Sale Deed Registration: ಇನ್ನು ಮುಂದೆ ಈ ಜಿಲ್ಲೆಯಾದ್ಯಂತ ಜಮೀನಿನ ನೋಂದಾವಣೆ ಕ್ರಯಪತ್ರ ನೋಂದಾವಣೆಗೆ ಅವಕಾಶ: ಸರ್ಕಾರದ ನೂತನ ಆದೇಶ

Sale Deed Registration: ಕೊಡಗು ಜಿಲ್ಲೆಯ ವ್ಯಾಪ್ತಿಯ ಎಲ್ಲಾ ನೋಂದಾವಣಿಗಳನ್ನು ಕೊಡಗು ಜಿಲ್ಲೆಯ ಮಡಿಕೇರಿ ವಿರಾಜಪೇಟೆ ಪೊನ್ನಂಪೇಟೆ, ಕುಶಾಲನಗರ ಸೋಮವಾರಪೇಟೆ, ಉಪ ನೊಂದಾವಣಿ ಕಚೇರಿಯಲ್ಲಿ (ಸಬ್ ರಿಜಿಸ್ಟರ್ ಕಚೇರಿ) ಜಿಲ್ಲಾ ವ್ಯಾಪ್ತಿಯ ಯಾವ ಭಾಗದಲ್ಲಾದರೂ ತಮ್ಮ ಆಸ್ತಿಪಾಸ್ತಿಗಳ, ನೋಂದಾವಣೆ, ಕ್ರಾಯಪತ್ರ, ಭೋಗ್ಯ ಪತ್ರ, ಪವರ್ ಆಫ್ ಅಟಾರ್ನಿ, ಒಪ್ಪಂದ ಪತ್ರ ಇನ್ನಿತರ ಪತ್ರಗಳ ನೋಂದಾವಣೆ ಇವುಗಳನ್ನು ಜಿಲ್ಲೆಯ ಒಳಗಡೆ ಎಲ್ಲಿ ಬೇಕಾದರೂ ಇನ್ನು ಮುಂದೆ ನೋಂದಾಯಿಸಿಕೊಳ್ಳ ಬಹುದಾಗಿದೆ.
ಕರ್ನಾಟಕ ಸರ್ಕಾರ ಪ್ರಥಮ ಆದ್ಯತೆಯಾಗಿ ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಿಗೆ ಆಗಸ್ಟ್ 20 ರಿಂದ ಅನ್ವಯವಾಗುವಂತೆ ನೂತನ ಆದೇಶವನ್ನು ಹೊರಡಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಗಳಾದ ( ನೊಂದಾವಣಿ, ಮತ್ತು ಸ್ಟ್ಯಾಂಪ್ )ಎ. ಜೆ ವೀಣಾ ಅವರು 20.08.2024ರಂದು ಸರ್ಕಾರದ ಪರವಾಗಿ ಆದೇಶ ಹೊರಡಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಈ ನೂತನ ಆದೇಶದ ಅನ್ವಯ ಸಪ್ಟಂಬರ್ 5 ರೊಳಗೆ ಏಕಕಾಲದಲ್ಲಿ ಕಾರ್ಯಾರಂಭ ಆಗುವ ಎಲ್ಲಾ ಸೂಚನೆಗಳು ಕಂಡು ಬಂದಿದೆ. ಎಲ್ಲಾ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ತಂತ್ರಾಂಶವನ್ನು ಸೆರಿಪಡಿಸಿಕೊಂಡು, ಕ್ರಮಬದ್ಧವಾಗಿ ಸಪ್ಟಂಬರ್ 5 ರ ಒಳಗೆ ಜಿಲ್ಲಾಧ್ಯಂತ ಈ ನೂತನ ನಿಯಮ ಜಾರಿಗೆ ಬರಲಿದೆ ಎಂದು ಇಲಾಖೆಯ ಬಲ್ಲಮೂಲಗಳಿಂದ ತಿಳಿದುಬಂದಿದೆ. ಇನ್ನು ಮುಂದೆ ಸಾರ್ವಜನಿಕರಿಗೆ ಜಿಲ್ಲೆಯ ಕೆಲವೊಂದು ಸಬ್ ರಿಜಿಸ್ಟರ್ ಕಚೇರಿಗಳಲ್ಲಿ, ಆಗುತ್ತಿದ್ದ ಕಿರಿಕಿರಿ ಹಾಗೂ ವಿಳಂಬ ತಪ್ಪಿದಂತಾಗಿದೆ.
ಜಿಲೆಯಲ್ಲಿ ಮಡಿಕೇರಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಹೆಚ್ಚು ಕಿರಿಕಿರಿ ಉಂಟಾಗುತ್ತಿದ್ದು, ಹಾಗೆ ಭ್ರಷ್ಟಾಚಾರ ಹೆಚ್ಚು ನಡೆಯುತ್ತಿದೆ ಎಂಬ ಆರೋಪ ಹಿನ್ನೆಲೆ ಇತ್ತೀಚೆಗೆ ಲೋಕಾಯುಕ್ತರು ದಾಳಿ ನಡೆಸಿದ್ದರು. ಆರೋಪ ಹೊತ್ತಿದ್ದ ಅಧಿಕಾರಿ ಮತ್ತೆ ಪುನಃ ತಡೆ ಆಜ್ಞೆ ತಂದು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಹಾಗೂ ವಕೀಲರಿಗೆ ಇವರ ವಿಳಂಬ ಧೋರಣೆಯಿಂದ ಬೇಸತ್ತಿದ್ದರು . ಆದರೆ ಇದೀಗ ಬಂದ ನೂತನ ಆದೇಶದಿಂದ ಜಿಲ್ಲೆಯ ಐದು ಭಾಗದಲ್ಲಿ ಎಲ್ಲಿ ಬೇಕಾದರೂ ನೋಂದಾವಣೆ, ಕ್ರಾಯಪತ್ರವನ್ನು ಹೆಚ್ಚು ತ್ವರಿತ ಗತಿಯಲ್ಲಿ ಸೇವೆ ನೀಡುವ ಸಬ್ ರಿಜಿಸ್ಟರ್ ಕಚೇರಿಯಲ್ಲಿ ವ್ಯವರಿಸಬಹುದಾಗಿದೆ. ಸರ್ಕಾರದ ಈ ನೂತನ ಆದೇಶವನ್ನು ಜಿಲ್ಲೆಯ ಹಲವು ವಕೀಲರು ಹಾಗೂ ಸಾರ್ವಜನಿಕರು ಸ್ವಾಗತಿಸಿದ್ದಾರೆ ಹಾಗೂ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.