Puttur: ಬಜರಂಗದಳ ಮುಖಂಡ ನೇಣುಬಿಗಿದು ಆತ್ಮಹತ್ಯೆ!

Puttur: ಬಜರಂಗದಳದಲ್ಲಿ ಸಕ್ರಿಯನಾಗಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದಿದೆ.

 

ಮೂಲತಃ ಪುತ್ತೂರು (Puttur) ತಾಲೂಕು ಕೆಯ್ಯೂರು ಗ್ರಾಮದ ಉದ್ದಳೆ ನಿವಾಸಿ ಸಚಿನ್‌ ಕೆಯ್ಯೂರು ಈತನು ಕೊಯ್ಯೂರು ಘಟಕದ ಸುರಕ್ಷಾ ಪ್ರಮುಖ್‌ ಆಗಿ ಜವಾಬ್ದಾರಿ ನಿಭಾಯಿಸುತ್ತಿದ್ದರು.

ಬಿಸಿಎ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದ ಸಚಿನ್ ಉದ್ಯೋಗದ ಹುಡುಕುತ್ತಿದ್ದರು. ಗ್ರಾಮದ ಪಂಚಾಯತ್ ಸಮೀಪ ಗೇರು ಮರವೊಂದಕ್ಕೆ ಕೇಸರಿ ಶಾಲು ಬಿಗಿದು ನೇಣಿಗೆ ಶರಣಾಗಿದ್ದಾರೆ. ಸಂಪ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು, ಅತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

1 Comment
  1. MichaelLiemo says

    ventolin us price: buy Ventolin – ventolin 4mg price
    ventolin prescription discount

Leave A Reply

Your email address will not be published.