Parappana Agrahara: ಜೈಲೊಳಗೆ ‘ದಾಸ’ನ ಬಿಂದಾಸ್ ಲೈಫ್ !! ಇದಕ್ಕೆಲ್ಲಾ ಪರ್ಮಿಷನ್ ಉಂಟಾ? ಏನು ಹೇಳುತ್ತೆ ಜೈಲು ನಿಯಮ ?

Share the Article

Parappana Agrahara: ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿರೋ ನಟ ದರ್ಶನ್(Darshan) ಪರಪ್ಪನ ಅಗ್ರಹಾರದಲ್ಲಿ(Parappana Agrahara) ಮುದ್ದೆಮುರಿಯುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ರೆ ಅಲ್ಲಿನ ಕಥೆಯೇ ಬೇರೆ ಇದೆ. ಜೈಲೊಳಗಿರುವ ಕಿಲ್ಲಿಂಗ್ ಸ್ಟಾರ್ ಬಿಂದಾಸ್ ಲೈಫ್ ಲೀಡ್ ಮಾಡುತ್ತಿದ್ದಾರೆ. ಕಾಫಿ, ಸಿಗರೇಟ್ ಹೊಡೆಯುತ್ತಾ, ವಿಡಿಯೋ ಕಾಲ್ ಮಾಡುತ್ತಾ, ಬಿರಿಯಾನಿ ಚಪ್ಪರಿಸುತ್ತಾ ರೆಸಾರ್ಟ್ ಜೀವನ ನಡೆಸುತ್ತಿದ್ದಾರೆ. ವೈರಲ್ ಆದ ಫೋಟೋಗಳೇ ಇದಕ್ಕೆ ಸಾಕ್ಷಿ. ಹಾಗಿದ್ರೆ ಜೈಲಿನಲ್ಲಿ ಇದಕ್ಕೆಲ್ಲಾ ಪರ್ಮಿಷ್ ಉಂಟಾ? ಜೈಲು ಅಧಿಕಾರಿಗಳು ಎಲ್ಲದಕ್ಕೂ ಓಕೆ ಅನ್ನುತ್ತಾರಾ? ಏನು ಹೇಳುತ್ತೆ ಜೈಲಿನ ನಿಯಮಗಳು?

ಏನು ಹೇಳುತ್ತೆ ಜೈಲು ನಿಯಮ?
* ವಿಚಾರಣಾಧೀನ ಕೈದಿಗೆ ಅಗತ್ಯ ವಸ್ತು ಹೊರತುಪಡಿಸಿ ಉಳಿದ ಸೌಲಭ್ಯ ನೀಡುವಂತಿಲ್ಲ.
* ಕೋರ್ಟ್ ಅನುಮತಿಯಿಲ್ಲದೇ ಮನೆಯೂಟ ಸೇರಿ ಇತರೆ ಸೌಲಭ್ಯಗಳಿಗೆ ಅವಕಾಶ ಇಲ್ಲ.
* ಜೈಲಿನ ಲಾನ್‌ನಲ್ಲಿ ಚೇರ್-ಟೀಪಾಯಿ ಹಾಕಿಕೊಂಡು ಕುಳಿತು ಮಾತನಾಡುವ ವ್ಯವಸ್ಥೆ ಮಾಡುವಂತಿಲ್ಲ.
* ಜೈಲಿನ ಎಲ್ಲೆಂದರಲ್ಲಿ ಕುಳಿತು ಸಿಗರೇಟ್, ಬೀಡಿ ಸೇವನೆ ಮಾಡುವಂತಿಲ್ಲ.
* ಜೈಲಿಗೆ ಸಿಗರೇಟು, ಮಾದಕ ವಸ್ತು, ಮದ್ಯ ಸರಬರಾಜು, ಸೇವನೆ ಶಿಕ್ಷಾರ್ಹ ಅಪರಾಧ.
* ವಿಚಾರಣಾಧೀನ ಕೈದಿ ವಿಐಪಿ ಸೆಲ್‌ನಲ್ಲಿದ್ದರೂ ಸ್ಪೆಷಲ್ ಸೆಕ್ಯೂರಿಟಿ ಕೊಡುವಂತಿಲ್ಲ.

7 ಮಂದಿ ಅಮಾನತು:
ಅಂದಹಾಗೆ ಜೈಲೊಳಗಿರುವ ದರ್ಶನ್ ಬಿಂದಾಸ್ ಲೈಫ್ ಲೀಡ್ ಮಾಡಲು ಕಾರಣರಾದ ಸುಮಾರು 7 ಜನ ಅಧಿಕಾರಿಗಳಾದ ಶರಣಬಸವ ಅಮೀನ್ ಗಡ, ಪುಟ್ಟಸ್ವಾಮಿ, ಖಂಡೇವಾಲಾ, ಶ್ರೀಕಾಂತ್, ವೆಂಕಪ್ಪ, ವಾರ್ಡರ್ ಬಸಪ್ಪ, ಸಂಪತ್ ಸೇರಿದಂತೆ ಏಳು ಮಂದಿಯನ್ನು ಅಮಾನತು ಮಾಡಲಾಗಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಜೈಲಿನ ಹಿರಿಯ ಅಧಿಯಕಾರಿಗಳ ಬಗ್ಗೆ ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವರು ಸ್ಪಷ್ಟನೆ ನೀಡಿದ್ದಾರೆ.

Leave A Reply

Your email address will not be published.