Parthenogenesis: ನಿಮಗಿದು ಗೊತ್ತಾ? ಭೂಮಿಯಲ್ಲಿ ಸಂಭೋಗವಿಲ್ಲದೆ ಮರಿಗಳಿಗೆ ಜನ್ಮ ನೀಡುವ ವಿಚಿತ್ರ ಜೀವಿಗಳಿವು!

Parthenogenesis: ಸಾಮಾನ್ಯವಾಗಿ ಬಹುತೇಕ ಜೀವಿಗಳು ಸಂಯೋಗದ ಮೂಲಕ ಭ್ರೂಣ ಉತ್ಪತ್ತಿ ಮಾಡುತ್ತದೆ ಇದು ಪ್ರಕೃತಿ ನಿಯಮವು ಹೌದು. ಆದ್ರೆ ಕೆಲವು ಜೀವಿಗಳು ಯಾವುದೇ ಸಂಯೋಗವಿಲ್ಲದೆ ಮರಿಗಳಿಗೆ ಜನ್ಮ ನೀಡುತ್ತದೆ. ಅವುಗಳು ಯಾವುದೆಂದು ಇಲ್ಲಿದೆ ನೋಡಿ.

 

ಹೌದು, ಪಾರ್ಥೆನೋಜೆನೆಸಿಸ್ ಎಂಬುದು ಒಂದು ರೀತಿಯ ಅಲೈಂಗಿಕ ಸಂತಾನೋತ್ಪತ್ತಿಯಾಗಿದ್ದು , ಇದರಲ್ಲಿ ಹೆಣ್ಣು ಗ್ಯಾಮೆಟ್ ಅಥವಾ ಮೊಟ್ಟೆಯ ಕೋಶವು ಫಲೀಕರಣವಿಲ್ಲದೆಯೇ ಜೀವಿಯಾಗಿ ಬೆಳೆಯುತ್ತದೆ. ಅಂದರೆ ಪಾರ್ಥೆನೋಜೆನೆಸಿಸ್ ಮೊಟ್ಟೆಯನ್ನು ಭ್ರೂಣವಾಗಿ ಪರಿವರ್ತಿಸುವ ಪ್ರಕ್ರಿಯೆ ಆಗಿದೆ. ಇದರ ಭಾಗವಾಗಿ ಜನಿಸಿದ ಎಲ್ಲಾ ಶಿಶುಗಳು ಒಂದೇ ಲಿಂಗ ಹೊಂದಿರುತ್ತದೆ. ಈ ರೀತಿ ಮಿಲನವಿಲ್ಲದೆ ಶಿಶುಗಳಿಗೆ ಜನ್ಮ ನೀಡುವ ಕೆಲವು ಜೀವಿಗಳ ಬಗ್ಗೆ ತಿಳಿದುಕೊಳ್ಳೋಣ.

ಬಾನೆಟ್‌ಹೆಡ್ ಶಾರ್ಕ್:

ಬಾನೆಟ್‌ಹೆಡ್ ಶಾರ್ಕ್‌ಗಳು ಒಂದು ರೀತಿಯ ಶಾರ್ಕ್ ಆಗಿದ್ದು ಅದು ದೈಹಿಕ ಸಂಪರ್ಕ ಮಾಡದೇ ಮರಿಗಳಿಗೆ ಜನ್ಮ ನೀಡುತ್ತದೆ. ಉದಾಹರಣೆಗೆ ಒಮಾಹಾದ ಹೆಂಟಿ ಡೋರ್ಲಿ ಮೃಗಾಲಯ ಮತ್ತು ಅಕ್ವೇರಿಯಂನಲ್ಲಿ ಹೆಣ್ಣು ಬಾನೆಟ್ ಹೆಡ್ ಸಂಯೋಗವಿಲ್ಲದೆ ಜನ್ಮ ನೀಡಿದೆ. ಅದಲ್ಲದೆ ಜೀಬ್ರಾ ಶಾರ್ಕ್‌ಗಳು, ಕಪ್ಪು ತುದಿ ರೀಫ್ ಶಾರ್ಕ್‌ಗಳು ಮತ್ತು ಸ್ಮೂತ್‌ಹೆಡ್ ಶಾರ್ಕ್‌ಗಳು ಈ ರೀತಿಯಲ್ಲಿ ಜನ್ಮ ನೀಡುತ್ತವೆ ಎಂದು ಕಂಡುಬಂದಿದೆ.

ಮೊಲಿಫಿಶ್:

ಮೊಲಿಫಿಶ್ ಮೊಟ್ಟೆಯಿಡಲು ವೀರ್ಯವನ್ನು ಬಳಸುತ್ತದೆಯಾದರೂ, ಭ್ರೂಣದ ರಚನೆಯಲ್ಲಿ ವೀರ್ಯವು ಯಾವುದೇ ಪಾತ್ರವನ್ನು ವಹಿಸುವುದಿಲ್ಲ ಎಂದು ಅಧ್ಯಯನಗಳು ಕಂಡುಕೊಂಡಿವೆ.

ಕ್ಯಾಲಿಫೋರ್ನಿಯಾ ಕಾಂಡೋರ್: ಕ್ಯಾಲಿಫೋರ್ನಿಯಾ ಕಾಂಡೋರ್, ಇದು ಒಂದು ರೀತಿಯ ಹದ್ದು. ಇದು ದೈಹಿಕ ಸಂಪರ್ಕ ಇಲ್ಲದೇ ಜನ್ಮ ನೀಡುವುದು ಕಂಡುಬಂದಿದೆ. ಸ್ಯಾನ್ ಡಿಯಾಗೋ ಮೃಗಾಲಯದಲ್ಲಿ ಹೆಣ್ಣು ಕ್ಯಾಲಿಫೋರ್ನಿಯಾದ ಗಂಡು ಮರಿಗಳ ಆನುವಂಶಿಕ ಪರೀಕ್ಷೆ ನಡೆಸಿದಾಗ ಅವುಗಳಲ್ಲಿ ಕೇವಲ ತಾಯಿಯ ಡಿಎನ್‌ಎ ಮಾತ್ರ ಇರುವುದು ಕಂಡು ಬಂದಿದೆ.

ಚೂಲಿಪ್ರಣಿ:

ಇನ್ನು ಥೈಮೆಮಾ ಜಾತಿಗೆ ಸೇರಿದ ಮರಿಹುಳು ಮಿಲನವಿಲ್ಲದೆ ಮರಿಗಳಿಗೆ ಜನ್ಮ ನೀಡುವುದು ಸಾಮಾನ್ಯ.

ಮೊಸಳೆ:

ಪಾರ್ಥೆನೋಜೆನೆಸಿಸ್ ಮೂಲಕ ಶಿಶುಗಳಿಗೆ ಜನ್ಮ ನೀಡಬಲ್ಲ ಜೀವಿಗಳಲ್ಲಿ ಮೊಸಳೆಯೂ ಒಂದು. ಈ ಮೊಟ್ಟೆಗಳು ಫಲೀಕರಣವಿಲ್ಲದೆ ಭ್ರೂಣವಾಗಿ ಬೆಳೆಯುವುದು ಸಾಮಾನ್ಯವಾಗಿದೆ.

ಕುರುಡು ಹಾವು:

ಬ್ರಾಹ್ಮಣಿ ಕುರುಡಿ ಎಂದೂ ಕರೆಯಲ್ಪಡುವ ಕುರುಡು ಹಾವು ಲೈಂಗಿಕತೆ ಇಲ್ಲದೆ ತನ್ನ ಮರಿಗಳಿಗೆ ಜನ್ಮ ನೀಡುತ್ತದೆ.

ಟಾರ್ಡಿಗ್ರೇಡ್ಸ್:

ಸೂಕ್ಷ್ಮ ಜೀವಿಗಳಾಗಿರುವುದರಿಂದ ಇವು ಸಂಯೋಗವಿಲ್ಲದೆ ಮರಿಗಳಿಗೆ ಜನ್ಮ ನೀಡುತ್ತವೆ.

ಕೊಮೊಡೊ ಡ್ರ್ಯಾಗನ್:

2006 ರಲ್ಲಿ, ಕೊಮೊಡೊ ಡ್ರ್ಯಾಗನ್ ವಿಶ್ವದ ಅತ್ಯಂತ ಮಾರಣಾಂತಿಕ ಸರೀಸೃಪಗಳಲ್ಲಿ ಒಂದಾಗಿದೆ ಎಂದು ಸಂಶೋಧಕರು ಕಂಡುಕೊಂಡರು. ಈ ಜೀವಿಗಳು ಸಂಯೋಗವಿಲ್ಲದೆ ಮರಿಗಳಿಗೆ ಜನ್ಮ ನೀಡಬಹುದು.

Leave A Reply

Your email address will not be published.