Aadhar Card: ಆಸ್ತಿ ನೋಂದಣಿಗೆ ಇನ್ನು ಮುಂದೆ ಆಧಾರ್ ಕಡ್ಡಾಯ! ಏನು ಮಾಡಬೇಕು?

Aadhar Card: ಜಮೀನು ಮಾಲಿಕತ್ವದ ಸುರಕ್ಷತೆ ಹಾಗೂ ವಂಚನೆ ಪ್ರಕರಣಗಳನ್ನು ತಪ್ಪಿಸಲು ಇನ್ನು ಮುಂದೆ ಆಸ್ತಿ ನೋಂದಣಿ(Land registration) ಸಂದರ್ಭದಲ್ಲಿ ಆಧಾರ್ ಕಾರ್ಡ್(Aadhar Card) ದಾಖಲೆ ಕಡ್ಡಾಯಗೊಳಿಸಿ ಸರ್ಕಾರ(Govt) ಆದೇಶ ಮಾಡಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಂದಾಯ ಸಚಿವ(Revenue Minister) ಕೃಷ್ಣ ಬೈರೇಗೌಡ(Krishna Byre Gowda), ಸೆಪ್ಟೆಂಬರ್ 2ರಿಂದ ಆಯಾ ಜಿಲ್ಲೆಯ ಯಾವುದೇ ನೋಂದಣಿ ಕಚೇರಿಯಲ್ಲಿ(Registration office) ನೋಂದಣಿಗೆ ಅವಕಾಶ ಮಾಡಕೊಡಲಾಗುತ್ತಿದೆ ಎಂದರು.

 

ನೋಂದಣಿ ವೇಳೆ ಆಧಾರ್ ಕಾರ್ಡ್ ಇಲ್ಲದಿದ್ದರೆ ಪಾಸ್‌ಪೋರ್ಟ್ ಅಥವಾ ಪ್ಯಾನ್ ಕಾರ್ಡ್ ದಾಖಲೆಗಳನ್ನು ಒದಗಿಸಿದರಷ್ಟೇ ನೋಂದಣಿ ಮಾಡಲಾಗುತ್ತದೆ. ಆಸ್ತಿ ಮಾಲಿಕತ್ವ ಸುರಕ್ಷೆ ಮಾಡುವುದು, ದರೋಡೆ ತಪ್ಪಿಸುವ ಉದ್ದೇಶದಿಂದ ಈ ದಾಖಲೆಗಳನ್ನು ಕಡ್ಡಾಯ ಮಾಡಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಶೇಕಡ 99.99 ಮಂದಿ ಬಳಿ ಆಧಾರ್ ಕಾರ್ಡ್ ಇದೆ. ಈ ದಾಖಲೆ ಇಲ್ಲದವರು, ಮೇಲೆ ನಮೂದಿಸಲಾದ ಮೂರರಲ್ಲಿ ಯಾವುದಾದರೂ ಒಂದನ್ನು ದಾಖಲೆಯನ್ನು ಒದಗಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಯಾರದೋ ಜಮೀನನ್ನು ಯಾರಿಗೋ ಮಾರಾಟ ಮಾಡಿ ಮೂಲ ಮಾಲೀಕರು ನ್ಯಾಯಾಲಯಕ್ಕೆ ಅಲೆಯು ವಂತಾಗಿದೆ. ಅದನ್ನು ತಪ್ಪಿಸುವ ಉದ್ದೇಶದಿಂದಲೇ ನಾವು ಕೆಲವು ಕಠಿಣ ಕಗ್ರಮಗಳನ್ನು ಕೈಗೊಳ್ಳುತ್ತಿದ್ದು, ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು. ಜಮೀನುಗಳನ್ನು ದೋಚಿ ಗೂಂಡಾ ವರ್ತನೆ ಮಾಡುವವರ ವಿರುದ್ಧ ಇನ್ನು ಮುಂದೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುತ್ತೇವೆ. ನಾಗರಿಕರ ಅನುಕೂಲಕ್ಕಾಗಿ ಆಯಾ ಜಿಲ್ಲೆಯಲ್ಲಿರುವ ಯಾವುದೇ ನೋಂದಣಿ ಕಚೇರಿಯಲ್ಲಿ ತಮ್ಮ ಆಸ್ತಿಯನ್ನು ಮಾರಾಟ ಮಾಡುವ ಹಾಗೂ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಕೃಷ್ಣ
ಬೈರೇಗೌಡ ಹೇಳಿದರು.

ರಾಜ್ಯದಲ್ಲಿ 257 ನೋಂದಣಿ ಕಚೇರಿಗಳಿದ್ದು ಅದರಲ್ಲಿ 50 ಕಚೇರಿಗಳಲ್ಲಷ್ಟೇ ಹೆಚ್ಚು ಕೆಲಸದ ಒತ್ತಡ ಇದೆ, ಉಳಿದೆಡೆ ಅಂತಹ ಒತ್ತಡಗಳಿಲ್ಲ. ನಾಗರಿಕರು ನೋಂದಣಿಗಾಗಿ ಕಾಯುವ ಬದಲು, ಎಲ್ಲಿ ಒತ್ತಡ ಇಲ್ಲವೋ ಅಂತಹ ಕಡೆಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದರು.

Leave A Reply

Your email address will not be published.