High Court: 10 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿದ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ – ಖಾಯಂ ಗೊಳಿಸಲು ಹೈಕೋರ್ಟ್ ಆದೇಶ !!

High Court: ಹತ್ತಕ್ಕೂ ಅಧಿಕ ವರ್ಷಗಳಿಂದ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿರುವವರ ಸೇವೆಯನ್ನು ಯಾವುದೇ ಕಾರಣಕ್ಕೂ ಖಾಯಂಗೊಳಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ(State Government) ನೀಡಿದ್ದ ಹಿಂಬರಹವನ್ನು ಕರ್ನಾಟಕ ಹೈಕೋರ್ಟ್(High Court) ರದ್ದುಗೊಳಿಸಿ, ಕೂಡಲೇ ಈ ನೌಕರರು ಉದ್ಯೋಗವನ್ನು ಖಾಯಂ ಗೊಳಿಸಬೇಕೆಂದು ಆದೇಶ ನೀಡಿದೆ.

 

ಹೌದು, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಲ್ಲಿ ಮಂಜೂರಾಗದ ಹುದ್ದೆಗಳಿಗೆ 10 ವರ್ಷಕ್ಕೂ ಹೆಚ್ಚು ಕಾಲ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿದವರು ಕಾಯಂ ಸೇವೆಗೆ ಅರ್ಹರು ಎಂದು ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ. ಅಲ್ಲದೆ, ಅರ್ಜಿದಾರರನ್ನು ಮೂರು ತಿಂಗಳಲ್ಲಿ ಸೂಕ್ತ ಹುದ್ದೆಗಳಿಗೆ ನೇಮಕ ಮಾಡಿ ಅದೇಶ ಹೊರಡಿಸಬೇಕು ಎಂದು ಸರಕಾರಕ್ಕೆ ನ್ಯಾಯಪೀಠ ನಿರ್ದೇಶನ ನೀಡಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಡಕೋಳದ ಶಾಂತಲಕ್ಷ್ಮಿ ಮತ್ತು 30ಕ್ಕೂ ಅಧಿಕ ಮಂದಿ ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕ ಸದಸ್ಯ ಪೀಠ ಈ ತೀರ್ಪು ನೀಡಿದೆ. ಶಾಂತಲಕ್ಷ್ಮಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ‘14.06.2010 ಮತ್ತು 15.06.2012ರ ಅನುಮೋದಿತ ಅನುಮೋದನೆಗಳನ್ನು ರದ್ದುಗೊಳಿಸಿ, ಅರ್ಜಿದಾರರು 2002/2005ರ ಯೋಜನೆಗಳ ಅನುಸಾರ ಸಕ್ರಮಗೊಳಿಸಲು ಅರ್ಹರು ಎಂದು ಘೋಷಿಸಿದರು. ಈ ಅರ್ಜಿಗಳಲ್ಲಿನ ಪ್ರತಿವಾದಿಗಳಿಗೆ ಮೂರು [3] ತಿಂಗಳ ಅವಧಿಯಲ್ಲಿ ಈ ನ್ಯಾಯಾಲಯದ ಘೋಷಣೆಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಆದೇಶಗಳನ್ನು ಹೊರಡಿಸಲು ನಿರ್ದೇಶಿಸಲಾಗಿದೆ.

Leave A Reply

Your email address will not be published.