Fake Baba: ರೋಗ ವಾಸಿ ಮಾಡೋ ನೆಪದಲ್ಲಿ ಯುವತಿಯ ಮೈ ಸವರಿ ಚಪಲ ತೀರಿಸಿಕೊಂಡ ಡೋಂಗಿ ಬಾಬಾ! ವಿಡಿಯೋ ವೈರಲ್

Share the Article

Fake Baba: ಸ್ವಾಮೀಜಿ ಹೆಸರಲ್ಲಿ ಅಲ್ಲಲ್ಲಿ ಕಪಟ ಸ್ವಾಮಿಗಳು ಯಾವುದೇ ಅಂಜಿಕೆ ಇಲ್ಲದೆ ಸುಳ್ಳು ವೇಷ ನಟನೆ ಮಾಡಿ ಅಮಾಯಕರನ್ನು ಮೋಸ ಮಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆದ್ರೆ  ಇಲ್ಲೊಬ್ಬ ಡೊಂಗಿ ಬಾಬಾ (Fake Baba)  ರೋಗ ವಾಸಿ ಮಾಡೋ ನೆಪದಲ್ಲಿ ಯುವತಿಯ ಮೈ ಮುಟ್ಟಿ ತನ್ನ ಚಪಲ ತೀರಿಸಿಕೊಂಡಿದ್ದಾನೆ. ಆದ್ರೆ ಇದು ಬ್ಯಾಡ್ ಟಚ್ ಅಂತ ಗೊತ್ತಾಗಿ ಯುವತಿ ಮೈ ಮುಟ್ಬೇಡಿ ಅಂದಾಗಲು ಆತ ಯುವತಿಯ ಮೈ ಸವರಿದ್ದಾನೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.

ಹೌದು, ರೋಗ ವಾಸಿ ಮಾಡೋ ನೆಪದಲ್ಲಿ ಡೋಂಗಿ ಬಾಬಾ ಪೋಷಕರ ಮುಂದೆಯೇ ಯುವತಿಯೊಬ್ಬಳ ಸ್ತನ ಮತ್ತು ಸೊಂಟ ಮುಟ್ಟಿದ್ದಾನೆ. ಆದ್ರೆ ಪೋಷಕರಿಗೆ ಈತನ ಕೆಟ್ಟ ಉದ್ದೇಶ ಗಮನಕ್ಕೆ ಬಂದಿಲ್ಲ.

ಈ ಕುರಿತ ಪೋಸ್ಟ್ ಒಂದನ್ನು Nehr_who?ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಮಗಳು ಬಾಬಾ ಬ್ಯಾಡ್ ಟಚ್ ನಿಂದ ಹಿಂಸೆ ಅನುಭವಿಸುತ್ತಿದ್ದಾಳೆ ಆದರೆ ಅವಳ ಪೋಷಕರಿಗೆ ಮಾತ್ರ ಅರ್ಥವಾಗಿಲ್ಲ. ಇಂತಹ ಡೋಂಗಿ ಬಾಬಾಗಳ ವಿರುದ್ಧ ಬೃಹತ್ ಜಾಗೃತಿಯ ಅಗತ್ಯವಿದೆ” ಎಂಬ ಶೀರ್ಷಿಕೆ ಬರೆದುಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ಡೋಂಗಿ ಬಾಬಾ ಯುವತಿಯ ಮೈ ಮುಟ್ಟುವ ದೃಶ್ಯವನ್ನು ಕಾಣಬಹುದು. ಕಾಯಿಲೆಯನ್ನು ವಾಸಿ ಮಾಡೋ ನೆಪದಲ್ಲಿ ಆ ಬಾಬಾ ಯುವತಿಯ ಮೈ ಸವರುವುದಲ್ಲದೆ  ಯುವತಿಯ ಸೊಂಟ ಮತ್ತು ಸ್ತನ ಮುಟ್ಟಿ ಆಸಭ್ಯವಾಗಿ ವರ್ತಿಸಿದ್ದಾನೆ. ಆದ್ರೆ ಮಗಳ ಮೈ ಮುಟ್ಟಿದ್ರೂ ಕ್ಯಾರೇ ಅನ್ನದೇ ಪೋಷಕರು ಸುಮ್ಮನೆ ಕುಳಿತಿದ್ದಾರೆ.

ಆಗಸ್ಟ್ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಮಾಡಲಾಗಿದೆ. ಇಂತಹ ಘಟನೆಗಳಿಗೆ ಬ್ರೇಕ್ ಹಾಕದೆ ಇದ್ದಲ್ಲಿ ಮುಂದಕ್ಕೆ ಇಂತಹ ಡೋಂಗಿ ಬಾಬಗಳಿಗೆ ಸಲುಗೆ ಸಿಕ್ಕಂತಾಗುತ್ತದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

 

Leave A Reply