Pregnant: ಅಂಡರ್ವೇರ್ ಚಮಕ್! ಆನ್ಲೈನ್ ಅಂಡರ್ವೇರ್ ಧರಿಸಿ ನನ್ನ ಮಗಳು ಪ್ರೆಗ್ನೆಂಟ್! ದೂರು ನೀಡಿದ ಮಹಿಳೆ
Pregnant: ಆನ್ಲೈನ್ ನಲ್ಲಿ ಖರೀದಿಸಿದ ಅಂಡರ್ವೇರ್ ಧರಿಸಿ ನನ್ನ ಮಗಳು ಪ್ರೆಗ್ನೆಂಟ್ (Pregnant) ಆಗಿದ್ದಾಳೆ ಎಂದು ಚೀನಾದ ಮಹಿಳೆಯೊಬ್ಬಳು ಇತ್ತೀಚಿಗಷ್ಟೇ ಒಳ ಉಡುಪು ತಯಾರಿಕಾ ಕಂಪನಿಯೊಂದರ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಮಾಹಿತಿ ಬಯಲಿಗೆ ಬಂದಿದೆ. ಈ ಘಟನೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಅರೆ! ಏನಿದು ಆನ್ಲೈನ್ ಅಂಡರ್ವೇರ್ ಚಮಕ್ ನೋಡೋಣ ಬನ್ನಿ. ದೂರಿನ ಆಧಾರದಲ್ಲಿ, ತನಿಖೆಯ ವೇಳೆ ಮಹಿಳೆ ತನ್ನ ಮಗಳಿಗಾಗಿ ಆನ್ಲೈನ್ ನಲ್ಲಿ ಅಂಡರ್ವೇರ್ ಖರೀದಿ ಮಾಡಿರುವುದನ್ನು ಹೇಳಿದ್ದಾಳೆ. ಅದನ್ನು ಧರಿಸಿದ ಬಳಿಕ ನನ್ನ ಮಗಳು ಗರ್ಭ ಧರಿಸಿದ್ದಾಳೆ. ಪ್ರೆಗ್ನೆಂಟ್ ಆಗಲು ಆನ್ಲೈನ್ ನಲ್ಲಿ ಖರೀದಿ ಮಾಡಿದ ಅಂಡರ್ವೇರ್ ಕಾರಣ ಎಂದು ಹೇಳಿಕೊಂಡಿದ್ದಾಳೆ.
ಈ ದೂರಿನಿಂದ ಉಡುಪು ತಯಾರಿಕಾ ಕಂಪನಿ ಶಾಕ್ ಆಗಿದ್ದು, ಈ ರೀತಿ ಆಗಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ತಿಳಿ ಹೇಳಿದರೂ ಸಹ ಕೇಳಲಿಲ್ಲ. ಕೊನೆಗೂ ಹುಡುಗಿಯ ಗರ್ಭಧಾರಣೆಗೂ ಕಂಪನಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಕೋರ್ಟ್ ತೀರ್ಪು ನೀಡಿದ್ದು, ಈ ಘಟನೆಯ ಕುರಿತು ಒಳ ಉಡುಪು ತಯಾರಿಕಾ ಕಂಪನಿಯ ಸಿಇಒ ತನ್ನ ಅಧಿಕೃತ ಚಾನೆಲ್‌ಗಳಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.