C T Ravi: ಅದೊಂದಕ್ಕೆ ಟ್ಯಾಕ್ಸ್ ಹಾಕಿಬಿಟ್ರೆ ಇವರೆಲ್ಲಾ ಔರಂಗಜೇಬನ ಅಪ್ಪಂದಿರು ಅಂತ ಪ್ರೂವ್ ಆಗಿಬಿಡುತ್ತೆ – ಕಾಂಗ್ರೆಸ್ ವಿರುದ್ಧ ಸಿ.ಟಿ ರವಿ ಲೇವಡಿ

C T Ravi: ಗ್ಯಾರಂಟಿ ಯೋಜನೆಗಳನ್ನು(Congress Guarantees) ಜಾರಿಗೆ ತಂದು ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಪಿರುವ ರಾಜ್ಯ ಸರ್ಕಾರ ಇದೀಗ ಜನರಿಗೆ ಅನಿವಾರ್ಯ ಆಗಿರುವ, ಸಿಕ್ಕ ಸಿಕ್ಕ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಿದೆ. ಇದುವರೆಗೂ ಮದ್ಯದ ದರ ಏರಿಸಿ ಏರಿಸಿ ಮದ್ಯ ಪ್ರಿಯರ ಶಾಪಕ್ಕೆ ಗುರಿಯಾಗಿತ್ತು. ಬಳಿಕ ಸರ್ಕಾರದ ಕಣ್ಣು ಪೆಟ್ರೋಲ್, ಡೀಸೆಲ್(Petrol-Diesel ) ಹಾಗೂ ಹಾಲಿನ ಮೇಲೆ ಬಿದ್ದಿತ್ತು. ಆದರೀಗ ನೀರಿನ ದರವೂ ಏರಿಕೆಯಾಗುತ್ತದೆ. ಈ ವಿಚಾರ ಇಟ್ಟುಕೊಂಡು ಬಿಜೆಪಿ ನಾಯಕ ಸಿಟಿ ರವಿ(C T Ravi) ಅವರು ಕಾಂಗ್ರೆಸ್ ನ ಲೇವಡಿ ಮಾಡಿದ್ದಾರೆ.

 

ಹೌದು, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಅವರು ಯಾರು ಏನೇ ಹೇಳಿದರೂ ನೀರಿನ ಕಂದಾಯ ಜಾಸ್ತಿ ಮಾಡೇ ಮಾಡ್ತೀವಿ’ ಎಂದು ಹೇಳಿದ್ದಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ರವಿ, ಎಲ್ಲಾ ದರ ಏರಿಸಿ ಆಗಿದೆ. ಗಾಳಿ ಏಕೆ ಬಿಟ್ಟಿದ್ದೀರಾ ಅದನ್ನೂ ಏರಿಸಿಬಿಡಿ. ಗಾಳಿಗೊಂದಕ್ಕೆ ಟ್ಯಾಕ್ಸ್ ಹಾಕಿದ್ರೆ ಔರಂಗಜೇಬನ ಅಪ್ಪಂದಿರು ಅಂತ ತೋರ್ಸಕ್ಕೆ ಬೇರೇನೂ ಬೇಡ. ಔರಂಗಜೇಬ್ ಜೇಜಿಯಾ ತಲೆದಂಡ ಹಾಕಿದ್ನಂತೆ, ಇವ್ರು ಅವ್ರಪ್ಪ ಅಂತ ತೋರ್ಸಕ್ಕೆ ಆಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ.

ಅಲ್ಲದೆ ಡಿಕೆಶಿಯವರೇ ಜನವಿರೋಧಿ ಆಡಳಿತಕ್ಕೆ ಆಯಸ್ಸು ಕಮ್ಮಿ. ಲಿಕ್ಕರ್, ಸ್ಟಾಂಪ್ ಡ್ಯೂಟಿ, ಕರೆಂಟ್, ನೀರು ಹೀಗೆ ಎಲ್ಲಾ ಜಾಸ್ತಿ ಮಾಡಿದ್ದಾರೆ. ಒಂದೆಡೆ ಗ್ಯಾರಂಟಿ ಕೊಟ್ಟು ಮತ್ತೊಂದೆಡೆ ಎಲ್ಲರ ಜೇಬಿಗೂ ಪಿಕ್ ಪಾಕೆಟ್ ಮಾಡುತ್ತಿದ್ದಾರೆ. ಕಳ್ಳರು ಅಟೆನ್ಷನ್ ಡ್ರಾ ಮಾಡುತ್ತಾ 5 ರೂ. ಬೀಳಿಸಿ 500 ರೂ. ಹೊಡಿಯುತ್ತಾರೆ. ಈಗ ಕಾಂಗ್ರೆಸ್ ಸರ್ಕಾರ ಅದನ್ನೇ ಮಾಡುತ್ತಿದೆ. ಜನರಿಗೆ 2,000 ರೂ. ಕೊಟ್ಟು 20 ಸಾವಿರ ರೂ. ಹೊಡೆಯುವ ಕೆಲಸ ಮಾಡುತ್ತಿದೆ. ಹೀಗಾಗಿ ಮುಂದಿನ ಬಾರಿ ಜನ ಬುದ್ಧಿ ಕಲಿಸುವುದಕ್ಕೆ ಈಗಾಗಲೇ ತೀರ್ಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.