Kodi Shri: ‘ಬೀದಿಯಲ್ಲಿ ಮತ್ತೆ ಜನ ಸಾಯುತ್ತಾರೆ, ರೈತರಿಗೆ ಭಾರಿ ನಷ್ಟ.. ಹಲವು ದೇಶ ಮುಳುಗುತ್ತವೆ’ – ಕೋಡಿ ಶ್ರೀಗಳಿಂದ ಮತ್ತೆ ಭಯಾನಕ ಭವಿಷ್ಯ !!

Kodi Shri: ಕೋಡಿ ಮಠದ ಶ್ರೀಗಳು ಇತ್ತೀಚಿನ ದಿನಗಳಲ್ಲಿ ಭಾರೀ ಅಚ್ಚರಿಯ ಭಶಿಷ್ಯಗಳನ್ನು ನುಡಿಯುತ್ತಿದ್ದಾರೆ. ಒಂದರ ಹಿಂದೆ ಒಂದಂತೆ ಅವು ನಿಜವಾಗುತ್ತಲೂ ಇವೆ. ಈ ಬೆನ್ನಲ್ಲೇ ಶ್ರೀಗಳು ಮತ್ತೆ ಒಗಟಿನ ಮೂಲಕ ಶಾಕಿಂಗ್ ಭವಿಷ್ಯ ಹೇಳಿದ್ದಾರೆ.

 

ಹೌದು, ಬೆಂಗಳೂರಿನಲ್ಲಿ(Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಮಠದ ಡಾ. ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ(Shivananada Shivyogirajendra Swamiji) ‘ಮನುಷ್ಯರು ಅಸ್ತಿತ್ವ ಕಳೆದುಕೊಂಡು ರಸ್ತೆಯಲ್ಲಿ ಬಿದ್ದು ಸಾಯುತ್ತಾರೆ. ಹಲವಾರು ರಾಷ್ಟ್ರಗಳು ಪ್ರಳಯದ ಕಾರಣದಿಂದ ಮುಳುಗಿ ಹೋಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.

ಇಷ್ಟೇ ಅಲ್ಲದೆ ಇತ್ತ ರೈತರಿಗೆ ಈ ಮಳೆಯ ಕಾರಣದಿಂದ ನಷ್ಟಗಳು ಕೊಡ ಸಂಭವಿಸಲಿದೆ. ಈ ವರ್ಷ ಬಿಸಿಯಾದ ಜಾಗ ಪ್ರಳಯ ಆಗುತ್ತದೆ. ತಂಪಾಗಿರುವ ಜಾಗವೆಲ್ಲ ಬಿಸಿ ಆಗಿ ಬರಗಾಲ ಅನುಭವಿಸುತ್ತದೆ. ಕರ್ನಾಟಕ ಸಮಸ್ಯೆ ಯಿಂದ ತಪ್ಪಿಸಿಕೊಳ್ಳಲು ಅಧಿಕಾರದಲ್ಲಿ ಇರುವವರು ಮುಂಜಾಗ್ರತೆ ಕ್ರಮ ತೆಗೆದುಕೊಂಡರೆ ಈ ಎಲ್ಲಾ ಸಮಸ್ಯೆ ಯಿಂದ ಪಾರಾಗಬಹುದು ಎಂದು ಹೇಳಿದ್ದಾರೆ.

Leave A Reply

Your email address will not be published.