Relationship Tips: ಮದುವೆಯಾದ ಪುರುಷರು ಪರ ಸ್ತ್ರೀ ಮೇಲೆ ಆಕರ್ಷಿತರಾಗೋದು ಇದೇ ಕಾರಣಕ್ಕೆ: ಚಾಣಕ್ಯ ನೀತಿ

Relationship Tips: ಗಂಡ ಹೆಂಡತಿ ಸಂಬಂಧ ಎಂದರೆ ಅದು ಪವಿತ್ರವಾದ ಸಂಬಂಧ (Relationship Tips) ಆಗಿರಬೇಕು. ಆದ್ರೆ ಕೆಲವೊಮ್ಮೆ ಪುರುಷರು ಮದುವೆಯಾಗಿದ್ರು ಬೇರೊಬ್ಬ ಮಹಿಳೆಯ ಸಹವಾಸವನ್ನು ಬಯಸುತ್ತಾರೆ. ಇದರಿಂದ ಮದುವೆಯಾದ ಹೆಣ್ಣಿನ ಬದುಕು ಹಾಳಾಗುತ್ತದೆ. ಕೆಲವೊಮ್ಮೆ ಈ ಅನೈತಿಕ ಸಂಬಂಧಕ್ಕೆ ಪತ್ನಿಯೇ ಪರೋಕ್ಷವಾಗಿ ಕಾರಣ ಆಗುತ್ತಾಳೆ. ಹೌದು, ಪುರುಷನ ಮನಸ್ಸು ಬೇರೆ ಹೆಣ್ಣಿನತ್ತ ವಾಲದೆ ಇರಲು ಚಾಣಕ್ಯನು ಈ ಕೆಲವು ಕಾರಣಗಳನ್ನು ನೀಡಿದ್ದಾನೆ.

 

ಮದುವೆಯ ವಯಸ್ಸು :

ಮುಖ್ಯವಾಗಿ ಸಣ್ಣ ವಯಸ್ಸಿನಲ್ಲಿ ಮದುವೆಯಾಗಿ ವೃತ್ತಿ ಜೀವನದ ಕಡೆಗೆ ಗಮನ ಹರಿಸುವ ವ್ಯಕ್ತಿಯು ತನ್ನ ವೈಯುಕ್ತಿಕ ಆಸೆಗಳಿಗೆ ಗಮನ ಹರಿಸುವುದಿಲ್ಲ. ನಂತರ ಗಂಡು ತನ್ನ ಆಸೆ ಆಕಾಂಕ್ಷೆಯಂತೆ ಪರ ಸ್ತ್ರೀ ಮೇಲೆ ಆಕರ್ಷಿತರಾಗುತ್ತಾರೆ ಎನ್ನುತ್ತಾನೆ ಚಾಣಕ್ಯ.

ದೈಹಿಕ ತೃಪ್ತಿ ಇಲ್ಲದಿರುವುದು :  ಜೀವನದಲ್ಲಿ ಪ್ರತಿಯೊಬ್ಬರು ವಿವಾಹವಾದ ಬಳಿಕ ಲೈಂಗಿಕ ಸುಖ ಬಯಸುವರು. ಅದರಲ್ಲೂ ದಂಪತಿಗಳಲ್ಲಿ ಪ್ರೀತಿ, ಉತ್ಸಾಹ ಮತ್ತು ಕಡುಬಯಕೆಗಳನ್ನು ವ್ಯಕ್ತಪಡಿಸಲು ಸಹಾಯ ಮಾಡುವ ಅತ್ಯಂತ ನೈಸರ್ಗಿಕ ಮಾನವ ಪ್ರಚೋದನೆಯೇ ಲೈಂಗಿಕತೆ. ಕೆಲವೊಮ್ಮೆ ಪತ್ನಿಯಿಂದ ದೈಹಿಕ ತೃಪ್ತಿಯೂ ಇಲ್ಲದಿದ್ದಾಗ ಸಹಜವಾಗಿ ಗಂಡು ಬೇರೊಬ್ಬ ಹೆಣ್ಣಿನ ಸಹವಾಸ ಬಯಸುತ್ತಾನೆ.

ನಂಬಿಕೆಯ ಕೊರತೆ :

ಒಂದು ವೇಳೆ ಪತ್ನಿಯಾದವಳು ಪತಿಯ ನಡವಳಿಕೆಯ ಬಗ್ಗೆ ಹೆಜ್ಜೆ ಹೆಜ್ಜೆಗೂ ಸಂಶಯ ಪಡುತ್ತಿದ್ದರೆ, ನಿಂದನೆ ಮಾಡುತ್ತಿದ್ದರೆ ಇದರಿಂದ ನೊಂದು ಅನೈತಿಕ ಸಂಬಂಧವನ್ನು ಪುರುಷನು ಬಯಸುತ್ತಾನೆ.

ಪೋಷಕರಾಗುವುದು :

ಮಗು ಹುಟ್ಟಿದ ಬಳಿಕ ಪುರುಷರು ತಮ್ಮ ಹೆಂಡತಿಯಿಂದ ದೂರವಾಗುತ್ತಾರೆ. ಹೆಂಡತಿಯು ಪತಿಗಿಂತ ಹೆಚ್ಚು ಮಗುವಿಗೆ ಆದ್ಯತೆಯನ್ನು ನೀಡಲು ಪ್ರಾರಂಭಿಸುವುದೇ ಇದಕ್ಕೆ ಕಾರಣ ಎಂದು ಚಾಣಕ್ಯನು ಹೇಳುತ್ತಾನೆ.

ಅಸಮಾಧಾನಗೊಳ್ಳುವುದು :

ಪುರುಷರು ತನ್ನ ಸಂಗಾತಿಯಲ್ಲಿ ಯಾವುದರ ಕೊರತೆ ಇದೆಯೋ ಅದರ ಬಗ್ಗೆ ಅಸಮಾಧಾನ ಹೊಂದಿರುತ್ತಾರೆ. ಪತ್ನಿಯಲ್ಲಿ ಕಷ್ಟಗಳನ್ನು ಕಾಣುವುದಿಲ್ಲ. ಚಾಣಕ್ಯ ಹೇಳುವಂತೆ ಈ ಅಸಮಾಧಾನವೇ ಪುರುಷರು ಬೇರೆ ಮಹಿಳೆಯರ ಪ್ರೀತಿಗೆ ಬೀಳಲು ಕಾರಣವಾಗುತ್ತದೆಯಂತೆ.

Leave A Reply

Your email address will not be published.