PM Modi: ಮೊದಲೆರಡು ಅವಧಿಯಂತೆ ಈಗ ಮೋದಿಗೆ ಅಧಿಕಾರ ನಡೆಸಲಾಗುತ್ತಿಲ್ಲ – ಈ ನಾಲ್ಕು ಘಟನೆಗಳೇ ಅದಕ್ಕೆ ಸಾಕ್ಷಿ ನೋಡಿ!!
PM Modi: ಪ್ರಧಾನಿ ನರೇಂದ್ರ ಮೋದಿ(PM Modi) 3ನೇ ಅವಧಿಗೆ ಪ್ರಧಾನಿ ಆಗಿ ಹ್ಯಾಟ್ರಿಕ್ ಭಾರಿಸಿದ್ದಾರೆ. ಆದರೆ ಈ ಸಲ ಅಧಿಕಾರ ನಡೆಸುವುದು ಅಷ್ಟು ಸುಲಭವಲ್ಲ. ಯಾಕೆಂದು ನಿಮಗೆ ಗೊತ್ತೇ ಇದೆ. ಹೀಗಾಗಿ ಸರ್ಕಾರ ಐದು ವರ್ಷ ಪೂರ್ತಿ ಮಾಡುತ್ತದೆ ಎಂಬ ನಂಬಿಕೆಯೂ ಇಲ್ಲ. ಯಾಕೆಂದರೆ ಮಿತ್ರ ಪಕ್ಷಗಳ ನಾಯಕರು ಯಾವಾಗ ಬೇಕಾದರೂ ಆಟ ಶುರು ಮಾಡಬಹುದು. ಇದರೊಂದಿಗೆ ಯಾವ ನಿರ್ಧಾರವನ್ನೂ ಮೋದಿ ಆಗಲಿ ಬಿಜೆಪಿ ಆಗಲಿ ಒಮ್ಮತದಿಂದ ಕೈಗೊಳ್ಳಲಾಗದು. ಎಲ್ಲದಕ್ಕೂ ಸಮ್ಮಿಶ್ರ ಸರಕಾರ ಅಡ್ಡಿ ಬರುತ್ತದೆ.
ಈ ಹಿಂದೆ ಎರಡು ಬಾರಿಯೂ ಬಿಜೆಪಿ(BJP)ಗೇ ಬಹುಮತವಿತ್ತು. ಹೀಗಾಗಿ ಮೋದಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಆದರೀಗ ಮೊದಲೆರಡು ಅವಧಿಗಳಲ್ಲಿ ಅಧಿಕಾರ ನಡೆಸಿದಂತೆ ಈ ಸಲದ ಅವಧಿಯಲ್ಲಿ ಅಂದರೆ 3ನೇ ಅವಧಿಗೆ ಮೋದಿಗೆ ಸರಿಯಾಗಿ ಆಡಳಿತ, ಅಧಿಕಾರ ನಡೆಸಲು ಆಗುತ್ತಿಲ್ಲ. ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದಾಗ ಎಲ್ಲಾ ವಿಚಾರಕ್ಕೂ ಅವರ ಅಭಿಪ್ರಾಯಗಳೂ ಮುಖ್ಯವಾಗುತ್ತದೆ. ಇದಕ್ಕೆ ನಾವು ಹೇಳುತ್ತಿರುವ ಈ 4 ಘಟನೆಗಳು ಸಾಕ್ಷಿ ಎನ್ನಬಹುದು. ಈ ಒಂದೇ ತಿಂಗಳಲ್ಲಿ ನಾಲ್ಕು ಬಾರಿ ಮಸೂದೆ, ನಿಯಮಗಳನ್ನು ಕೇಂದ್ರ ಸರ್ಕಾರ ಹಿಂದೆ ಪಡೆದಿದೆ. ಅವು ಈ ಕೆಳಗಿನಂತಿವೆ.
1. ಲ್ಯಾಟರ್ ಎಂಟ್ರಿ ಹಿಂಪಡೆತ : ಲ್ಯಾಟರಲ್ ಎಂಟ್ರಿ ನಿಯಮ ಹಿಂದೆ ಪಡೆದಿದ್ದು ಪ್ರಮುಖ ಉದಾಹರಣೆ. ಸರ್ಕಾರದ ಹಿರಿಯ ಹುದ್ದೆಗಳಿಗೆ ಐಎಎಸ್ ಹುದ್ದೆಯ ಅಧಿಕಾರಿಗಳ ಹೊರತಾಗಿ ಆಯಾ ಕ್ಷೇತ್ರಗಳಲ್ಲಿ ನುರಿತರಾಗಿರುವವರಿಗೆ ನೇರವಾಗಿ ನೇಮಕವಾಗಲು ಅವಕಾಶವಾಗುವಂತಹ ಲ್ಯಾಟರಲ್ ಎಂಟ್ರಿ ನಿಯಮ ಹೊರತರಲು ಕೇಂದ್ರ ಮುಂದಾಗಿತ್ತು. ಆದರೆ ಇದೀಗ ಪ್ರತಿಪಕ್ಷಗಳ ಜೊತೆಗೆ ಕೆಲವು ಮಿತ್ರ ಪಕ್ಷಗಳಿಂದಲೂ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಅದನ್ನು ಹಿಂಪಡೆಯಲಾಯಿತು.
2. ವಕ್ಫ್ ಮಸೂದೆ ತಿದ್ದುಪಡಿ : ವಕ್ಫ್ ಬೋರ್ಡ್ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಅದನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ನಿರ್ಧರಿಸಿತು. ಇದಕ್ಕೆ ಮೊದಲು ಇಂಡಕ್ಸೇಷನ್ ಪ್ರಯೋಜನ ವಾಪಸ್ ಪಡೆದಿತ್ತು
3. ಜುಲೈ 23 ರ ಮೊದಲು ಆಸ್ತಿ ಖರೀದಿಸಿದ ಮಾರಾಟದ ಮೇಲೆ ಸೂಚ್ಯಂಕ ಪ್ರಯೋಜನದೊಂದಿಗೆ ಶೇ.20 ಎಲ್ ಟಿಜಿಸಿ ತೆರಿಗೆ ಪಾವತಿಸುವ ಆಯ್ಕೆಯನ್ನು ತೆರಿಗೆದಾರರಿಗೆ ನೀಡಲು ನಿರ್ಧರಿಸುವ ಮೂಲಕ ಹಿಂದೆ ಸರಿಯಿತು.
4 ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮದ ಮೇಲಿನ ನಿರ್ಬಂಧ ಕುರಿತು ಕಳವಳ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಪ್ರಸಾರ ಮಸೂದೆಯ ತರಲು ಉದ್ದೇಶಿಸಲಾಗಿತ್ತು. ಆದರೆ ಟೀಕೆಗಳು ಬಂದ ಬೆನ್ನಲ್ಲೇ ಹೊಸ ಮಸೂದೆ ತಯಾರಿಸಲು ಸಮಾಲೋಚನೆ ನಡೆಸುವುದಾಗಿ ಹೇಳಿತು.