Dengue case: ರಾಜ್ಯದಲ್ಲಿ ಮತ್ತೆ ಡೆಂಘೀ ಭೀತಿ: ಕಳೆದ 24 ಗಂಟೆಗಳಲ್ಲಿ 196 ಡೆಂಘೀ ಪ್ರಕರಣ ಪತ್ತೆ: ಇಬ್ಬರು ಸಾವು

Dengue case: ಕಳೆದ ಕೆಲ ದಿನಗಳ ಹಿಂದೆ ಮಳೆ(Rain) ಕೊಂಚ ತಗ್ಗಿದ್ದ ಪರಿಣಾಮ ಮಾಹಾಮಾರಿ ಡೆಂಗ್ಯೂ ಜ್ವರ(Dengue case) ಪ್ರಕರಣಗಳ ಸಂಖ್ಯೆಯೂ ಇಳಿಮುಖವಾಗಿತ್ತು. ಆದರೆ ಇದೀಗ ಮತ್ತೆ ಮಳೆ ಆರಂಭವಾದ ಹಿನ್ನೆಲೆ ರಾಜ್ಯದ(Karnataka) ಜನರಿಗೆ ಮತ್ತೆ ಡೆಂಘೀ ಭೀತಿ ಎದುರಾಗಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 196 ಡೆಂಘೀ ಪ್ರಕರಣಗಳು ವರದಿಯಾಗಿದ್ದು, ಇದು ಭಾರಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಈಗಾಗಲೇ ಗುಣಮುಖರಾಗದೆ ಉಳಿದ ಸಕ್ರಿಯ ಪ್ರಕರಣಗಳೇ 171 ಇದೆ. ಒಟ್ಟು ಈಗ 196 ಡೆಂಘೀ ಸಕ್ರಿಯ ಪ್ರಕರಣಗಳು ಇವೆ. ಅಲ್ಲದೆ ಕಳೆದ 24 ಗಂಟೆಯಲ್ಲಿ ಡೆಂಘೀಗೆ ಎರಡು ಮಂದಿ ಸಾವನ್ನಪ್ಪಿದ್ದಾರೆ(Death). ಮತ್ತೆ ರಾಜ್ಯದಲ್ಲಿ ಡೆಂಫೀ ಮರಣ ಮೃದಂಗ ಬಾರಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ದಾವಣಗೆರೆ ಹಾಗೂ ಧಾರವಾಡ ಜಿಲ್ಲೆಯಲ್ಲಿ ತಲಾ ಒಂದೊಂದು ಬಲಿಯಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ 104 ಹೊಸ ಪ್ರಕರಣಗಳು ಪತ್ತೆಯಾಗಿದೆ.

ಮಳೆಯ ಪ್ರಮಾಣ ಮತ್ತೆ ಜಾಸ್ತಿಯಾದ ಹಿನ್ನೆಲೆಯಲ್ಲಿ ಮತ್ತೆ ಡೆಂಘೀ ಜ್ವರ ರಾಜ್ಯದಾದ್ಯಂತ ಉಲ್ಬಣಿಸಿದೆ. ಕಳೆದ ವಾರವಷ್ಟೇ ಸರ್ಕಾರ ಮಕ್ಕಳ ಹಿತ ದೃಷ್ಟಿಯಿಂದ ಶಾಲೆಗಳಿಗೆ ಒಂದಷ್ಟು ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಮತ್ತೆ ಡೆಂಘ್ಯೂ ಬಗ್ಗೆ ಹೆಚ್ಚಿನ ಗಮನ ಸರ್ಕಾರ ನೀಡಬೇಕಾದ ಅನಿವಾರ್ಯತೆ ಇದೆ. ಅಲ್ಲದೆ ನಾಗರೀಕರೂ ಕೂಡ ಆದಷ್ಟು ಮುಂಜಾಗೃತೆ ಕ್ರಮಗಳನ್ನು ವಹಿಸುವುದು ಬಹಳ ಮುಖ್ಯ.

Leave A Reply

Your email address will not be published.