Rachita Ram: ಪವಿತ್ರ ಗೌಡ ಅಲ್ಲ, ಈಗ ನಟಿ ರಚಿತರಾಮ್ ನಿಂದ ದರ್ಶನ್ ಗೆ ಸಂಕಷ್ಟ ?! ಏನಪ್ಪಾ ಇದು ಹೊಸ ಮ್ಯಾಟರ್?

Rachita Ram: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಾ ಆರೋಪಿಯಾಗಿ ಜೈಲು ಸೇರಿರುವ ದರ್ಶನ್(Darshan) ಈ ಸ್ಥಿತಿಗೆ ಪವಿತ್ರ ಗೌಡ ಕಾರಣ ಎಂದು ಆರೋಪಿಸಲಾಗಿತ್ತು. ಒಂದು ಹಂತದಲ್ಲಿ ಪವಿತ್ರಾಳಿಂದಲೇ ದರ್ಶನ್ ಗೆ ಈ ಸ್ಥಿತಿ ಬಂದಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುವ ವಿಚಾರ. ಆದರೀಗ ಪವಿತ್ರ ಗೌಡ ಮಾತ್ರವಲ್ಲ, ಈಗ ನಟಿ ರಚಿತರಾಮ್(Rachita Ram) ನಿಂದಲೂ ದರ್ಶನ್ ಗೆ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ.
ಹೌದು, ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿರೋ ನಟ ದರ್ಶನ್(Darshan) ಪರಪ್ಪನ ಅಗ್ರಹಾರದಲ್ಲಿ(Parappana Agrahara) ಮುದ್ದೆಮುರಿಯುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ರೆ ಅಲ್ಲಿನ ಕಥೆಯೇ ಬೇರೆ ಇದೆ. ಜೈಲೊಳಗಿರುವ ಕಿಲ್ಲಿಂಗ್ ಸ್ಟಾರ್ ಬಿಂದಾಸ್ ಲೈಫ್ ಲೀಡ್ ಮಾಡುತ್ತಿದ್ದಾರೆ. ಕಾಫಿ, ಸಿಗರೇಟ್ ಹೊಡೆಯುತ್ತಾ, ವಿಡಿಯೋ ಕಾಲ್ ಮಾಡುತ್ತಾ, ಬಿರಿಯಾನಿ ಚಪ್ಪರಿಸುತ್ತಾ ರೆಸಾರ್ಟ್ ಜೀವನ ನಡೆಸುತ್ತಿದ್ದಾರೆ. ವೈರಲ್ ಆದ ಫೋಟೋಗಳೇ ಇದಕ್ಕೆ ಸಾಕ್ಷಿ. ಆದರೀಗ ಈ ವಿಚಾರ ಕುರಿತೇ ರಚಿತರಾಮ್ ದರ್ಶನ್ ಗೆ ದೊಡ್ಡ ಸಂಕಷ್ಟ ತಂದಿದ್ದಾರೆ ಎಂಬ ಗುಸು ಗುಸು ಶುರುಶಾಗಿದೆ.
ಯಸ್, ಕುಡಿಯುತ್ತಾ ಸಿಗರೇಟ್ ಸೇದುತ್ತಾ ಜೈಲಿನ ಆವರಣದ ಒಳಗೆ ಕುಳಿತಿರುವ ಫೋಟೋ ಎನ್ನಲಾಗಿರುವ ಒಂದು ದೃಶ್ಯ ಸದ್ಯ ವೈರಲ್ ಆಗಿದೆ. ಇದು ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಈ ಫೋಟೋ ಹಿಂದೆ ರಚಿತಾ ರಾಮ್ ಅವರ ಹೆಸರು ಸಹ ಕೇಳಿ ಬರ್ತಿದೆ.
ಅದೇನೆಂದರೆ ಕಳೆದ ಗುರುವಾರ ನಟಿ ರಚಿತಾ ರಾಮ್ ಅವರು ದರ್ಶನ್ ಅವರನ್ನು ಭೇಟಿಯಾಗೋಕೆ ಪರಪ್ಪನ ಅಗ್ರಹಾರಕ್ಕೆ ತೆರಳಿದ್ರು. ಈ ವೇಳೆ ನಟ ದರ್ಶನ್ ಅವರು ತಮ್ಮ ಬ್ಯಾರಕ್ ಬಿಟ್ಟು ಬಂದು ರಚಿತಾ ರಾಮ್ ಅವರನ್ನು ಭೇಟಿಯಾಗಿದ್ದರು. ಇತ್ತ ರಚಿತಾ ರಾಮ್ ಮಾತಾಡಿ ಹೊರಟ ನಂತ್ರ ಅಲ್ಲೇ ಇದ್ದ ವಿಲ್ಸನ್ ಗಾರ್ಡನ್ ನಾಗ ದರ್ಶನ್ ಅವರಿಗೆ ಆಹ್ವಾನ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಬ್ಯಾರಕ್ ಬಿಟ್ಟು ಹೇಗು ಬಂದಿದ್ದೇನೆ ಕೂತು ಮಾತನಾಡೋಣ ಅಂತ ದರ್ಶನ್ ಅಲ್ಲೇ ಕೂತು ಧಮ್ ಎಳೆದಿದ್ದಾರೆ. ಒಂದು ವೇಳೆ ರಚಿತಾ ರಾಮ್ ಅವರು ಜೈಲಿಗೆ ಬರದಿದ್ದರೆ ನಮ್ಮ ಬಾಸ್ ಬ್ಯಾರಕ್ ಬಿಟ್ಟು ಬರ್ತಿಲಿಲ್ಲ ಅಂತ ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಆದರೆ ರಚಿತರಾಮ್ ಇದಕ್ಕೂ ಯಾವ ಸಂಬಂಧವೂ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.