TSRTC: ಸರ್ಕಾರಿ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ್ಲೇ ಮಗುವಿನ ಜನನ – ಮಗುವಿಗೆ ಜೀವನ ಪರ್ಯಂತ ಉಚಿತ ಪ್ರಾಯಾಣ ಘೋಷಿಸಿದ ಸಾರಿಗೆ ಸಂಸ್ಥೆ !!

TSRTC: ಕೆಲವರು ಹುಟ್ಟುವಾಗಲೇ ಅದೃಷ್ಟ ಮಾಡಿ ಬಂದಿರುತ್ತಾರೆ. ಅದು ದೊಟ್ಟ ಮಟ್ಟದ್ದೋ, ಚಿಕ್ಕ ಮಟ್ಟದ್ದೋ ಬೇರೆ ಪ್ರಶ್ನೆ. ಆದರೆ ಅದು ಒಲಿಯುವುದೇ ಇಲ್ಲ ಮುಖ್ಯ ಸಂಗತಿ. ಅಂತೆಯೇ ಸರ್ಕಾರಿ ಬಸ್ಸಿನಲ್ಲಿಯೇ ಮಗುವೊಂದು ಜನಿಸಿದ್ದು, ಈ ಸುದ್ದಿ ತಿಳಿದು ಸಾರಿಗೇ ಸಂಸ್ಥೆ ಕೈ ನಿರ್ಧಾರವನ್ನು ನೀವು ಕೇಳಿ ತಿಳಿದರೆ ಆ ಮಗು ಹುಟ್ಟುವಾಗಲೇ ಅದೃಷ್ಟ ಮಾಡಿದೆ ಎಂದು ಅಂದುಕೊಳ್ಳುವುದಂತೂ ಪಕ್ಕಾ.

 

ಹೌದು, ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಶಕ್ತಿ ಯೋಜನೆ(Shakti yojane)ಯಡಿ ಉಚಿತ ಪ್ರಯಾಣ ಮಾಡುತ್ತಿದ್ದ ಗರ್ಭಿಣಿ ಬಸ್‌ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗೆ ಸರ್ಕಾರಿ ಬಸ್ಸಿನಲ್ಲಿ ಜನಿಸಿದ ಹೆಣ್ಣು ಮಗುವಿಗೆ ಜೀವಮಾನವಿಡೀ ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ನೀಡುವುದಾಗಿ ಸಂಸ್ಥೆಯು ಘೋಷಣೆ ಮಾಡಿದೆ.

ಅಂದಹಾಗೆ ಗದ್ವಾಲ ಡಿಪೋಗೆ ಸೇರಿದ ಟಿ ಆರ್ ಟಿಸಿ ಬಸ್(TSRTC) ವನಪರ್ತಿ ಮಾರ್ಗವಾಗಿ ಹೋಗುತ್ತಿದ್ದಾಗ ಈ ಅನಿರೀಕ್ಷಿತ ಘಟನೆ ನಡೆದಿದೆ. ರಾಖಿ ಪೌರ್ಣಮಿಯಂದು ವನಪರ್ತಿಯ ತುಂಬು ಗರ್ಭಿಣಿ ಸಂಧ್ಯಾ ತನ್ನ ಸಹೋದರರಿಗೆ ರಾಖಿ ಕಟ್ಟಲು ಹೋಗುತ್ತಿದ್ದರು. ಆದರೆ, ಬಸ್‌ನಲ್ಲಿದ್ದಾಗ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿತು. ಸಮೀಪದಲ್ಲಿ ಯಾವುದೇ ಆಸ್ಪತ್ರೆಗಳು ಲಭ್ಯವಿರಲಿಲ್ಲ. ಆದರೆ, ದೇವರು ಆ ಬಸ್ಸಿನಲ್ಲಿ ಮಹಿಳಾ ಕಂಡಕ್ಟರ್ ಕರ್ತವ್ಯದಲ್ಲಿದ್ದರು. ಜೊತೆಗೆ, ಅದೇ ಬಸ್ಸಿನಲ್ಲಿ ನರ್ಸ್ ಕೂಡ ಪ್ರಯಾಣ ಮಾಡುತ್ತಿದ್ದರು.

ಹೀಗಾಗಿ, ತುರ್ತು ವೈದ್ಯಕೀಯ ಸೌಲಭ್ಯ ಸಿಗದ ಪರಿಸ್ಥಿತಿಯಲ್ಲಿ, ಇತರೆ ಪ್ರಯಾಣಿಕರನ್ನು ಕೆಳಗಿಳಿಸಿ ಮಹಿಳಾ ಕಂಡಕ್ಟರ್ ಹಾಗೂ ನರ್ಸ್ ಸೇರಿ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಇದರ ಪರಿಣಾಮವಾಗಿ ಗರ್ಭಿಣಿ ಬಸ್ಸಿನಲ್ಲಿ ಮುದ್ದಾದ ಆರೋಗ್ಯವಂತ ಹೆಣ್ಣು ಮಗಿವಿಗೆ ಜನ್ಮ ನೀಡಿದ್ದಾಳೆ. ಬಸ್ಸಿನಲ್ಲಿ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಿ ಇಬ್ಬರ ಜೀವ ಉಳಿಸಿದ ಕಂಡಕ್ಟರ್ ಹಾಗೂ ನರ್ಸ್ ರನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.

ಟಿಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ವಿಷಯ ಸಾಮಾಜಿಕ ಜಾಲತಾಣಗಳ ಮೂಲಕ ಆರ್‌ಟಿಸಿ ಎಂಡಿ ಸಜ್ಜನರ್‌ಗೆ ತಲುಪಿತ್ತು. ಹೀಗಾಗಿ ಆ ಮಗುವಿನ ಜೊತೆಗೆ ಕಂಡಕ್ಟರ್ ಭಾರತಿ ಮತ್ತು ನರ್ಸ್ ಅಲಿವೇಲು ಅವರಿಗೆ ಬಂಪರ್ ಆಫರ್ ಕೊಟ್ಟಿದ್ದಾರೆ. ಬಸ್ಸಿನಲ್ಲಿ ಜನಿಸಿದ ಹೆಣ್ಣು ಮಗುವಿಗೆ ಜೀವನ ಪರ್ಯಂತ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಇಷ್ಟೇ ಅಲ್ಲದೆ ಇನ್ನುಮುಂದೆ ಟಿಎಸ್‌ಆರ್‌ಟಿಸಿ ಬಸ್ಸಿನಲ್ಲಿ ಜನಿಸಿದ ಯಾವುದೇ ಹೆಣ್ಣು ಮಗುವಿಗೆ ಆರ್‌ಟಿಸಿ ಬಸ್ಸಿನಲ್ಲಿ ಜೀವಮಾನದ ಉಚಿತ ಪ್ರಯಾಣಕ್ಕೆ ಬಸ್ ಪಾಸ್ ನೀಡಲು ಆರ್‌ಟಿಸಿ ಸಂಸ್ಥೆ ನಿರ್ಧರಿಸಿದೆ.

Leave A Reply

Your email address will not be published.