Belthangady: ಬೆಳಾಲು ನಿವೃತ್ತ ಶಿಕ್ಷಕ ವೃದ್ಧ ಬಾಲಕೃಷ್ಣ ಭಟ್ ಕೊಲೆ, ಜಾಡು ಬಿಟ್ಟು ಕೊಡದ ಕೊಲೆಗಾರ – ಕಳೆದೇ ಹೋಯ್ತು 24 ಗಂಟೆ !

Belthangady: ಬೆಳ್ತಂಗಡಿ ತಾಲೂಕಿನ ಬೆಳಾಲಿನಲ್ಲಿ (Belalu) ಹಾಡಹಗಲೇ ಮನೆಯ ಅಂಗಳದಲ್ಲಿಯೇ ಶಾಲಾ ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್(83) ರವರನ್ನು ಕೊಲೆ ಮಾಡಲಾದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೋಲಿಸ್ ತಂಡಗಳು ಮತ್ತು ಎಸ್ ಪಿ ಯವರು ಎರಡೆರಡು ಬಾರಿ ಆಗಮಿಸಿದ್ದರು. ಆದರೆ ಸದ್ಯದ ಮಾಹಿತಿಯ ಪ್ರಕಾರ ಈವರೆಗೆ ಕೊಲೆಯ ನಡೆದ ಅಪರಾಧಿಯ ಜಾಡು ಪತ್ತೆಯಾಗಿಲ್ಲ.

 

ಕೊಲೆಯಾದ ಘಟನಾ ಸ್ಥಳಕ್ಕೆ ಇಂದು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ ನೀಡಿ ಮಾಹಿತಿ ಪಡೆದರು. ಮೃತ ಬಾಲಕೃಷ್ಣ ಭಟ್ ಮನೆಗೆ ಆ.21 ರಂದು ಮಧ್ಯಾಹ್ನ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮನೆಯವರಿಂದ ಹಾಗೂ ಪೊಲೀಸರಿಂದ ಮಾಹಿತಿ ಪಡೆದುಕೊಂಡರು. ಬಳಿಕ ತನಿಖಾ ತಂಡದ ಜೊತೆ ಐಜಿಪಿ ಚರ್ಚಿಸಿದರು.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೃತಪಟ್ಟ ಬಾಲಕೃಷ್ಣ ಭಟ್ ಕಿರಿಯ ಮಗ ಸುರೇಶ್ ಭಟ್ ಆ.20 ರಂದು ರಾತ್ರಿ ನೀಡಿದ ದೂರಿನಂತೆ ಬಿ.ಎನ್.ಎಸ್ 103 ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯಪ್ರಸಾದ್ ನೇತೃತ್ವದಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ನಾಗೇಶ್ ಕದ್ರಿ ತಂಡ, ಧರ್ಮಸ್ಥಳ ಇಬ್ಬರು ಸಬ್ ಇನ್ಸಪೆಕ್ಟರ್ ಗಳ ತಂಡ ಹಾಗೂ ಮತ್ತೊಂದು ತಂಡದಿಂದ ವಿವಿಧ ತಂಡಗಳನ್ನು ದ.ಕ.ಎಸ್ಪಿ ಯತೀಶ್.ಎನ್ ಮಾಡಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇದೀಗ ತಾನೇ ಪೋಸ್ಟ್ ಮಾರ್ಟo ಮುಗಿಸಿಕೊಂಡು ಕೊಲೆಯಾದ ಬಾಲಕೃಷ್ಣ ಭಟ್ ಅವರ ಮೃತ ದೇಹ ಬೆಳಾಲಿಗೆ ಆಗಮಿಸಿದೆ. ಅವರ ಆತ್ಮಕ್ಕೆ ಎಲ್ಲಾ ಏರ್ಪಾಡುಗಳು ನಡೆದಿದೆ.

ಆ.20 ರಂದು ದ. ಕ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ (Belthangady) ಬೆಳಾಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಇರುವ ಬಾಲಕೃಷ್ಣ ಭಟ್ ಅವರ ಮನೆಯಲ್ಲಿ ವೃದ್ಧ ಬಾಲಕೃಷ್ಣ ಭಟ್ ಅವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿತ್ತು. ಅಲ್ಲದೆ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದಂತೆ ಮಾಡಿ ಹತ್ಯೆ ನಡೆಸಲಾಗಿತ್ತು. ಗೆಳೆಯನ ಮನೆಗೆ ಮಧ್ಯಾಹ್ನ ಹೋಗಿ ಅಲ್ಲಿಂದ ವಾಪಸ್ ಬಂದಿದ್ದ ಕೆಲವೇ ಗಂಟೆಗಳಲ್ಲಿ ಬಾಲಕೃಷ್ಣ ಭಟ್ ಅವರ ಕೊಲೆ ನಡೆದಿತ್ತು.

ಈ ಕೊಲೆಯಲ್ಲಿ ಪ್ರಮುಖ ವಿಷಯವೇನೆಂದರೆ ಇದೀಗ ಕೊಲೆ ನಡೆದು 24 ಗಂಟೆಗಳೇ ಆಗಿ ಹೋಗಿವೆ. ಇಲ್ಲಿಯತನಕ ತನಿಕೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಈತನಕ ಯಾರನ್ನು ಬಂಧಿಸಲಾಗಿಲ್ಲ. ಯಾರ ಮೇಲೆಯೂ ಅನುಮಾನ ಪಟ್ಟು ತೀವ್ರವಾಗಿ ವಿಚಾರಣೆ ನಡೆಸಲಾಗಿಲ್ಲ ಎನ್ನಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಈ ತನಕ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ. ಒಟ್ಟಾರೆ ಪೊಲೀಸರಿಗೆ ತನಿಖೆ ಕಗ್ಗಂಟಾಗಿ ಪರಿಣಮಿಸಿದೆ. ಯಾಕೆಂದರೆ ಕೊಲೆ ನಡೆದ ಜಾಗದಲ್ಲಿ ಯಾವುದೇ ಕಳ್ಳತನ ಆದ ಹಾಗೆ ಕಾಣಿಸುತ್ತಿಲ್ಲ. ದರೋಡೆ ನಡೆದಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿಲ್ಲ. ಬಾಲಕೃಷ್ಣ ಭಟ್ ಅವರು ಶಿಕ್ಷಕರಾಗಿದ್ದು ಸಾಕಷ್ಟು ಆಸ್ತಿಪಾಸ್ತಿ ಮಾಡಿದ್ದಾರೆ.

ಉಜಿರೆಯಲ್ಲಿ ಕೆಲವು ಸ್ಥಿರಾಸ್ತಿ ಮತ್ತು ಮಡಂತ್ಯಾರ್ ಎಂಬಲ್ಲಿ ಒಂದಷ್ಟು ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿಗಳಿವೆ. ಆರ್ಥಿಕಾಗಿ ಅಥವಾ ಯಾವುದಾದರೂ ಹಳೆಯ ವ್ಯಾಜ್ಯಕ್ಕಾಗಿ ಕೊಲೆ ನಡೆಯುತ್ತಾ ಎನ್ನುವ ಆಯಾಮದಲ್ಲೂ ಕೂಡ ತನಿಖೆ ನಡೆಯುತ್ತಿದೆ. ಸದ್ಯದ ಮಟ್ಟಿಗೆ ಪೊಲೀಸರು ಬ್ಲಾಂಕ್ ಆಗಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಹಚ್ಚುತ್ತೇವೆ ಎಂದು ಎಸ್ ಪಿ ಅವರು ಹೇಳಿದ್ದಾರೆ.

ಕೊಲೆಯಾದ ಬಾಲಕೃಷ್ಣ ಭಟ್

Leave A Reply

Your email address will not be published.