Darshan Case: ದರ್ಶನ್‌ ಸ್ಥಳಾಂತರ ಸರ್ಕಾರದ ಕೈಯಲ್ಲಿಲ್ಲ! ಪ್ರಜ್ವಲ್‌ಗೂ ಜೈಲಲ್ಲಿ ಸಿಕ್ತಿದೆಯಾ ರಾಯಲ್‌ ಅತಿಥ್ಯ? ಗೃಹ ಸಚಿವರು ಏನಂದ್ರು?

Darshan Royal Treatment: ರೇಣುಕಾ ಸ್ವಾಮಿ ಕೊಲೆ(Renuka swami case) ಆರೋಪದ ಮೇಲೆ ಜೈಲಿನಲ್ಲಿರುವ ದರ್ಶನ್‌(Darshan) ಜೈಲಿನಲ್ಲಿ ಐಷರಾಮಿ ಜೀವನ(Royal Treatment) ಸಿಗುತ್ತಿರುವ ಬಗ್ಗೆ ಒಂದಷ್ಟು ಮಾಹಿತಿಗಳು ಬಂದ ಹಿನ್ನೆಲೆ ರಾಜ್ಯ ಸರ್ಕಾರ(State Govt) ಎಚ್ಚೆತ್ತುಕೊಂಡಿದೆ. ಅವರನ್ನು ಬೇರೆ ಜೈಲಿಗೆ ಶಿಪ್ಟ್‌ (Shift) ಮಾಡುವ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಆದರೆ ಇಂದು ಈ ಬಗ್ಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ(Home Minister G Parameshwar), ಬೇರೆ ಜೈಲಿಗೆ ದರ್ಶನ್ ಸ್ಥಳಾಂತರ ಮಾಡುವ ತೀರ್ಮಾನ ನಾವು ಮಾಡಕ್ಕಾಗಲ್ಲ ಎಂದಿದ್ದಾರೆ. ಜೈಲು ಪ್ರಾಧಿಕಾರವು ಕೋರ್ಟಿನ(Court) ನಿರ್ದೇಶನ ಮೇರೆಗೆ ಸ್ಥಳಾಂತರ ಮಾಡಲಿದೆ. ವಿಚಾರಣಾ ಖೈದಿ ಆಗಿರುವ ಹಿನ್ನೆಲೆಯಲ್ಲಿ ಕೆಲವೊಂದು ನಿಯಮಗಳಡಿ ಆಗಲಿದೆ. ಇನ್ನು ಎರಡು ಮೂರು ದಿನಗಳಲ್ಲಿ ಆಗಲಿದೆ ಎಂದು ಮಾಹಿತಿ ನೀಡಿದರು.

ಇನ್ನು ಜೈಲಿನಲ್ಲಿ ಮೂರು ವಿಭಾಗ ಮಾಡೋ ವಿಚಾರದ ಬಗ್ಗೆ ಮಾಧ್ಯದ ಪ್ರಶ್ನೆಗಳಿಗೆ ಉತ್ತರಿಸಿದ ಗೃಹ ಸಚಿವರು, ಭದ್ರತೆ ಧೃಷ್ಟಿಯಿಂದ ಆಂತರಿಕಾ ಆಡಳಿತ ವಿಭಾಗ ಮಾಡಬಹುದು. ಆದರೆ ಮೂರು ಜೈಲು‌ ಮಾಡೋಕೆ ಆಗಲ್ಲ. ಒಳಗಡೆ ಮೂರು ಬ್ಲಾಕ್ ಇದೆ. ಬೇರೆ ಬ್ಯಾರಕ್ ಇದೆ. ಜೈಲಿನಲ್ಲಿ ತನಿಖಾ ಹಂತದ ಖೈದಿಗಳು, ಲೈಪ್ ಪ್ರಿಸನರ್ಸ್ ಅವರನ್ನೆಲ್ಲ ಬೇರೆ ಇಟ್ಟಿರ್ತಾರೆ. ಅದನ್ನ ಜೈಲಿನ ಅಧಿಕಾರಿಗಳಿಗೆ ಬಿಟ್ಟಿದ್ದೆವೆ ಎಂದರು.

ನಮಗೆ ಕೆಲವು ಲೋಪಗಳು ಕಂಡು ಬಂದಿದ್ದು, ಈ ಬ್ಯಾರಕನಿಂದ ಮತ್ತೊಂದು ಬ್ಯಾರಕ್ ಗೆ ಹೋಗೋಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈಗಾಗಲೇ 9 ಜನರನ್ನು ಸಸ್ಪೆಂಡ್ ಮಾಡಿದ್ದೇವೆ. ಬೇರೆ ಯಾರು ದರ್ಶನ್ ಗುಂಪಿಗೆ ಸಹಾಯ ಮಾಡಿದ್ದಾರೆ. ಸಿಗರೇಟ್, ಚೇರ್, ಕಾಪಿ ತಂದುಕೊಟ್ಟಿದ್ದು ಎಲ್ಲದನ್ನ ಸಿಸಿಟಿವಿ ಆದರಿಸಿ ಕ್ರಮ ಆಗಿದೆ. ಐಪಿಎಸ್ ಅಧಿಕಾರಿಯನ್ನು ತನಿಖೆಗೆ ನಿಯೋಜಿಸಲಾಗುತ್ತಿದೆ ಎಂದರು.

ಜೈಲಿನ ಸುಧಾರಣೆಗೆ ವರದಿ ಅನುಷ್ಠಾನ ವಿಚಾರ ಕುರಿತು ಎಚ್ ಕೆ ಪಾಟೀಲ್ ವರದಿ ಕೊಟ್ಟಿದ್ದು ಗಮನಕ್ಕೆ ಬಂದಿರಲಿಲ್ಲ. ಅದನ್ನುತರಿಸಿಕೊಳ್ಳುತ್ತೆನೆ. ಈಗಿರೋ ವ್ಯವಸ್ಥೆ ಬದಲಾವಣೆ ಅಗತ್ಯವಿದೆ. ಇದನ್ನ ಮಾಡುತ್ತೆವೆ ಎಂದು ಹೇಳಿದರು. ಈಗಾಗಲೇ ಈಗಾಗಲೇ 9 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದು, ಜೊತೆಗೆ ಚೀಫ್ ಸೂಪರಿಂಟೆಂಡೆಂಟ್ ಅವರನ್ನೂ ಸಸ್ಪೆಂಡ್ ಮಾಡಿದ್ದೇವೆ. ಇನ್ನೊಬ್ರು ಸೂಪರಿಂಟೆಂಡೆಂಟ್ ರನ್ನೂ ಸಸ್ಪೆಂಡ್ ಮಾಡಿದ್ದೇವೆ. ಇನ್ಯಾರ್ಯಾರು ದರ್ಶನ್ ಗೆ ಸಹಕಾರ ಕೊಟ್ಟಿದ್ದಾರೋ ಅವರನ್ನೂ ಸಸ್ಪೆಂಡ್ ಮಾಡಲಾಗಿದೆ. ತನಿಖೆ ಇನ್ನೂ ಮುಂದುವರೆದಿದೆ. ಮುಂದಿನ ತನಿಖೆಗಾಗಿ ಇಂದು ಒಬ್ಬರು ಐಪಿಎಸ್ ಅಧಿಕಾರಿ ನೇಮಕ ಮಾಡ್ತೇವೆ. ಇವರು ಕೊಡುವ ವರದಿ ಆಧರಿಸಿ ಶಾಶ್ವತ ಕ್ರಮಗಳನ್ನು ಕೈಗೊಳ್ತೇವೆ ಎಂದು ಮಾಹಿತಿ ನೀಡಿದರು.

ಪ್ರಜ್ವಲ್ ರೇವಣ್ಣಗೂ ರಾಯಲ್ ಟ್ರಿಟ್ಮೆಂಟ್ ವಿಚಾರ
ಪ್ರಜ್ವಲ್‌ಗೂ ಜೈಲಿನಲ್ಲಿ ದರ್ಶನ್‌ ರೀತಿ ರಾಯಲ್‌ ಟ್ರೀಟ್‌ಮೆಂಟ್‌ ಸಿಗುತ್ತಿದೆಯಾ ಎಂದು ಅನುಮಾನ ವ್ಯಕ್ತಪಡಿಸಿದ ಮಾಧ್ಯಮದವರ ಪಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಈ ಘಟನೆ ನಡೆದ ಮೇಲೆ ಜೈಲಿನಲ್ಲಿ‌ ದರ್ಶನ್ ವಿಚಾರ ಮಾತ್ರ ಅಲ್ಲ, ಬೇರೆ ಎಲ್ಲ ವ್ಯವಸ್ಥೆಯನ್ನು ಪರಿಶೀಲನೆ ನಡೆಸುತ್ತೆವೆ. ಇಡೀ ಜೈಲನ್ನು ಹಾಗೂ ಬೇರೆ ಜೈಲನ್ನು ಅವರು ಪರಿಶೀಲನೆ ನಡೆಸುತ್ತಾರೆ. ಐಪಿಎಸ್ ಅಧಿಕಾರಿಯ ಸಮಿತಿ‌ ಮಾಡಿ ವರದಿ ತೆಗೆದುಕೊಳ್ಳುತ್ತೆವೆ. ಹಿಂಡಲಗಾದಲ್ಲೂ ಕೆಲವೊಂದು ‌ಲೋಪ ಇತ್ತು. ಅದನ್ನು‌ಕೂಡ ಪರಿಶೀಲನೆ ಮಾಡುತ್ತೆವೆ. ಬೇರೆ ಬೇರೆ ಜೈಲು ಗಳ ಲೋಪಗಳ ಬಗ್ಗೆಯೂ ವರದಿ ತರಿಸಿಕೊಳ್ತೇವೆ. ಶಿವಮೊಗ್ಗ, ಬಳ್ಳಾರಿ, ಮಂಗಳೂರು ವ್ಯವಸ್ಥೆ ಗಳನ್ನು ಪರಿಶೀಲನೆ ಮಾಡ್ತೇವೆ.

Leave A Reply

Your email address will not be published.