Animals: ನಿಮ್ಮ ಮನೆ ಸುತ್ತಮುತ್ತವೇ ಇರುವ ಈ ಪ್ರಾಣಿ ಹುಟ್ಟಿದ ತಕ್ಷಣ ತನ್ನ ತಾಯಿಯನ್ನೇ ತಿಂದು ಮುಗಿಸುತ್ತೆ! ಈ ಜೀವಿ ಯಾವುದು ಗೊತ್ತಾ?
Animals: ತಾಯಿ-ಮಗುವಿನ ಮಮಕಾರ ಅನುಕಂಪ ಅದೊಂದು ಅದ್ಭುತ. ಲೋಕದಲ್ಲಿ ಮಗು ಮತ್ತು ತಾಯಿ ಎರಡು ಜೀವಗಳು ಒಬ್ಬರಿಗೊಬ್ಬರು ಆಸರೆ ಆಗಿರುತ್ತಾರೆ. ಆದ್ರೆ ಇದೊಂದು ಜೀವಿ (Animals) ಮಾತ್ರ ಹುಟ್ಟಿದ ತಕ್ಷಣ ತನ್ನ ತಾಯಿಯನ್ನು ತಿಂದು ಬದುಕಿಕ್ಕೊಲ್ಲುತ್ತದೆ.
ನಿಮಗೆ ಇದೊಂದು ಸವಾಲಿನ ಪ್ರಶ್ನೆಯು ಹೌದು, ಅಂತಹ ಒಂದು ಪ್ರಶ್ನೆ ಎಂದರೆ ಹುಟ್ಟಿದ ತಕ್ಷಣ ತಾಯಿಯನ್ನು ತಿನ್ನುವಂತಹ ಜೀವಿ ಯಾವುದು, ಈ ಭೂಮಿಯ ಮೇಲೆ ಅಂತಹ ಜೀವಿ ಇದೆಯೇ ಅನ್ನೋದು?
ಈ ಜೀವಿ ನಿಮ್ಮ ಮನೆ ಸುತ್ತ ಮುತ್ತಲು ಕಾಣ ಸಿಗುತ್ತೆ. ಮತ್ತು ಇದು ವಿಷಕಾರಿ ಜೀವಿಯು ಹೌದು, ಆ ಜೀವಿಯೇ ಚೇಳು. ಇದು ಈ ಜೀವಿಗೆ ಸಂಬಂಧಿಸಿದ ಕುತೂಹಲಕಾರಿ ಅಂಶವೆಂದರೆ ಅದು ಹುಟ್ಟಿದ ತಕ್ಷಣ ತಾಯಿಯನ್ನು ತಿನ್ನುತ್ತದೆ. ಯಾಕೆ ಎಂಬ ಕಾರಣ ಇಲ್ಲಿದೆ ನೋಡಿ.
ಒಂದು ಹೆಣ್ಣು ಚೇಳು ಒಮ್ಮೆಗೆ ಕನಿಷ್ಠ 100 ಕ್ಕಿಂತಲೂ ಹೆಚ್ಚು ಮಕ್ಕಳಿಗೆ ಜನ್ಮ ನೀಡುತ್ತದೆ. ಆದರೆ ಇದು ತನ್ನ ಮಕ್ಕಳ ಸುರಕ್ಷತೆಯ ಕಾರಣಗಳಿಗಾಗಿ, ಅವುಗಳನ್ನು ತನ್ನ ಬೆನ್ನಿನ ಮೇಲೆ ಒಯ್ಯುತ್ತದೆ. ಈ ಸಮಯದಲ್ಲಿ ಏನು ಅರಿಯದ ಮರಿ ಚೇಳುಗಳು ತಮ್ಮ ತಾಯಿಯ ಬೆನ್ನಿನ ಮಾಂಸವನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಮತ್ತು ಹೆಣ್ಣು ಚೇಳಿನ ದೇಹವು ಸಂಪೂರ್ಣವಾಗಿ ತನ್ನ ಮಕ್ಕಳ ಪಾಲಗುತ್ತದೆ.