Skoda Kylaq: ಕಾರಿಗೆ ಸಂಸ್ಕೃತ ಹೆಸರು ಸೂಚಿಸಿ ಕಾರು ಗೆದ್ದ ಕುರಾನ್‌ ಶಿಕ್ಷಕ! ಯಾರಿವರು?

Skoda Kylaq: ನೇಮ್ ಯುವರ್ ಸ್ಕೋಡಾ’ ಎಂಬ ಅಭಿಯಾನದ ಮಾಡಿ ಹೊಸ ಸ್ಕೋಡಾ ಕಂಪನಿಯ(Skoda Company) ಹೊಸ ಕಾರಿಗೆ ಸಂಸ್ಕೃತದ(Sanskrit) ಹೆಸರೊಂದನ್ನು ಕೊಡಲು ಕಂಪನಿ ಆಹ್ವಾನಿಸಿತ್ತು. ದೇಶಾದ್ಯಂತ ಅನೇಕರು ಹೆಸರನ್ನು ಸೂಚಿಸಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈ ಅಭಿಯಾನದಲ್ಲಿ ಕರ್ನಾಟಕ – ಕೇರಳ(Karnataka-Kerala) ಗಡಿಭಾಗದ ಕಾಸರಗೋಡಿನ(Kasaragodu) ವ್ಯಕ್ತಿಯೊಬ್ಬರು ಭಾಗವಹಿಸಿದ್ದರು. ಇವರು ತಮ್ಮದು ಒಂದು ಇರಲಿ ಎಂದು ಸ್ಕೋಡಾ ಎಸ್‌ಯುವಿ (Skoda SUV) ಹೆಸರನ್ನು ಸೂಚಿಸಿದ್ದರು. ಆದರೆ ಆಶ್ಚರ್ಯ ಎನ್ನುವಂತೆ ಇವರು ಸೂಚಿಸಿದ ಹೆಸರು ಆಯ್ಕೆಯಾಗಿದ್ದಲ್ಲದೆ ಇವರಿಗೆ ಒಂದು ಕಾರ್‌ ಬಹುಮಾನವಾಗಿ ದೊರೆತಿದೆ.

ಬಹುಮಾನ ಗೆದ್ದ ವ್ಯಕ್ತಿಯ ಹೆಸರು ಮೊಹಮ್ಮದ್ ಜಿಯಾದ್. ಇವರು ಕಾಸರಗೋಡಿನ ಕುರಾನ್‌ ಶಿಕ್ಷಕ(Quran teacher). ಕಳೆದ ಫೆಬ್ರವರಿಯಲ್ಲಿ ʼನೇಮ್ ಯುವರ್ ಸ್ಕೋಡಾ’ ಅಭಿಯಾನವನ್ನು ಸ್ಕೋಡ ಕಂಪೆನಿ ಆರಂಭಿಸಿತ್ತು. ಇಂಗ್ಲಿಷ್ನಲ್ಲಿ K ಆರಂಭಗೊಂಡು Q ಅಕ್ಷರದೊಂದಿದೆ ಕೊನೆಗೊಳ್ಳುವ ಹೆಸರು ನೀಡುವಂತೆ ಹೇಳಿತ್ತು. ಒಟ್ಟು 5 ಹೆಸರು ನೀಡುವಂತೆ ಆಯ್ಕೆಯನ್ನು ಕೊಟ್ಟಿತ್ತು. ಇದರ ಮಾಹಿತಿ ತಿಳಿದ ಮೊಹಮ್ಮದ್ ಜಿಯಾದ್ ವರು ಎಸ್‌ಯುವಿಗೆ ʼಕೈಲಾಕ್’ ಎಂಬ ಹೆಸರನ್ನು ಸೂಚಿಸಿದ್ದರು. 24 ವರ್ಷದ ಜಿಯಾದ್ ಅವರು ಕಾಸರಗೋಡಿನ ನಜಾತ್ ಕುರಾನ್ ಅಕಾಡೆಮಿಯಲ್ಲಿ ಕುರಾನ್‌ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಹೆಸರು ಸೂಚಿಸಿದ ಬಳಿಕ, ಕಂಪನಿಯ ಅಪ್‌ಡೇಟ್‌ಗಳಿಗಾಗಿ ಸ್ಕೋಡಾದ Instagram ಖಾತೆಯನ್ನು ಜಿಯಾದ್ ಫಾಲೋ ಮಾಡುತ್ತಿದ್ದರು. ಬರೋಬ್ಬರಿ 2 ಲಕ್ಷ ಹೆಸರುಗಳನ್ನು ಸ್ಪರ್ಧಾಳುಗಳು ಸೂಚಿಸಿದ್ದರಂತೆ. ಇದರಲ್ಲಿ 100 ಜನರನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾದ ಲಿಸ್ಟ್‌ನಲ್ಲಿ ಇವರ ಹೆಸರು ಬಂದಿತ್ತು. ಇದೀಗ ಆಶ್ಚರ್ಯ ಎನ್ನುವಂತೆ ಮೊದಲ ಬಹುಮಾನ ಬಂದು ಸ್ಕೋಡ ಕಂಪೊಎನಿಯ ಕಾರನ್ನೇ ತಮ್ಮದಾಗಿಸಿಕೊಂಡಿದ್ದಾರೆ.

ಕಾರು ತಯಾರಕ ಕಂಪನಿ ಸ್ಕೋಡಾ ನೀಡಿರುವ ಮಾಹಿತಿ ಪ್ರಕಾರ, ಕೈಲಾಕ್ ಸಂಸ್ಕೃತ ಪದ. ಎಂದರೆ ʼಸ್ಫಟಿಕʼ ಎಂದರ್ಥ. ಈಗಾಗಲೇ ಸ್ಕೋಡಾ ಕಂಪನಿಯ ಕಾರುಗಳು ಕ್ವಿಕ್, ಕಾಸ್ಮಿಕ್, ಕ್ಲಿಕ್ ಮತ್ತು ಕಯಾಕ್ ಹೆಸರುಗಳನ್ನು ಹೊಂದಿತ್ತು. ಇದೀಗ ಅವುಗಳನ್ನೆಲ್ಲ ಬದಲಾಯಿಸಿ ಹೊಸ ಮಾದರಿಗೆ ಕೈಲಾಕ್ ಎಂದು ಜಿಯಾದ್‌ ಅವರು ಸೂಚಿಸಿದ ಹೆಸರನ್ನು ಇಟ್ಟಿದೆ. ಸ್ಕೋಡಾ ಭಾರತದಲ್ಲಿ ಹೆಚ್ಚು ಜನರು ಇಷ್ಟ ಪಡುವ ಕಂಪೆನಿ. ಅನೇಕರು ಈ ಕಂಪೆನಿಯ ಕಾರನ್ನು ಬಳಸುತ್ತಾರೆ. ಇದೀಗ ಸ್ಕೋಡಾ ಆಟೋ ಭಾರತದಲ್ಲಿ ತನ್ನ ಮುಂದಿನ ಹೊಸ ಎಸ್‍ಯುವಿಯ ಹೆಸರನ್ನು ಆಗಸ್ಟ್ 21ರಂದು ಘೋಷಿಸಿದೆ.

Leave A Reply

Your email address will not be published.