Bengaluru: ತಿಂಗಳಿಗೆ 6 ಲಕ್ಷ ಜೀವನಾಂಶ ಕೇಳಿದ ಪತ್ನಿ – ಹೈಕೋರ್ಟ್ ಜಡ್ಜ್ ಕೊಟ್ಟ ತೀರ್ಪು ಕೇಳಿ ನಿಂತಲ್ಲೇ ಫುಲ್ ಶೇಕ್ ಶೇಕ್ !!

Bengaluru: ವಿಚ್ಛೇದನ ಪಡೆಯುವ ಹಿನ್ನೆಲೆಯಲ್ಲಿ ಗಂಡನಿಂದ ತಿಂಗಳಿಗೆ 6 ಲಕ್ಷ ಪರಿಹಾರ ಕೇಳಿದ ಪತ್ನಿಗೆ ಕರ್ನಾಟಕ ‘ಹೈಕೋರ್ಟ್’ ನ್ಯಾಯಾಧೀಶರು ದೊಡ್ಡ ಆಘಾತ ನೀಡಿದ್ದು, ಅವರು ಕೊಟ್ಟ ತೀರ್ಪಿಗೆ ಆ ಕೋರ್ಟ್ ಮೆಟ್ಟಿಲೇರಿದ್ದ ಆ ಪತ್ನಿ ನಲುಗಿಹೋಗಿದ್ದಾಳೆ.

 

ಹೌದು, ಬೆಂಗಳೂರಿನ(Bengaluru) ಕರ್ನಾಟಕ ಹೈಕೋರ್ಟ್‌ನಲ್ಲಿ(Karnataka High Court)ನಡೆದ ವಿಚ್ಛೇದನದ ವಿಚಾರಣೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದ್ದೆ. ಇಂತಹ ಹೆಚ್ಚಿನ ಪ್ರಕರಣಗಳಲ್ಲಿ ಮಹಿಳೆಯೇ ಮೇಲುಗೈ ಸಾಧಿಸುದನ್ನು ನಾವು ನೋಡಿರುತ್ತೇವೆ. ಆದರೀಗ ಈ ಪ್ರಕರಣದಲ್ಲಿ ಯಾವುದೇ ಅನುಕಂಪ ಹಾಗೂ ಪೂರ್ವಗ್ರಹಕ್ಕೆ ಕಟ್ಟು ಬೀಳದೇ ನ್ಯಾಯಾಧೀಶರು ಕೊಟ್ಟ ಖಡಕ್‌ ತೀರ್ಪಿಗೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಚ್ಛೇದನ ಬಳಿಕ ನ್ಯಾಯಾಲಯ ಮಹಿಳೆಗೆ ಪತಿಯಿಂದ ಜೀವನಾಂಶ ಕೊಡಿಸುವುದು ಸಾಮಾನ್ಯ ಸಂಗತಿ. ಆದರೆ ಈ ಪ್ರಕರಣದಲ್ಲಿ ಮಹಿಳೆಯಿಟ್ಟ ಬೇಡಿಕೆ ಕಂಡು ನ್ಯಾಯಾಧೀಶರೇ ಶಾಂಕಿಗ್‌ ಆದೇಶ ಹೊರಡಿಸಿದ್ದಾರೆ. ಅದೇನೆಂದರೆ ಮಹಿಳೆಯೊಬ್ಬರು ಪತಿಯಿಂದ ವಿಚ್ಛೇದನ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗಸ್ಟ್ 20 ರಂದು ಈ ಪ್ರಕರಣದ ವಿಚಾರಣೆ ನಡೆದಿದ್ದು, ಮಹಿಳೆ ತನ್ನ ಪತಿಯಿಂದ ಕೇಳಿದ ಜೀವನಾಂಶ ಆಲಿಸಿದ ನ್ಯಾಯಾಧೀಶರೇ ತಬ್ಬಿಬ್ಬಾಗಿದ್ದಾರೆ. ಪತಿಯಿಂದ ದೂರಾಗಲು ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿ ಪತಿಯಿಂದ ತಿಂಗಳಿಗೆ 6 ಲಕ್ಷಕ್ಕಿಂತ ಹೆಚ್ಚು ಜೀವನಾಂಶಕ್ಕೆ ಬೇಡಿಕೆಯಿಟ್ಟ ಮಹಿಳೆಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಚಾರಣೆ ವೇಳೆ ಮಹಿಳೆ ಪರ ವಕೀಲರು ‘ತಮ್ಮ ಕಕ್ಷಿದಾರರಿಗೆ ಮಾಸಿಕ 6 ಲಕ್ಷ ರೂ ಪರಿಹಾರ ಧನ ಬೇಕು’ ಎಂದು ವಾದಿಸುತ್ತಾರೆ. ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಾಧೀಶರು ಗಂಡ ಆ ಹಣವನ್ನು ಕೊಡುವ ಬದಲು ಆಕೆಯೇ ಅದನ್ನು ಸಂಪಾದಿಸಿ ತೋರಿಸಲಿ.. ಚೌಕಾಶಿ ಮಾಡಲೆಂದು ಇಷ್ಟು ಮೊತ್ತವನ್ನು ಕೇಳುತ್ತಿದ್ದೀರೇನು? ಎಂದು ಕಿಡಿಕಾರಿದ್ದಾರೆ.

ಇಷ್ಟೇ ಅಲ್ಲದೆ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಕೂಡ ತೆಗೆದುಕೊಂಡಿರುವ ಪತಿಯಿಂದ ಮಹಿಳೆ 6,16,300 ರೂಪಾಯಿ ಮಾಸಿಕವಾಗಿ ಜೀವನಾಂಶ ಕೇಳಿರುವ ಬಗ್ಗೆ ನ್ಯಾಯಾಧೀಶರು ನೇರವಾಗಿ ಪ್ರಶ್ನಿಸಿದ್ದಾರೆ. ಯಾವುದೇ ಕುಟುಂಬದ ಜವಾಬ್ದಾರಿಯಿಲ್ಲದ ಒಂಟಿ ಮಹಿಳೆಗೆ ಇಷ್ಟೊಂದು ಹಣದ ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಮಹಿಳೆಯ ಪರ ವಕೀಲರು ಖರ್ಚು ವೆಚ್ಚಗಳ ವಿವರಣೆ ನೀಡಿದ್ದಾರೆ. ಮೊಣಕಾಲು ನೋವು, ಫಿಸಿಯೋಥೆರಪಿಗೆ ತಿಂಗಳಿಗೆ 4-5 ಲಕ್ಷ. ಶೂ ಹಾಗೂ ಬಟ್ಟೆ ಖರೀದಿಗೆ ತಿಂಗಳಿಗೆ 15,000 ರೂಪಾಯಿ, ಮನೆಯಲ್ಲೇ ಊಟದ ವೆಚ್ಚಗಳಿಗೆ ತಿಂಗಳಿಗೆ 60,000 ರೂಪಾಯಿ ಹಾಗೂ ಹೊರಗಡೆ ಊಟಕ್ಕೆ ಇನ್ನೂ ಕೆಲವು ಸಾವಿರ ರೂಪಾಯಿಗಳು ಸೇರಿದಂತೆ ಒಟ್ಟು ಪ್ರತಿ ತಿಂಗಳು 6,16,300 ರೂಪಾಯಿ ಮಾಸಿಕ ವೆಚ್ಚಕ್ಕೆ ಹಣ ನೀಡಬೇಕು ಎಂದು ಕೇಳಿದ್ದಾರೆ.

ಈ ವೇಳೆ ಕೆರಳಿದ ನ್ಯಾಯಾದೀಶರು ಒಬ್ಬ ವ್ಯಕ್ತಿಗೆ ಇಷ್ಟು ದೊಡ್ಡ ಮೊತ್ತದ ಹಣ ಬೇಕು ಎಂದು ನ್ಯಾಯಾಲಯಕ್ಕೆ ದಯವಿಟ್ಟು ಹೇಳಬೇಡಿ. ತಿಂಗಳಿಗೆ 6,16,300 ರೂ… ಒಂಟಿ ಮಹಿಳೆ ತನಗಾಗಿ ಇಷ್ಟು ಹಣ ಖರ್ಚು ಮಾಡುತ್ತಾರೆಯೇ? ಆಕೆ ಅಷ್ಟು ಹಣ ಖರ್ಚು ಮಾಡಲು ಬಯಸಿದರೆ, ಆಕೆ ಸಂಪಾದಿಸಲಿ. ಗಂಡನ ಮೇಲೆ ಹೇರುವುದಲ್ಲ. ನಿಮಗೆ ಕುಟುಂಬದ ಬೇರೆ ಯಾವುದೇ ಜವಾಬ್ದಾರಿ ಇಲ್ಲ. ನೀವು ಮಕ್ಕಳನ್ನು ನೋಡಿಕೊಳ್ಳಬೇಕಾಗಿಲ್ಲ. ನೀವು ಅದನ್ನು ನಿಮಗಾಗಿ ಬಯಸುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.

ಸದ್ಯ ಈ ವಿಚಾರಣೆಯ ವಿಡಿಯೋ, ತೀರ್ಪಿನ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನಟ್ಟಿಗರು ನ್ಯಾಯಾಧೀಶರ ದಿಟ್ಟ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಿಳೆಯ ಬಗ್ಗೆ ಅನುಕಂಪ ತೋರದೆ ಆಕೆಯ ಅವಶ್ಯಕತೆ ಮೀರಿದ ಖರ್ಚಿಗೆ ಎಚ್ಚರಿಕೆ ಕೊಟ್ಟ ನ್ಯಾಯಾಧೀಶರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಕಮೆಂಟ್‌ ಹಾಕುತ್ತಿದ್ದಾರೆ.

Leave A Reply

Your email address will not be published.