Anna Bhagya: ಇನ್ಮುಂದೆ ಜನರಿಗೆ ಸಿಗೋಲ್ಲ ‘ಅನ್ನಭಾಗ್ಯ’ದ ಅಕ್ಕಿ ದುಡ್ಡು – ಆದ್ರೆ ಈ ಬೆನ್ನಲ್ಲೇ ಫಲಾನುಭವಿಗಳಿಗೆ ಕಾದಿದೆ ಭರ್ಜರಿ ಗುಡ್ ನ್ಯೂಸ್ !!
Anna Bhagya: ಕರ್ನಾಟಕ ಸರ್ಕಾರ ‘ಅನ್ನಭಾಗ್ಯ’(Anna Bhagya) ಯೋಜನೆಯಡಿ ಫಲಾನುಭವಿಗಳಿಗೆ ಸದ್ಯ 5 ಕೆಜಿ ಅಕ್ಕಿ ಬದಲಿಗೆ ಹಣ ವರ್ಗಾವಣೆ ನೀಡುತ್ತಿದ್ದು, ಇನ್ನು ಮುಂದೆ ಇದನ್ನು ಸರ್ಕಾರ ನಿಲ್ಲಿಸಲಿದೆ. ಅಕ್ಕಿ ಹಣ ನಿಲ್ಲುತ್ತೆ ಎಂದು ಚಿಂತಿಸಬೇಡಿ. ಇದರ ಬದಲಿಗೆ ಹೊಸ ಗುಡ್ ನ್ಯೂಸ್ ಕೂಡ ಇದೆ.
ಕಾಂಗ್ರೆಸ್ ಸರ್ಕಾರ(Congress Government) ಅಧಿಕಾರಕ್ಕೆ ಬಂದಾಗ ಪ್ರತಿ ಫಲಾನುಭವಿಗೆ ತಿಂಗಳಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದರೂ, ಕೇವಲ 5 ಕೆಜಿ ಅಕ್ಕಿಯನ್ನು ಮಾತ್ರ ಪೂರೈಸಲು ಸಾಧ್ಯವಾಗಿದ್ದು, ಉಳಿದ 5 ಕೆಜಿ ಬದಲಿಗೆ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುತ್ತಿದೆ. ಆದರೆ ಇನ್ನು ಮುಂದೆ ಆ ಅಕ್ಕಿ ಹಣ ಜನರಿಗೆ ಸಿಗುವುದಿಲ್ಲ ಬದಲಿಗೆ ಅಕ್ಕಿಯೇ ಸಿಗುತ್ತದೆ. ಹೌದು, ಕಾಂಗ್ರೆಸ್ ಸರ್ಕಾರ ತಾನು ನುಡಿದಂತೆ ಇನ್ಮುಂದೆ ಜನರಿಗೆ ಪ್ರತೀ ತಿಂಗಳು 10 ಕೆ ಜಿ ಅಕ್ಕಿಯನ್ನೇ ಪೂರೈಸುತ್ತದೆ.
ಯಸ್, ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕಾರ್ಡುದಾರರಿಗೆ ರಾಜ್ಯ ಸರ್ಕಾರ ರೂಪಿಸಿರುವ ಅನ್ನಭಾಗ್ಯ ಯೋಜನೆಗೆ 2.36 ಲಕ್ಷ ಟನ್ ಅಕ್ಕಿಯನ್ನು ಪೂರೈಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಯೋಜನೆಯಡಿ ರಾಜ್ಯ ಸರ್ಕಾರದ ನೀಡುತ್ತಿದ್ದ 5 ಕೆಜಿ ಅಕ್ಕಿ ಹಣ ಇನ್ನು ಮುಂದೆ ಫಲಾನುಭವಿಗಳಿಗೆ ಸಿಗುವುದು ಬಹುತೇಕ ಬಂದ್ ಆಗಲಿದೆ. ಹಣದ ಬದಲು ಅಕ್ಕಿಯನ್ನೇ ನೀಡಲು ಸರ್ಕಾರ ಮುಂದಾಗುತ್ತಿದೆ.
ಅಂದಹಾಗೆ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಬೇಕೆಂಬ ರಾಜ್ಯ ಸರ್ಕಾರದ ಮನವಿಯನ್ನು ಕಳೆದ ವರ್ಷ ಕೇಂದ್ರ ತಿರಸ್ಕರಿಸಿತ್ತು. ಇದು ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಬದಲು ಅದರ ಹಣವನ್ನು ಸರ್ಕಾರ ಫಲಾನುಭವಿಗಳಿಗೆ ನೀಡುತ್ತಿದೆ. ಆದರೀಗ ಕೇಂದ್ರ ಅಕ್ಕಿ ನೀಡಲು ಒಪ್ಪಿದ ಬಳಿಕ ರಾಜ್ಯ ಸರ್ಕಾರ ಹಣ ನಿಲ್ಲಿಸಿ ಅಕ್ಕಿಯನ್ನೇ ನೀಡಲು ಮುಂದಾಗಿದೆ.