ISRO ಅಧ್ಯಯನಕ್ಕಾಗಿ ಬಾಹ್ಯಾಕಾಶಕ್ಕೆ ತೆರಳಲಿವೆ ‘ಧಾರವಾಡದ ನೊಣಗಳು’ – ಏನಿದು ಹೊಸ ಶೋಧ ?

ISRO: ಮುಂದಿನ ವರ್ಷ ಇಸ್ರೋ(ISRO) “ಗಗನಯಾನ’ವೊಂದನ್ನು ನಡೆಸಲಿದ್ದು, ಅದರಲ್ಲಿ ಧಾರವಾಡದ ನೊಣಗಳು ಬಾಹ್ಯಾಕಶಕ್ಕೆ ತೆರಳಲಿವೆ!! ಇಸ್ರೋದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಹಲವು ಅಧ್ಯಯನಗಳು ನಡೆಯಲಿದ್ದು, ಧಾರವಾಡ ಕೃಷಿ ವಿಶ್ವವಿದ್ಯಾನಿಲಯ ಸಿದ್ಧಪಡಿಸಿರುವ ಹಣ್ಣಿನ ನೊಣಗಳಿರುವ ಕಿಟ್‌ ಆಯ್ಕೆಯಾಗಿದೆ !!

ಹೌದು, ಇಸ್ರೋ ಕೈಗೊಂಡ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಭಾಗವಹಿಸಲು ದೇಶದ ಎಲ್ಲ 75 ಕೃಷಿ ವಿ.ವಿ.ಗಳು ನೊಣಗಳ ವಿವಿಧ ಮಾದರಿಗಳನ್ನು ನೀಡಿದ್ದವು. ಈ ಪೈಕಿ ಧಾರವಾಡದ(Dharawada) ಕೃಷಿ ವಿ.ವಿ.ಯ ಜೀವಶಾಸ್ತ್ರ ವಿಭಾಗದ ಈ ಕಿಟ್‌ ಆಯ್ಕೆಯಾಗಿದೆ.

ಏನಿದು ಸಂಶೋಧನೆ?
2025ರಲ್ಲಿ ಭಾರತ ನಭಕ್ಕೆ ಕಳುಹಿಸುವ ಗಗನಯಾನ ನೌಕೆಯಲ್ಲಿ ಈ ಹಣ್ಣಿನ ನೊಣ (ಫ‌ೂÅಟ್ಸ್‌ ಫ್ಲೆ$çಸ್‌) ದ ಕಿಟ್‌ ಕಳುಹಿಸಿಕೊಡಲಾಗುತ್ತಿದೆ. ಹಣ್ಣಿನ ನೊಣಗಳ ದೇಹರಚನೆಗೂ ಮಾನವ ದೇಹರಚನೆಗೂ ಹೋಲಿಕೆ ಇದ್ದು ಶೂನ್ಯ ಗುರುತ್ವದಲ್ಲಿ ನೊಣಗಳ ದೇಹದಲ್ಲಿ ಆಗುವ ಬದಲಾವಣೆಗಳು ಮಹತ್ವದ ಮಾಹಿತಿ ಒದಗಿಸಲಿವೆ. ಇದು ಭವಿಷ್ಯದ ಮಾನವಸಹಿತ ಗಗನಯಾನಕ್ಕೆ ನೆರವಾಗಲಿದೆ.

ಅಂದಹಾಗೆ 2ರಿಂದ 7 ದಿನಗಳ ಕಾಲ ಇಸ್ರೋ ಹಾರಿ ಬಿಡುವ ಗಗನನೌಕೆ ಶೂನ್ಯ ಗುರುತ್ವದ ಬಾಹ್ಯಾಕಾಶದಲ್ಲಿ ಭೂಮಿಯನ್ನು ಸುತ್ತಿ ಮರಳಿ ಗುಜರಾತ್‌ ಸಮೀಪದ ಸಮುದ್ರದಲ್ಲಿ ಬಂದಿಳಿಯಲಿದೆ. ಈ ವೇಳೆ ಶೋಧಿತ ಮಾದರಿ ಕಿಟ್‌ನಲ್ಲಿ ಆಗುವ ಬದಲಾವಣೆಗಳು ಮತ್ತು ಅಧ್ಯಯನ ಯೋಗ್ಯ ವಿಚಾರಗಳ ಮೇಲೆ ವಿಜ್ಞಾನಿಗಳ ತಂಡ ನಿಗಾ ಇರಿಸಲಿದೆ.

ಕೇಂದ್ರ ಸರಕಾರವು ಈ ಯೋಜನೆಗೆ 78 ಲಕ್ಷ ರೂ.ಗಳನ್ನು ನೀಡಿದ್ದು, ಸತತ ಎರಡು ವರ್ಷಗಳ ಕಾಲ ಹಣ್ಣಿನ ನೊಣಗಳನ್ನು ಅಧ್ಯಯನಕ್ಕೆ ಒಳಪಡಿಸಿ ಈ ಮಾದರಿ ಕಿಟ್‌ ಸಜ್ಜುಗೊಳಿಸಲಾಗಿದೆ.

ಹಣ್ಣಿನ ನೊಣವೇ ಯಾಕೆ?
ಮನುಷ್ಯನ ದೈಹಿಕ ರಚನೆಯ ಶೇ. 70ರಷ್ಟು ಅಂಶಗಳನ್ನು ಈ ಹಣ್ಣಿನ ನೊಣಗಳ ದೇಹ ಸಂರಚನೆ ಹೋಲುತ್ತದೆ. ಹೀಗಾಗಿ ಶೂನ್ಯ ಗುರುತ್ವದಲ್ಲಿ ಇವುಗಳ ದೈಹಿಕ ಬದಲಾವಣೆಗಳ ಫಲಿತಗಳು ಬಾಹ್ಯಾಕಾಶ ಸಂಶೋಧನೆಗೆ ಅತ್ಯಂತ ಅಗತ್ಯವಾಗಿದೆ.

Leave A Reply

Your email address will not be published.