Britain: ಬ್ರಿಟನ್ ಪುರುಷರ ವೀರ್ಯಕ್ಕೆ ಹೆಚ್ಚಿದ ಭಾರೀ ಡಿಮ್ಯಾಂಡ್, ಕೊಳ್ಳಲು ಮುಗಿಬಿದ್ದ ವಿಶ್ವದ ಜನತೆ – ಏನಿದೆ ಅವರಲ್ಲಿ ಅಂತಹ ವಿಶೇಷತೆ ?!
Britain ದೇಶದ ಪುರುಷರ ವೀರ್ಯಕ್ಕೆ(Sperm) ಇದೀಗ ವಿಶ್ವದೆಲ್ಲೆಡೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಯೂರೋಪ್ ಖಂಡ, ಅದರಾಚೆಗೂ ಬ್ರಿಟನ್ ವೀರ್ಯವೇ ವೈದ್ಯಕೀಯ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ. ಜನರು ಮುಗಿಬಿದ್ದು ಪಡೆಯುತ್ತಿದ್ದಾರೆ.
ಹೌದು, ಇದೀಗ ಬ್ರಿಟನ್ ವಿಶ್ವದ ಅತೀ ದೊಡ್ಡ ವೀರ್ಯ ರಫ್ತು(Sperm Export) ದೇಶವಾಗಿ ಹೊರಹೊಮ್ಮಿದೆ. ಇದರಿಂದ ವಿಶ್ವದೆಲ್ಲೆಡೆ ಈ ವೀರ್ಯಗಳಿಂದ ಹುಟ್ಟುವ ಮಕ್ಕಳ ಮೂಲ ಇದೀಗ ಬ್ರಿಟನ್ ದೇಶವಾಗುತ್ತಿದೆ. ಹಾಗಿದ್ದರೆ ಬ್ರಿಟನ್ ವ್ಯಕ್ತಿಗಳ ವೀರ್ಯಕ್ಕೆ ಯಾಕಿಷ್ಟು ಡಿಮ್ಯಾಂಡ್? ಇದ್ದಕ್ಕಿದ್ದಂತೆ ಬೇಡಿಕೆ ಹೆಚ್ಚಲು ಏನು ಕಾರಣ?
ಬ್ರಿಟನ್ ಜನರ ವೀರ್ಯಕ್ಕೆ ಡಿಮ್ಯಾಂಡ್ ಯಾಕೆ?
ದಿ ಗಾರ್ಡಿಯನ್ ಪ್ರಕಾರ, ಯು.ಕೆ. ಫಲವತ್ತತೆ ಚಿಕಿತ್ಸಾಲಯಗಳಲ್ಲಿ 10 ಕ್ಕಿಂತ ಹೆಚ್ಚು ಕುಟುಂಬಗಳನ್ನು ರಚಿಸಲು ಒಬ್ಬ ದಾನಿಯನ್ನು ಬಳಸಬಹುದು, ದೇಶದಿಂದ ವೀರ್ಯ ಅಥವಾ ಅಂಡಾಣುಗಳನ್ನು ವಿದೇಶಕ್ಕೆ ಕಳುಹಿಸಲು ಯಾವುದೇ ನಿರ್ಬಂಧವಿಲ್ಲ. ಈ ಕಾನೂನು ಲೋಪದೋಷವನ್ನು ಉದ್ಯಮ ಮಟ್ಟದ ಅಭ್ಯಾಸದಲ್ಲಿ ಬಳಸಿಕೊಳ್ಳಲಾಗುತ್ತಿದೆ.
ಅಲ್ಲದೆ ಬ್ರಿಟನ್ ದೇಶದಲ್ಲಿ ವೀರ್ಯ ದಾನ, ವೀರ್ಯ ನೀಡುವಿಕೆಯಲ್ಲಿ ಕೆಲ ನಿಯಮಗಳಿವೆ. ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಈ ನಿಯಮದ ಪ್ರಕಾರ ಬ್ರಿಟನ್ನಲ್ಲಿ ಒಬ್ಬ ವ್ಯಕ್ತಿ 10ಕ್ಕಿಂತ ಹೆಚ್ಟು ಕುಟುಂಬಕ್ಕೆ ವೀರ್ಯ ನೀಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ ಕೂಡ ವಿಧಿಸಲಾಗುತ್ತದೆ. ದುಬಾರಿ ದಂಡವನ್ನು ಹಾಕಲಾಗುತ್ತದೆ. ಆದರೆ ಬ್ರಿಟನ್ ಪುರುಷರು ಬ್ರಿಟನ್ ದೇಶದೊಳಗೆ 10 ಕುಟುಂಬಕ್ಕೆ ಮಾತ್ರ ನೀಡುತ್ತಿದ್ದಾರೆ. ಆದರೆ ವಿದೇಶ ರಫ್ತಿನಲ್ಲಿ ಈ ನಿಯಮ ಅನ್ವಯವಾಗುತ್ತಿಲ್ಲ. ಹೀಗಾಗಿ ಬ್ರಿಟನ್ ಪುರುಷರು ಯಥೇಚ್ಚವಾಗಿ ವೀರ್ಯ ರಫ್ತು ಮಾಡುತ್ತಿದ್ದಾರೆ.
ಹೀಗಾಗಿ ಬ್ರಿಟನ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀರ್ಯ ದಾನ ಮಾಡುತ್ತಿದ್ದು, ಇದರಿಂದ ಬ್ರಿಟನ್ ವೀರ್ಯ ರಫ್ತಿನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಹಲವರು ಈ ರೀತಿ ಡಜನ್ಗಟ್ಟಲೇ ಕುಟುಂಬಕ್ಕೆ ವೀರ್ಯ ನೀಡಿದ್ದಾರೆ. ಒಟ್ಟಿನಲ್ಲಿ ಬ್ರಿಟನ್ ವೀರ್ಯ ನಿಯಮದಲ್ಲಿನ ಕೆಲ ಲೋಪದೋಷಗಳನ್ನೇ ಬಂಡವಾಳ ಮಾಡಿಕೊಂಡಿರುವ ಹಲವರು ವೀರ್ಯವನ್ನು ಸುಲಭವಾಗಿ ನೀಡುತ್ತಿದ್ದಾರೆ. ಇದರ ಪರಿಣಾಮ ಬ್ರಿಟನ್ ಅತೀ ದೊಡ್ಡ ವೀರ್ಯ ರಫ್ತು ಮಾಡುತ್ತಿರುವ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ
ಇನ್ನು ನಿಯಮದಲ್ಲಿನ ಲೋಪದೋಷ ಬಳಸಿಕೊಂಡು ವೀರ್ಯ ರಫ್ತು ಮಾಡುತ್ತಿರುವವರ ಸಂಖ್ಯೆ ದುಪ್ಪಟ್ಟಾಗುತ್ತಿರುವ ಬೆನ್ನಲ್ಲೇ ಬ್ರಿಟನ್ ಮಾನ ಫಲೀಕರಣ ಹಾಗೂ ಭ್ರೂಣಶಾಸ್ತ್ರ ಪ್ರಾಧಿಕಾರ(HFEA) ಎಚ್ಚೆತ್ತುಕೊಂಡಿದೆ. ವಿದೇಶಗಳಿಗೆ ವೀರ್ಯ ರಫ್ತುವಿನಲ್ಲೂ ನಿಯಂತ್ರಣ ಹೇರಲಾಗುತ್ತಿದೆ.