಕ್ತದ ಆರ್ಯರು ಎಂದು ಕರೆಯಲಾಗುತ್ತದೆ. ಅನೇಕ ಮಹಿಳೆಯರು ಇಲ್ಲಿನ ಪುರುಷರಿಂದ ಮಕ್ಕಳನ್ನು ಹೊಂದಲು ಪ್ರಪಂಚದ ವಿವಿಧ ಭಾಗಗಳಿಂದ ಬರುತ್ತಾರೆ. ಆರ್ಯರ ರಕ್ತ, ಚಾರಿತ್ರ್ಯ ಮತ್ತು ರೂಪವುಳ್ಳ ಮಕ್ಕಳನ್ನು ಪಡೆಯುವುದು ಮಹಿಳೆಯರು ಭೇಟಿ ನೀಡುವ ಏಕೈಕ ಉದ್ದೇಶವಾಗಿದೆ. ಇದು ಈ ಪ್ರದೇಶದಲ್ಲಿ ವ್ಯಾಪಾರವಾಗಿ ಬೆಳೆದಿದೆ.
ಇಲ್ಲಿಗೆ ಬರುವ ವಿದೇಶಿ ಮಹಿಳೆಯರು ತಮ್ಮೊಂದಿಗೆ ದೈಹಿಕ ಸಂಪರ್ಕ ಹೊಂದಲು ಪುರುಷರಿಗೆ ಭಾರೀ ಮೊತ್ತದ ಹಣ ನೀಡುತ್ತಾರೆ. ತಾವು ಗರ್ಭಿಣಿ ಎಂದು ಖಚಿತವಾಗುವರೆಗೂ ಇಲ್ಲಿಯೇ ಉಳಿದುಕೊಳ್ಳುತ್ತಾರೆ. ಗರ್ಭಿಣಿಯಾಗಿರೋದು ಧೃಢವಾಗುತ್ತಿದ್ದಂತೆ ಇಲ್ಲಿಂದ ಹೊರಡುತ್ತಾರೆ.