of your HTML document.

Sudha Murthy: ರಕ್ಷಾಬಂಧನ ಮೂಲದ ಬಗ್ಗೆ ವಿವಾದ – ಟೀಕೆ ಬೆನ್ನಲ್ಲೇ ಸ್ಪಷ್ಟೀಕರಣ ನೀಡಿದ ಸುಧಾ ಮೂರ್ತಿ

Sudha Murthy: ನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು(Sudha Murthy) ರಾಖಿ ಹಬ್ಬದ ಹಿನ್ನಲೆ ಬಗ್ಗೆ ಪೋಸ್ಟ್ ಒಂದನ್ನು ಹಾಕಿ ಒಂದು ವಿವಾದವನ್ನು ಹುಟ್ಟುಹಾಕಿದ್ದರು. ಅವರ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತ. ಇದೀಗ ಈ ವಿಚಾರ ಚರ್ಚೆಗೆ ಕಾರಣವಾದ ನಂತರ ಸುಧಾ ಮೂರ್ತಿ ಅವರು ಸ್ಪಷ್ಟೀಕರಣವನ್ನು ನೀಡಿದ್ದಾರೆ.

ಹೌದು, ಇನ್ಫೋಸಿಸ್‌ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ (Sudha Murty) ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಚರ್ಚೆ ಹುಟ್ಟುಹಾಕಿತ್ತು. ರಕ್ಷಾ ಬಂಧನಕ್ಕೆ ಶ್ರೀಮಂತ ಇತಿಹಾಸವಿದೆ. ರಾಣಿ ಕರ್ಣಾವತಿ ಆಪತ್ತಿನಲ್ಲಿದ್ದಾಗ, ರಾಜ ಹುಮಾಯೂನ್‌ಗೆ ಒಡಹುಟ್ಟಿದವರ ಸಂಕೇತವಾಗಿ ಒಂದು ದಾರವನ್ನು ಕಳುಹಿಸಿ, ಅವನ ಸಹಾಯವನ್ನು ಕೇಳಿದಳು. ಇಲ್ಲಿಂದ ದಾರದ ಸಂಪ್ರದಾಯ ಪ್ರಾರಂಭವಾಯಿತು. ಅದು ಇಂದಿಗೂ ಮುಂದುವರೆದಿದೆ ಎಂದು ರಾಖಿ ಹಬ್ಬದ ಇತಿಹಾಸವಿದು ಎಂದು ಸುಧಾಮೂರ್ತಿ ಅವರು ಎಕ್ಸ್‌ನಲ್ಲಿ ವೀಡಿಯೋ ಮಾಡಿ ಪೋಸ್ಟ್‌ ಹಾಕಿದ್ದರು.

ಇದನ್ನು ವಿವರಿಸಿದ ಅವರು ‘ರಾಣಿ ಕರ್ಣಾವತಿ (ಮೇವಾರ್ ಸಾಮ್ರಾಜ್ಯದಿಂದ) ಅಪಾಯದಲ್ಲಿದ್ದಾಗ, ಆಕೆಯ ರಾಜ್ಯವು ಚಿಕ್ಕದಾಗಿತ್ತು ಮತ್ತು ಆಕ್ರಮಣಕ್ಕೆ ಒಳಗಾಗಿತ್ತು. ಅವಳಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಅವಳು ಮೊಘಲ್ ಚಕ್ರವರ್ತಿ ಹುಮಾಯೂನ್‌ಗೆ ಒಂದು ಸಣ್ಣ ದಾರವನ್ನು ಕಳುಹಿಸಿದಳು. ನಾನು ಅಪಾಯದಲ್ಲಿದ್ದೇನೆ ದಯವಿಟ್ಟು ನನ್ನನ್ನು ನಿಮ್ಮ ಸಹೋದರಿ ಎಂದು ಪರಿಗಣಿಸಿ, ಬಂದು ನನ್ನನ್ನು ರಕ್ಷಿಸಿ ಎಂದು ಸಂದೇಶ ರವಾನಿಸಿದ್ದಳು.

ಹುಮಾಯೂನ್‌ಗೆ ಇದು ಏನೆಂದು ತಿಳಿಯಲಿಲ್ಲ. ಏನೆಂದು ವಿಚಾರಿಸಿದಾಗ, ಸ್ಥಳೀಯರು ‘ಇದು ಸಹೋದರನಿಗೆ ಸಹೋದರಿಯ ಕರೆ’ ಎಂದು ಹೇಳಿದರು. ಇದು ಭೂಮಿಯ ಸಂಪ್ರದಾಯವಾಗಿದೆ ಎಂದರು. ಚಕ್ರವರ್ತಿ, ನಾನು ರಾಣಿ ಕರ್ಣಾವತಿಗೆ ಸಹಾಯ ಮಾಡುತ್ತೇನೆ ಎಂದು ದೆಹಲಿಯಿಂದ ಹೊರಟರು. ಆದರೆ ಸಮಯಕ್ಕೆ ಅಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ. ಅಷ್ಟೊತ್ತಿಗಾಗಲೇ ಕರ್ಣಾವತಿ ನಿಧನರಾಗಿದ್ದರು. ನೀವು ತೊಂದರೆಯಲ್ಲಿದ್ದಾಗ, ಯಾರಾದರೂ ಬಂದು ನನಗೆ ಸಹಾಯ ಮಾಡಬೇಕು ಎಂಬ ಅರ್ಥವನ್ನು ಆ ದಾರ ಸೂಚಿಸುತ್ತದೆ. ಇದು ಬಹಳಷ್ಟು ಅರ್ಥಪೂರ್ಣವಾಗಿದೆ. ಅಲ್ಲಿಂದ ರಕ್ಷಾ ಬಂಧನವೆಂಬ ಹಬ್ಬ ಆರಂಭವಾಯಿತು ಎಂಬರ್ಥದಲ್ಲಿ ಹೇಳಿಕೆ ನೀಡುವ ಮೂಲಕ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ವಿವಾದಕ್ಕಿಡಾಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಟೀಕೆ ಎದುರಾಗಿತ್ತು.

ಈ ಬಗ್ಗೆ ಸುಧಾ ಮೂರ್ತಿ ಸ್ಪಷ್ಟನೆ ನೀಡಿದ್ದು, ರಕ್ಷಾ ಬಂಧನದಂದು ನಾನು ಹಂಚಿಕೊಂಡ ಕಥೆಯು ಹಬ್ಬಕ್ಕೆ ಸಂಬಂಧಿಸಿದ ಅನೇಕ ಕಥೆಗಳಲ್ಲಿ ಒಂದಾಗಿದೆ. ಆದರೆ, ಅದಕ್ಕೆ ನಾನಾ ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಈ ರೀತಿ ನನಗೆ ಹಿಂದೆಂದೂ ಅನುಭವವಾಗಿರಲಿಲ್ಲ. ಖಂಡಿತವಾಗಿಯೂ ಇದೊಂದೇ ಮೂಲಕತೆಯಲ್ಲ. ಈ ಬಗ್ಗೆ ನಾನು ವೀಡಿಯೊದಲ್ಲಿ ಉಲ್ಲೇಖಿಸಿದ್ದೇನೆ. “ಇದು ಈಗಾಗಲೇ ಭೂಮಿಯ ಸಂಪ್ರದಾಯವಾಗಿತ್ತು. ನಾನು ಬೆಳೆದ ಪರಿಸರದ ಅನೇಕ ಕಥೆಗಳಲ್ಲಿ ಒಂದನ್ನು ರಕ್ಷಾ ಬಂಧನದ ಹಿಂದಿನ ಸುಂದರವಾದ ಸಂಕೇತದ ಬಗ್ಗೆ ಹೈಲೈಟ್ ಮಾಡುವುದು ನನ್ನ ಉದ್ದೇಶವಾಗಿತ್ತು.” ಎಂದಿದ್ದಾರೆ.

https://x.com/SmtSudhaMurty/status/1825533855593279771?t=XMRX6C7e8qreWp2CMzQCAw&s=08

Leave A Reply

Your email address will not be published.