Kolkata rape and murder case: ಕೊಲ್ಕತ್ತಾ ವೈದ್ಯೆ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಏನೇನಿದೆ?!

Kolkata rape and murder case: ಆಗಸ್ಟ್ 8 ಮತ್ತು 9 ರ ಮಧ್ಯರಾತ್ರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯ ಮುಗಿಸಿ ಮಲಗಿದ್ದ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ (Kolkata rape and murder case) ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ.
ಸಿಬಿಐ ತನಿಖೆಯಿಂದ ನೈಟ್ ಡ್ಯೂಟಿ ಸಮಯದಲ್ಲಿ ಮಹಿಳಾ ವೈದ್ಯೆ ಸೆಮಿನಾರ್ ಹಾಲ್‌ನಲ್ಲಿ ಮಲಗಲು ಕಾರಣವೇನು ಅನ್ನೋದು ಬಹಿರಂಗವಾಗಿದೆ. ಸಿಬಿಐ ಮೂಲಗಳಿಂದ ಹಲವು ಮಾಹಿತಿಗಳು ಹೊರಬರುತ್ತಿದ್ದು, ತನಿಖೆ ವೇಳೆ ಸಿಬಿಐಗೆ ಸಂಭವನೀಯ ಕಾರಣಗಳ ಬಗ್ಗೆ ತಿಳಿದು ಬಂದಿದೆ.
ಕೃತ್ಯ ನಡೆದ ದಿನ ರಾತ್ರಿ ಅನೇಕ ರೋಗಿಗಳು ಸ್ಲೀಪಿಂಗ್ ವಾರ್ಡ್‌ನಲ್ಲಿ ವೀಕ್ಷಣೆಯಲ್ಲಿದ್ದರು. ಅಲ್ಲಿ ರೋಗಿ ಮಲಗುವಾಗ ನಿಗಾದಲ್ಲಿ ಇರಿಸಬೇಕಾಗುತ್ತದೆ. ಆ ವಾರ್ಡಿನಲ್ಲಿ ಸಾಮಾನ್ಯವಾಗಿ ಹೆಚ್ಚು ರೋಗಿಗಳು ಇರದ ಕಾರಣ, ಉಸ್ತುವಾರಿ ವೈದ್ಯರು ಪ್ರತಿ ರಾತ್ರಿ ಮಲಗುತ್ತಾರೆ ಅಥವಾ ವಿಶ್ರಾಂತಿ ಪಡೆಯುತ್ತಾರೆ. ಆದರೆ ಘಟನೆ ನಡೆದ ರಾತ್ರಿ ಆ ವಾರ್ಡ್‌ನಲ್ಲಿ ರೋಗಿಯೊಬ್ಬರು ಇದ್ದ ಕಾರಣ ಯುವ ವೈದ್ಯರು ಸೆಮಿನಾರ್ ಹಾಲ್‌ನಲ್ಲಿ ಮಲಗಿದ್ದರು ಎಂದು ತಿಳಿದು ಬಂದಿದೆ.
ಇದೀಗ ತನಿಖೆಯಲ್ಲಿ ಯುವತಿ ಮೇಲೆ ಅತ್ಯಾಚಾರ ಮಾಡಿ ಬಳಿಕ ಹಲ್ಲೆ ನಡೆಸಿ, ಕೈಗಳಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಇನ್ನು ವಿದ್ಯಾರ್ಥಿನಿಯ ದೇಹದ ಮೇಲೆ 16 ಗಾಯಗಳು ಹಾಗೂ ಆಂತರಿಕವಾಗಿ 9 ಗಾಯಗಳಿವೆ ಎಂಬುದನ್ನು ಮರಣೋತ್ತರ ಪರೀಕ್ಷೆ ಖಚಿತಪಡಿಸಿದೆ. ಅಂದರೆ ಅಲ್ಲದೆ ವಿದ್ಯಾರ್ಥಿನಿಯ ಜನನಾಂಗದಲ್ಲಿ ಬಲವಂತವಾಗಿ ಗಾಯ ಮಾಡಿರುವ ಗುರುತು ಕಂಡು ಬಂದಿದೆ. ಮುಖ್ಯವಾಗಿ ಕೊಲೆ ಹಾಗೂ ಅತ್ಯಾಚಾರದ ಹಿಂದೆ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಇದ್ದಾರೆ. ಅದಕ್ಕೆ ಸಾಕ್ಷಿಯಾಗಿ ಸಂತ್ರಸ್ತೆ ದೇಹದಲ್ಲಿ 150 ಎಂಜಿ ವೀರ್ಯ ಕಂಡು ಬಂದಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ಹೇಳಿದೆ.
ಸದ್ಯ ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ಸುಪ್ರೀಂಕೋರ್ಟ್ ಸಹ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಪಶ್ಚಿಮ ಬಂಗಾಳ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.