Viral Post: ‘ಶಿಕ್ಷಕಿಯ ಎದೆ ತುಂಬಾ ದಪ್ಪ, ಇದರಿಂದ ವಿದ್ಯಾರ್ಥಿಗಳಿಗೆ ಆಗ್ತಿದೆ ಭಾರೀ ಕಷ್ಟ’- ಪೋಷಕರಿಂದ ಶಾಲೆಗೆ ಬಂತು ಹೀಗೊಂದು ಕಂಪ್ಲೇಂಟ್ !!

Viral Post: ‘ಗುರುವಿನ ಗುಲಾಮನಾಗುವ ತನಕ ತೊರೆಯದಣ್ಣ ಮುಕುತಿ’ ಎಂಬುದು ದಾಸರ ಖ್ಯಾತ ವಾಣಿ. ಹಿಂದೆ ಈ ವಾಕ್ಯಕ್ಕೆ ತುಂಬಾ ಅರ್ಥ ಇತ್ತು. ಎಲ್ಲಾ ವಿದ್ಯಾರ್ಥಿಗಳು ಕೂಡ ತಮ್ಮ ಶಿಕ್ಷಕರ, ಗುರುಗಳ ಗುಲಾಮರಾಗಲು ಬಯಸುತ್ತಿದ್ದರು. ಅಂದರೆ ಗುರುವೆಂದರೆ ಅಷ್ಟು ಭಯ, ಭಕ್ತಿಯಿಂದ ಇರುತ್ತಿದ್ದರು. ಇಂದು ಇಲ್ಲವೆಂದೇನಿಲ್ಲ, ಆದರೆ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಈ ರೀತಿಯ ಭಾವನೆ ಇಲ್ಲ. ತಮ್ಮ ಎದುರಿರುವವರು ಗುರುಗಳು, ಶಿಕ್ಷಕರು ಶಿಕ್ಷಕಿಯರು ಎಂದು ನೋಡುವುದು ಮಾತ್ರವಲ್ಲದೆ ವಿವಿಧ ರೀತಿಯ ಭಾವನೆಗಳೊಂದಿಗೆ ಅವರನ್ನು ಕಲ್ಪಿಸಿಕೊಳ್ಳುವ ಕೊಳಕು ಮನಸ್ಥಿತಿಯವರನ್ನೂ ನಾವು ಕಾಣುತ್ತಿದ್ದೇವೆ. ಇಂತಹ ಸಾಕಷ್ಟು ಘಟನೆಗಳನ್ನು ನಾವು ನೋಡಿದ್ದೇವೆ. ಅಂತೆಯೇ ಇದೀಗ ಈ ಕುರಿತಂತೆ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಹೌದು, ಇಂದಿನ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗುವಾಗ ಗುರುವಿನ ಮೇಲೆ ಭಯ, ಭಕ್ತಿಗಳು ಉಂಟಾಗೋ ಬೋಲು ಕ್ರಶ್ (crush) ಆಗೋದು ಸಾಮಾನ್ಯವಾಗಿದೆ. ಇವರೇ ನನ್ನ ಡ್ರೀಮ್ ಗರ್ಲ್, ನನ್ನ ಡ್ರೀಮ್ ಬಾಯ್ (dream boy) ಅಂತ ಮಕ್ಕಳು ಮಾತನಾಡ್ತಿರುತ್ತಾರೆ. ಟೀಚರ್ಸ್ ಅಡಿಯಿಂದ ಮುಡಿಯವರೆಗೆ ನೋಡುವ ಮಕ್ಕಳು, ಅವರ ದೇಹ ಸೌಂದರ್ಯದ ಬಗೆಗೂ ಕಮೆಂಟ್ ಮಾಡುತ್ತಾರೆ. ಅಂತೆಯೇ ಇದೀಗ ವಿದ್ಯಾರ್ಥಿಗಳು ಹೀಗೆ ಮಾತನಾಡಿಕೊಂಡ ವಿಚಾರ ಶಿಕ್ಷಕಿಯೊಬ್ಬರಿಗೆ ಕಂಟಕವಾಗಿದೆ. ಇದನ್ನು ಸ್ವತಃ ಆ ಶಿಕ್ಷಕಿಯೇ ಸಮಸ್ಯೆಯೆಂದು ರೆಡ್ಡಿಟ್ (Reddit) ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಭಾರೀ ವೈರಲ್ ಆಗ್ತಿದೆ(Viral Post)
ಅಂದಹಾಗೆ ರೆಡ್ಡಿಟ್ ನಲ್ಲಿ ಶಿಕ್ಷಕಿ ಪೋಸ್ಟ್ ಹಂಚಿಕೊಂಡಿರುವ ಶಿಕ್ಷಕಿ ಕಳೆದ ಆರು ವರ್ಷಗಳಿಂದ ಹೈಸ್ಕೂಲ್ ಮಕ್ಕಳಿಗೆ ಕಲಿಸುತ್ತಿದ್ದಾಳೆ. ಆದರೆ ಆಕೆಯ ಎದೆ ಸಾಮಾನ್ಯಕ್ಕಿಂತ ಸ್ವಲ್ಪ ದೊಡ್ಡದಿದೆ. ಇದು ಮುಜುಗರತರಿಸಬಾರದು ಎನ್ನುವ ಕಾರಣಕ್ಕೆ ಶಿಕ್ಷಕಿ ಸದಾ ಡ್ರೆಸ್ ಕೋಡ್ ಪಾಲನೆ ಮಾಡ್ತಾರೆ. ಒಂದು ದಿನವೂ ಯುನಿಫಾರ್ಮ್ ಮರೆಯದ ಶಿಕ್ಷಕಿ, ಬಹಳ ಎಚ್ಚರಿಕೆಯನ್ನು ವಹಿಸ್ತಾಳೆ. ಇಷ್ಟಾದ್ರೂ ಎಂಟನೇ ತರಗತಿ ಓದುವ ವಿದ್ಯಾರ್ಥಿಯೊಬ್ಬನ ಕಣ್ಣು ಅದ್ರ ಮೇಲೆ ಬಿದ್ದಿದೆ. ಕಣ್ಣು ಬಿದ್ದರೆ ಬಿಡಿ ನೋಡಿ ಸುಮ್ಮನಾದ ಅನ್ನಬಹುದು. ಆದರೆ ಅದನ್ನು ತಗೊಂಡು ಹೋಗಿ ಮನೆಯಲ್ಲೂ ಮಾತನಾಡಿ, ಪೋಷಕರಿಗೆಲ್ಲಾ ಹೇಳಿಬಿಟ್ಟಿದ್ದಾನೆ.
ವಿದ್ಯಾರ್ಥಿ ಪಾಲಕರು ಸೀದಾ ಸ್ಕೂಲ್ ಗೆ ಬಂದು ಶಿಕ್ಷಕಿ ಬ್ರೆಸ್ಟ್ ಬಗ್ಗೆ ಮಗ ಮಾತನಾಡ್ತಿದ್ದ. ಶಿಕ್ಷಕಿ ಡ್ರೆಸ್ ಕೋಡ್ ಪಾಲನೆ ಮಾಡ್ತಿಲ್ಲ ಅನಿಸುತ್ತೆ ಅಂತ ಮುಖ್ಯ ಶಿಕ್ಷಕಿಯನ್ನು ಕರೆದು ಇದ್ರ ಬಗ್ಗೆ ಮಾತನಾಡಿದ್ದಾರೆ. ಮಕ್ಕಳು ತನ್ನ ಬ್ರೆಸ್ಟ್ ಬಗ್ಗೆ ಚರ್ಚೆ ಮಾಡ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ಶಿಕ್ಷಕಿ ಆಘಾತಕ್ಕೊಳಗಾಗಿದ್ದಾಳೆ. ನನ್ನ ದೇಹದ ಬಗ್ಗೆಯೇ ನನ್ನ ಪಾಲಕರು ಎಂದೂ ಮಾತನಾಡಿಲ್ಲ. ನಿಮಗೆ ಇಂಥ ಸಮಸ್ಯೆ ಕಾಡಿದೆಯಾ? ನಾನು ಆರೋಗ್ಯವಂತ ಮಹಿಳೆ, ದೈಹಿಕವಾಗಿ ನಾನು ಅದನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಆ ಟೀಚರ್ ಪೋಸ್ಟ್ ಹಂಚಿಕೊಂಡಿದ್ದಾಳೆ.
ಅಲ್ಲದೆ ನನಗೆ ವಿದ್ಯಾರ್ಥಿ ಹೀಗೆ ಹೇಳಿದ್ದಾನೆ ಎಂಬುದನ್ನು ನಂಬೋದು ಕಷ್ಟ. ಮಗು ಹಾಗು ಪೋಷಕರು ಯಾರು ಎಂಬುದು ನನಗೆ ತಿಳಿದಿಲ್ಲ. ಆ ವಿದ್ಯಾರ್ಥಿ ಯಾರು ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿಯೂ ಇಲ್ಲ. ತಿಳಿದ್ರೆ ಪಾಠ ಮಾಡಲು ತೊಂದರೆಯಾಗುತ್ತದೆ. ಅದು ವೈಯಕ್ತಿಕ ಕಮೆಂಟ್ ಆಗಿರೋದ್ರಿಂದ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅದನ್ನು ಶಾಲೆ ಆಡಳಿತ ಮಂಡಳಿ ಹ್ಯಾಂಡಲ್ ಮಾಡ್ತಿದೆ ಎಂದು ಶಿಕ್ಷಕಿ ಪೋಸ್ಟ್ ನಲ್ಲಿ ಬರೆದಿದ್ದಾಳೆ. ಸದ್ಯ ಈ ಪೋಸ್ಟ್ ಗೆ ತರಹೇವಾರಿ ಕಮೆಂಟ್ ಬಂದಿವೆ.