Indian Railway: ರೈಲು ಪ್ರಯಾಣಿಕರೇ ಇನ್ಮುಂದೆ 3AC ಗಿಂತಲೂ ಕಡಿಮೆ ಬೆಲೆಗೆ AC ಟಿಕೆಟ್ ಬುಕ್ ಮಾಡಲು ಸಾಧ್ಯ!

Indian Railway: ದೂರ ಪ್ರಯಾಣಕ್ಕೆ ಬಹುತೇಕರ ಆಯ್ಕೆ ರೈಲು ಪ್ರಯಾಣ ಆಗಿರುತ್ತೆ. ಹಾಗಿರುವಾಗ ನೀವು ನಿಮಗೆ ಕಂಫರ್ಟ್ ಝೋನ್ ಇರುವ ಸೀಟ್ ಆಯ್ಕೆ ಮಾಡಿಕೊಳ್ಳಲು ಬಯಸುತ್ತೀರಿ. ಹಾಗಂತ ರೈಲು ಪ್ರಯಾಣದಲ್ಲಿ ಎಸಿ ಟಿಕೆಟ್ ಅಂದ ತಕ್ಷಣ ಅತ್ಯಂತ ದುಬಾರಿ ಎಂದು ಹಿಂದೆ ಸರಿಯುತ್ತೀರಿ. ಆದ್ರೆ ಇನ್ಮುಂದೆ ಇಂತಹ ಭಯ ಅಥವಾ ಹಿಂಜರಿಕೆ ಬೇಡ. ಹೌದು, ನೀವು ಈಗ ಕಡಿಮೆ ಬೆಲೆಯಲ್ಲಿ ಕೂಡಾ ಎಸಿ ಬೋಗಿಯಲ್ಲಿ ಹಾಯಾಗಿ ಮಲಗಿಕೊಂಡು ಪ್ರಯಾಣ ಬೆಳೆಸಬಹುದು.ಅದು ಕೂಡಾ ಥರ್ಡ್ ಎಸಿಗಿಂತ ಕಡಿಮೆ ದರದಲ್ಲಿ. ಅದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.

 

ನಿಮಗೆ ತಿಳಿದಿರಬಹುದು. ರೈಲಿನಲ್ಲಿರುವ (Indian Railway) ಎಲ್ಲಾ ಕೋಚ್‌ಗಳು ಒಂದೇ ರೀತಿ ಇರುವುದಿಲ್ಲ. ಸಾಮಾನ್ಯವಾಗಿ ರೈಲು SL, 1A, 2A, 3A, 25 ಮತ್ತು CC ವರ್ಗದ ಕೋಚ್‌ಗಳನ್ನು ಹೊಂದಿರುತ್ತದೆ. ಆದರೆ ಕೆಲವು ರೈಲುಗಳಲ್ಲಿ Third AC Economy ಕ್ಲಾಸ್ ಬೋಗಿಗಳು ಕೂಡಾ ಇರುತ್ತವೆ. ಈ ಕೋಚ್ ಅನ್ನು ಎಂ ಕೋಡ್ ಎಂದು ಕರೆಯಲಾಗುತ್ತದೆ. ಈ ವರ್ಗದ ಟಿಕೆಟ್ ದರ ಥರ್ಡ್ ಎಸಿಗಿಂತ ಕಡಿಮೆಯಿದ್ದರೂ ಥರ್ಡ್ ಎಸಿಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಇಲ್ಲಿ ಸಿಗುತ್ತವೆ. ಥರ್ಡ್ ಎಸಿಯ ಎಕಾನಮಿ ಕ್ಲಾಸ್ ಅನ್ನು ರೈಲ್ವೇ 2021 ರಲ್ಲಿ ಪ್ರಾರಂಭಿಸಿತು.

ಆದ್ರೆ 3E ಕೋಚ್ ಅನ್ನು ಇನ್ನೂ ಎಲ್ಲಾ ರೈಲುಗಳಲ್ಲಿ ಅಳವಡಿಸಲಾಗಿಲ್ಲ.ಆದರೆ ನೀವು ರೈಲಿನ ಟಿಕೆಟ್ ಬುಕ್ ಮಾಡುವಾಗ ನೀವು ಪ್ರಯಾಣ ಬೆಳೆಸುವ ರೈಲಿನಲ್ಲಿ ಈ ಬೋಗಿ ಇದೆಯೇ ಎಂದು ಚೆಕ್ ಮಾಡಿ ಟಿಕೆಟ್ ಬುಕ್ ಮಾಡಿದರೆ ಕಡಿಮೆ ಬೆಲೆಯಲ್ಲಿ ಎಸಿಯಲ್ಲಿ ಪ್ರಯಾಣ ಬೆಳೆಸುವುದು ಸಾಧ್ಯವಾಗುತ್ತದೆ.

3E ಮತ್ತು 3AC ನಡುವಿನ ವ್ಯತ್ಯಾಸವೇನು: ಥರ್ಡ್ ಎಸಿ ಎಕಾನಮಿ ಕೋಚ್‌ನ ಬರ್ತ್ ಅಗಲ ಸ್ವಲ್ಪ ಕಡಿಮೆಯಾಗಿದೆ. ಏಕೆಂದರೆ 3AC ಕೋಚ್‌ನಲ್ಲಿನ ಬರ್ತ್‌ಗಳ ಸಂಖ್ಯೆ 72 ಆದರೆ 3AC ಎಕಾನಮಿ ಬರ್ತ್‌ಗಳ ಸಂಖ್ಯೆ 80 ಕ್ಕಿಂತ ಹೆಚ್ಚು. ಥರ್ಡ್ ಎಸಿ ಎಕಾನಮಿ ಕೋಚ್‌ನಲ್ಲಿ, ಪ್ರಯಾಣಿಕರು ಥರ್ಡ್ ಎಸಿಯಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಾರೆ. ಥರ್ಡ್ ಎಸಿ ಎಕಾನಮಿ ಕೋಚ್‌ನಲ್ಲಿ ಬಾಟಲ್ ಸ್ಟ್ಯಾಂಡ್, ರೀಡಿಂಗ್ ಲೈಟ್ ಮತ್ತು ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆಯೂ ಲಭ್ಯವಿದೆ.

Leave A Reply

Your email address will not be published.