GST on Pepper: ಹಸಿ ಕಾಳುಮೆಣಸು ಹಾಗೂ ಏಲಕ್ಕಿಗೆ ಇಲ್ಲದ ಜಿ.ಎಸ್.ಟಿ ಒಣಗಿದ ಮೇಲೆ ಯಾಕೆ? ಬೆಳೆಗಾರರ ವಿರೋಧ: ಸಂಸದರಿಗೆ ಮನವಿ
GST on Pepper: ಏಲಕ್ಕಿಯನ್ನು ಜೆ.ಎಸ್.ಟಿ (ಸರಕು ಮತ್ತು ಸೇವಾ ತೆರಿಗೆ) ವ್ಯಾಪ್ತಿಗೆ ತರುವಂತೆ ಅಧಿಕಾರಿಗಳು ರೈತರು, ಬೆಳೆಗಾರರನ್ನು ಒತ್ತಾಯಪಡಿಸುತ್ತಿದ್ದು, ಈ ವಿಚಾರಕ್ಕೆ ಕೊಡಗು ಪ್ಲಾಂಟರ್ಸ್ ಕ್ಲಬ್(CPA) ವಿರೋಧ ವ್ಯಕ್ತಪಡಿಸಿದೆ. ಇದರಂತೆ ಸಿಪಿಎ ಪದಾಧಿಕಾರಿಗಳ ನಿಯೋಗ ಕೊಡಗು ಮೈಸೂರು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಅವರ ಹುಟ್ಟೂರಾದ ಕಲ್ಲಹಳ್ಳಿಯಲ್ಲಿ ಭೇಟಿ ಮಾಡಿ ಈ ವಿಷಯದಲ್ಲಿ ಮಧ್ಯಸವೇಶಿಸಿ ಇದನ್ನು ತಡೆಯುವಂತೆ ಮಾಡಲು ಒಡೆಯರ್ ಅವರನ್ನು ಕೋರಿ ಮನವಿ ಸಲ್ಲಿಸಿದ್ದಾರೆ.
ಸಿಪಿಎ ಅಧ್ಯಕ್ಷ ನಂದಾ ಬೆಳ್ಳಪ್ಪ, ಉಪಾಧ್ಯಕ್ಷ ಎ.ಎ. ಚಿಂಗಪ್ಪ, ಬೆಳ್ಳಪ್ಪ ಕಾರ್ಯಪ್ಪ, ಕಾರ್ಯದರ್ಶಿ ಸಿ.ಕೆ. ಬೆಳ್ಳಿಯಪ್ಪ ಅವರುಗಳು ಮೈಸೂರು ಕ್ಷೇತ್ರದ ಸಂಸದರಿಗೆ ವಿವರವಿತ್ತು ಮನವಿ ಮಾಡಿದ್ದಾರೆ. ಈ ಬಗ್ಗೆ ಸಂಸದರಿಗೆ ವಿವರವಿತ್ತು ಮನವಿ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ನಂದಾ ಬೆಳ್ಯಪ್ಪ ಅವರು ಜಿಎಸ್ ಟಿ ಅಧಿಕಾರಿಗಳು ಜಿಲ್ಲೆಯ ರೈತರು ಮತ್ತು ಬೆಳೆಗಾರರಿಗೆ ಕರಿಮೆಣಸು ಜಿಎಸ್ ಟಿ ವ್ಯಾಪ್ತಿಯಲ್ಲಿ ಬರುತ್ತದೆ. ಅದುದರಿಂದ ತಮ್ಮನ್ನು ಜಿಎಸ್ ಟಿ ಅಡಿಯಲ್ಲಿ ನೊಂದಾಯಿಸಿಕೊಳ್ಳುವಂತೆ ಒತ್ತಾಯಿಸಿ ನೋಟಿಸುಗಳನ್ನು ನೀಡುತ್ತಿದ್ದಾರೆ.
ಹಸಿ ಕಾಳುಮೆಣಸು ಜಿಎಸ್ ಟಿ ವ್ಯಾಪ್ತಿಗೆ ಬರುವುದಿಲ್ಲವಂತೆ. ಆದರೆ ಅದನ್ನು ಒಣಗಿಸಿ ಅದನ್ನು ಕರಿಮೆಣಸಿಗೆ ಪರಿವರ್ತಿಸಿದರೆ ಅದಕ್ಕೆ ಬಿ.ಎಸ್.ಟಿ ಬೀಳುತ್ತಂತೆ. ಇದು ಯಾವ ರೀತಿಯ ವಾದ. ವಿಷಯವೇನೆಂದರೆ ಕೃಷಿಕರು ಕಾಳು ಮೆಣಸನ್ನು ಒಣಗಿಸುವ ಪ್ರಕ್ರಿಯೆಯು ಉತ್ಪನ್ನದ ಗುಣಲಕ್ಷಣಗಳು ಬದಲಾಗುವುದಿಲ್ಲ. ಇದು ಶೇಖರಿಸುವ ಕ್ರಮ ಅಷ್ಟೆ. ಹಾಗಂಥ ಈ ಪ್ರಕ್ರಿಯೆಯಿಂದ ಕಾಳುಮೆಣಸು ಹಾಗೂ ಏಲಕ್ಕಿ ಮೇಲೆ ತೆರಿಗೆ ಬೀಳುವಂತಾಗಬಾರದು.
ಈ ವಿಧಾನವು ಜಿಎಸ್ ಟಿ ಕಾಯಿದೆಯಿಂದ ಬೆಂಬಲಿತವಾಗಿದೆ. ಜಿಎಸ್ ಟಿ(CGST) ಕಾಯಿದೆ 2017ರ ಸೆಕ್ಷನ್ 2(7)ರ ಅಡಿಯಲ್ಲಿನ ವ್ಯಕ್ತಿಗಳು ಅಥವಾ ಹಿಂದೂ ಅವಿಭಜಿತ ಕುಟುಂಬಗಳು ತಮ್ಮ ದುಡಿಮೆಯಿಂದ ಅಥವಾ ಕುಟುಂಬ ಸದಸ್ಯರು ಅಥವಾ ಕೂಲಿ ಕಾರ್ಮಿಕರ ಸಹಾಯದಿಂದ ಭೂಮಿಯ ಸಾಗುವಳಿಯಲ್ಲಿ ತೊಡಗಿರುವವರಿಗೆ ಜಿಎಸ್ ಟಿ ಯಿಂದ ಸ್ಪಷ್ಟ ವಿನಾಯಿತಿ ನೀಡುತ್ತದೆ. ಭತ್ತ ಮತ್ತು ಕೆಂಪು ಮೆಣಸಿನಕಾಯಿ ಯಂತ ಬೆಳೆಗಳಿಗೆ ಜಿಎಸ್ ಟಿಯಿಂದ ವಿನಾಯಿತಿ ನೀಡಿ ಕರಿಮೆಣಸು ಮತ್ತು ಏಲಕ್ಕಿ ಬೆಳೆಗಳನ್ನು ಜಿ.ಎಸ್.ಟಿ ಅಡಿಯಲ್ಲಿ ತಂದಿರುವುದು ಅಸಮಂಜಸವಾಗಿದೆ. ಏಕೆಂದರೆ ಈ ಎಲ್ಲಾ ಬೆಳೆಗಳೂ ಕೊಯ್ಲು ಮಾಡಿ ಒಣಗಿಸಿದ ನಂತರವೇ ಉಪಯೋಗಿಸಲು ಅಥವಾ ಮಾರುಕಟ್ಟೆ ಪ್ರವೇಶಿಸಲು ಯೋಗ್ಯವಾಗಿರುತ್ತವೆ ಎಂದಿದ್ದಾರೆ.
ಕೇಂದ್ರ ಹಣಕಾಸು ಸಚಿವರು ಮತ್ತು ಹಣಕಾಸು ಕಾರ್ಯಾಲಯದ ಮುಖ್ಯ ಕಾರ್ಯದರ್ಶಿಗಳಿಗೂ ಮನವಿ ಪತ್ರವನ್ನು ಸಂಸದರ ಮೂಲಕ ಸಲ್ಲಿಸಲಾಯಿತು. ಸಂಸದರು ಕೇಂದ್ರ ಹಣಕಾಸು ಸಚಿವಾಲಯದೊಂದಿಗೆ ಈ ವಿಷಯವನ್ನು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ವಂತೆ ಒತ್ತಾಯಿಸುವುದಾಗಿ ಭರವಸೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
startup talky Pretty! This has been a really wonderful post. Many thanks for providing these details.